ಸುಶಾಂತ್ ಸಿಂಗ್ ಗೆಳೆಯ ಗಣೇಶ್ ಮೇಲೆ ಗಂಭೀರ ಹಲ್ಲೆ
ನಟ ಸುಶಾಂತ್ ಸಿಂಗ್ ಆಪ್ತ ಗೆಳೆಯ, ನೃತ್ಯ ನಿರ್ದೇಶಕ ಗಣೇಶ್ ಹಿವಾರ್ಕರ್ ಮೇಲೆ ಅಗಂತುಕ ಗುಂಪೊಂದು ಭೀಕರ ಹಲ್ಲೆ ಮಾಡಿದೆ.
ಹಲ್ಲೆ ನಂತರದ ಚಿತ್ರಗಳನ್ನು ಗಣೇಶ್ ಹಿವಾರ್ಕರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಗಣೇಶ್ ಅವರ ಡಾನ್ಸ್ ಅಕಾಡೆಮಿಯ ರೂಮ್‌ನಲ್ಲಿ ರಕ್ತ ಬಹುವಾಗಿ ಚೆಲ್ಲಿರುವುದು ಕಾಣುತ್ತಿದೆ.
ನಿನ್ನೆ (ಜನವರಿ 07) ರಂದು ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಹಲ್ಲೆಯ ನಂತರದ ಚಿತ್ರಗಳನ್ನು ಗಣೇಶ್ ಅವರ ಖಾತೆಯಿಂದ ಗಣೇಶ್ ಗೆಳೆಯ ನವೀನ್ ಎಂಬುವರು ಹಂಚಿಕೊಂಡಿದ್ದಾರೆ.

'ನನಗೆ ಕರೆ ಮಾಡಿ ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದು. ಸುಶಾಂತ್ ಸಿಂಗ್ ವಿರುದ್ಧವಾಗಿ ಏನಾದರೂ ಪೋಸ್ಟ್‌ಗಳು ಬಂದರೆ ಅವನ್ನು ನಿರ್ಲಕ್ಷಿಸುವಂತೆ ನಿನ್ನ ಖಾತೆಯಿಂದ ಪೋಸ್ಟ್ ಮಾಡು' ಎಂದು ಗಣೇಶ್ ನನಗೆ ಹೇಳಿದ್ದರು. ನಾನು ಅಕಾಡೆಮಿಗೆ ಬರುವ ವೇಳೆಗೆ ಗಣೇಶ್ ಮೇಲೆ ಹಲ್ಲೆ ಆಗಿತ್ತು, ಅವರ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳು ನಿಷ್ಕ್ರಿಯಗೊಳ್ಳುವ ಸಾಧ್ಯತೆ ಇದೆ' ಎಂದು ನವೀನ್, ಗಣೇಶ್ ಅವರ ಟ್ವಿಟ್ಟರ್ ಖಾತೆಯಿಂದ ಬರೆದಿದ್ದಾನೆ.
ಗಣೇಶ್, ಸುಶಾಂತ್ ರ ಆಪ್ತ ಗೆಳೆಯರಲ್ಲೊಬ್ಬರಾಗಿದ್ದರು. ಸುಶಾಂತ್ ಸಾವನ್ನಪ್ಪಿದ ನಂತರ 'ಜಸ್ಟಿಸ್ ಫಾರ್ ಸುಶಾಂತ್' ಅಭಿಯಾನದಲ್ಲಿ ಮುನ್ನೆಲೆಯಲ್ಲಿದ್ದರು. ಸುಶಾಂತ್ ರ ಕಳೆದ ಹುಟ್ಟುಹಬ್ಬದಂದು ಕಾರ್ಯಕ್ರಮವನ್ನೂ ಮಾಡಿದ್ದರು.
ಸುಶಾಂತ್ ಸಿಂಗ್ ಪರವಾಗಿ ಪ್ರತಿಭಟನೆ ಮೆರವಣಿಗೆಗಳನ್ನು ಸಹ ಗಣೇಶ್ ಆಯೋಜಿಸಿದ್ದರು. ಆ ಸಮಯದಲ್ಲಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದ ಗಣೇಶ್, ನನಗೆ ದುಬೈನಿಂದ ಬೆದರಿಕೆ ಕರೆಗಳು ಬರುತ್ತಿವೆ. ನಾನು ಪ್ರತಿ 7 ಗಂಟೆಗೆ ಒಮ್ಮೆ ನನ್ನ ಸ್ಥಳ ಬದಲಾಯಿಸುತ್ತಿದ್ದೇನೆ. ಏನೇ ಆದರು ಸುಶಾಂತ್ ಪರವಾಗಿ ನಾನು ಹೋರಾಡುತ್ತೇನೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಅನ್ನು ಅವರು ಕಳೆದ ನವೆಂಬರ್ ತಿಂಗಳಲ್ಲಿ ಮಾಡಿದ್ದರು.
Recommended Video
ಸುಶಾಂತ್ ಸಾವಿನ ಸಂದರ್ಭದಲ್ಲಿ ಮಾತನಾಡಿದ್ದ ಗಣೇಶ್, 'ನನಗೆ ಒಬ್ಬ ಹುಡುಗಿ ಪ್ರೀತಿಯಲ್ಲಿ ಮೋಸ ಮಾಡಿದ್ದಳು. ನಾನು ಸಾಯಲು ನಿರ್ಧರಿಸಿದ್ದೆ, ಆದರೆ ಸುಶಾಂತ್ ನನಗೆ ಧೈರ್ಯ ತುಂಬಿದ್ದ' ಎಂದು ಹೇಳಿದ್ದರು.


Click it and Unblock the Notifications











