twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ ನಂಟು: ಸುಶಾಂತ್ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಬಂಧನ

    |

    ಸುಶಾಂತ್ ಸಿಂಗ್ ಸಾವಿಗೂ ಮಾದಕ ವಸ್ತು ಬಳಕೆ ಹಾಗೂ ಮಾಫಿಯಾಕ್ಕೂ ಸಂಬಂಧವಿರುವ ಗುಮಾನಿಯ ಮೇಲೆ ತನಿಖೆ ನಡೆಯುತ್ತಿದ್ದು, ತನಿಖೆಯ ಭಾಗವಾಗಿ ಸುಶಾಂತ್ ಸಿಂಗ್ ಮಾಜಿ ಮ್ಯಾನೇಜರ್ ಸ್ಯಾಮ್ಯುಯೆಲ್ ಮಿರಾಂಡಾ ಎಂಬುವರನ್ನು ಎನ್‌ಸಿಬಿ ತಂಡವು ಬಂಧಿಸಿದೆ.

    Recommended Video

    Sanjjanaa Galrani ಮಾಧ್ಯಮದವರ ಮೇಲೆ ಗರಂ ಆಗಿದ್ದೇಕೆ ? | Filmibeat Kannada

    ಸ್ಯಾಮ್ಯುಯೆಲ್ ಮಿರಾಂಡ, ಸುಶಾಂತ್ ಸಿಂಗ್‌ ರ ನಿವಾಸದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ಡ್ರಗ್ ಪೆಡ್ಲರ್‌ಗಳೊಂದಿಗೆ ಸಂಪರ್ಕ ಇತ್ತು ಎಂಬ ಆರೋಪದಡಿ, ಮಿರಾಂಡಾ ಮನೆಯಲ್ಲಿ ಶೋಧ ನಡೆಸಿದ್ದು, ಆತನನ್ನೂ ಬಂಧಿಸಲಾಗಿದೆ.

    ರಿಯಾ ಚಕ್ರವರ್ತಿಯನ್ನು ಈಗಾಗಲೇ ಎನ್‌ಸಿಬಿ ವಿಚಾರಣೆ ನಡೆಸಿದ್ದು ಆಕೆಯ ಮಾಹಿತಿ ಹಾಗೂ ವಾಟ್ಸ್‌ಆಪ್ ಚಾಟ್ ಆಧಾರದ ಮೇಲೆಯೇ ಸ್ಯಾಮ್ಯುಯೆಲ್ ಮಿರಾಂಡಾ ಅನ್ನು ಬಂಧಿಸಲಾಗಿದೆ. ಈವರೆಗೆ ಸುಶಾಂತ್ ಪ್ರಕರಣದ ಡ್ರಗ್‌ ಕೋನದ ತನಿಖೆಯಲ್ಲಿ ಐವರನ್ನು ಬಂಧಿಸಲಾಗಿದೆ.

    ರಿಯಾಳ ಮುಂಬೈ ನಿವಾಸ ಶೋಧ

    ರಿಯಾಳ ಮುಂಬೈ ನಿವಾಸ ಶೋಧ

    ರಿಯಾ ಚಕ್ರವರ್ತಿ ಯ ಮುಂಬೈ ನಿವಾಸವನ್ನೂ ಸಹ ಎನ್‌ಸಿಬಿ ತಂಡ ಶೋಧ ನಡೆಸಿದೆ. ಶೋಧ ಕಾರ್ಯದ ನಂತರ ರಿಯಾ ಸಹೋದರ, ಶೋವಿಕ್‌ನನ್ನು ವಿಚಾರಣೆಗೆಂದು ಎನ್‌ಸಿಬಿ ಕರೆದುಕೊಂಡು ಹೋಗಿದೆ. ಆತನನ್ನೂ ಸಹ ಬಂಧಿಸುವ ಸಾಧ್ಯತೆ ಇದೆ.

    ಸುಶಾಂತ್ ಸಾವಿಗೂ ಡ್ರಗ್ ಮಾಫಿಯಾಗೂ ಸಂಬಂಧ?

    ಸುಶಾಂತ್ ಸಾವಿಗೂ ಡ್ರಗ್ ಮಾಫಿಯಾಗೂ ಸಂಬಂಧ?

    ಸುಶಾಂತ್ ಸಾವಿಗೂ ಡ್ರಗ್ ಮಾಫಿಯಾಗೂ ಸಂಬಂಧವಿದೆಯೇ ಎಂಬ ಅನುಮಾನ ಇತ್ತೀಚೆಗೆ ಎದ್ದಿದ್ದು. ಸುಶಾಂತ್ ಸಾವಿನ ಪ್ರಕರಣದಲ್ಲಿ ಮಾದಕ ವಸ್ತು ಬಳಕೆ ಕೋನದಿಂದ ತನಿಖೆ ಚುರುಕಾಗಿದೆ. ಈ ತನಿಖೆಯನ್ನು ಎನ್‌ಸಿಬಿ ಮಾಡುತ್ತಿದೆ. ಇದೇ ತನಿಖೆಯ ಭಾಗವಾಗಿ ಕನ್ನಡ ಚಿತ್ರರಂಗದ ಕೆಲವರಿಗೂ ಮಾದಕ ವ್ಯಸನವಿರುವುದು ಬೆಳಕಿಗೆ ಬಂದಿದೆ.

    ಸಾಯುವ ದಿನ ಡ್ರಗ್ ಪೆಡ್ಲರ್ ಅನ್ನು ಭೇಟಿಯಾಗಿದ್ದರೇ ಸುಶಾಂತ್

    ಸಾಯುವ ದಿನ ಡ್ರಗ್ ಪೆಡ್ಲರ್ ಅನ್ನು ಭೇಟಿಯಾಗಿದ್ದರೇ ಸುಶಾಂತ್

    ಸುಶಾಂತ್ ಸಿಂಗ್‌ ಗೆ ಮಾದಕ ವ್ಯಸನವಿತ್ತು ಎಂದು ಕೆಲವರು ಆರೋಪಿಸಿದ್ದಾರೆ. ಸುಶಾಂತ್ ಸಾಯುವ ದಿನ ಆತ ಡ್ರಗ್ ಪೆಡ್ಲರ್ ಒಬ್ಬನನ್ನು ಭೇಟಿಯಾಗಿದ್ದ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯನ್ ಸ್ವಾಮಿ ಆರೋಪಿಸಿದ್ದರು.

    ಸಿಬಿಐ ತನಿಖೆ ನಡೆಸುತ್ತಿದೆ

    ಸಿಬಿಐ ತನಿಖೆ ನಡೆಸುತ್ತಿದೆ

    ರಿಯಾ ಚಕ್ರವರ್ತಿ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದು, ಅದೂ ಸಹ ತನಿಖೆ ನಡೆಸುತ್ತಿದೆ. ಮುಂಬೈ ಪೊಲೀಸರು ಸಹ ಪ್ರಕರಣದ ತನಿಖೆ ನಡೆಸಿದ್ದಾರೆ. ಮಾದಕ ವಸ್ತು ಕೋನದಿಂದ ಎನ್‌ಸಿಬಿಯೂ ಸಹ ತನಿಖೆ ನಡೆಸುತ್ತಿದೆ.

    English summary
    Late actor Sushant Singh's house manager Samuel Miranda arrested by NCB today. Rhea Chakraborthy's brother also taken for questioning.
    Friday, September 4, 2020, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X