ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?
ಸುಶಾಂತ್ ಸಿಂಗ್ ಅಭಿನಯದ ಕೊನೆಯ ಸಿನಿಮಾ 'ದಿಲ್ ಬೇಚಾರಾ' ಬಿಡುಗಡೆ ಆಗಿ ಮೂರು ದಿನವಾಗಿದೆ. ಒಟಿಟಿ ಫ್ಲಾಟ್‌ಫಾರಂ ನಲ್ಲಿ ಬಿಡುಗಡೆಯಾದ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ.
Recommended Video
ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನ ಒಟಿಟಿಯಲ್ಲಿ ನೋಡಿದ ಭಾರತದ ಮೊಟ್ಟ ಮೊದಲ ಸಿನಿಮಾ 'ದಿಲ್ ಬೇಚಾರಾ' ಎಂಬ ಗೌರವ ಸುಶಾಂತ್ ನಟನೆಯ ಈ ಸಿನಿಮಾಕ್ಕೆ ಧಕ್ಕಿದೆ.
ಸುಶಾಂತ್ ಸಿಂಗ್ ಕಷ್ಟಪಟ್ಟು ಸಿನಿಮಾರಂಗದಲ್ಲಿ ಮೇಲೆ ಬಂದವರು. ಸಾಮಾನ್ಯ ಕುಟುಂಬದಿಂದ ಬಂದ ಅವರಿಗೆ ಎಲ್ಲರಂತೆ ಸಿನಿಮಾ ಸ್ಟಾರ್‌ಗಳೆಂದರೆ ಎಲ್ಲಿಲ್ಲದ ಅಭಿಮಾನ. ತಾವು ಸ್ಟಾರ್ ಆದರೂ ಸಹ ಕೆಲವು ನಟರ ಬಗ್ಗೆ ಅವರ ಅಭಿಮಾನ ಕಡಿಮೆಯಾಗಿರಲಿಲ್ಲ. ಅವರು ತಮ್ಮ ಕೊನೆಯ ಸಿನಿಮಾದಲ್ಲೂ ಸಹ ತಮ್ಮ ನೆಚ್ಚಿನ ಸ್ಟಾರ್‌ಗಳಿಗೆ ಗೌರವ ಸಲ್ಲಿಸಿ ಹೋಗಿದ್ದಾರೆ.

ರಜನೀಕಾಂತ್ ಗೆ ಅಭಿಮಾನದ ಗೌರವ
ದಿಲ್ ಬೇಚಾರಾ ಸಿನಿಮಾದಲ್ಲಿ ಮ್ಯಾನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶಾಂತ್, ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಅವರ ದೊಡ್ಡ ಅಭಿಮಾನಿ. ಅವರ ಎಂಟ್ರಿ ಆಗುವುದೇ ರಜನೀಕಾಂತ್ ಹಾಡಿನೊಂದಿಗೆ. ಕ್ಯಾನ್ಸರ್ ನೋವಿನಿಂದ ನರಳುವಾಗಲೂ ಅವರು ರಜನೀಕಾಂತ್ ಸಿನಿಮಾ ನೋಡಲು ಹೋಗಿರುತ್ತಾರೆ. ಆ ದೃಶ್ಯ ಎಂಥಹವರಿಗೂ ಕಣ್ಣಲ್ಲಿ ನೀರು ತರಿಸದೇ ಇರದು.

ಶಾರುಖ್ ಖಾನ್ ನ ದೊಡ್ಡ ಅಭಿಮಾನಿ ಸುಶಾಂತ್
ಶಾರುಖ್ ಖಾನ್ ಅವರ ದೊಡ್ಡ ಫ್ಯಾನ್ ಸುಶಾಂತ್, ಇದನ್ನು ಕೆಲವು ಕಾರ್ಯಕ್ರಮಗಳಲ್ಲಿಯೂ ಹೇಳಿಕೊಂಡಿದ್ದರು. ದಿಲ್ ಬೇಚಾರಾ ಸಿನಿಮಾದಲ್ಲಿ ಅಲ್ಲಲ್ಲಿ ಶಾರುಖ್ ಖಾನ್ ಅವರನ್ನು ನಕಲು ಮಾಡುವ ಪ್ರಯತ್ನ ಮಾಡುತ್ತಾರೆ ಸುಶಾಂತ್. ಶಾರುಖ್ ಅವರ ಖ್ಯಾತ ಸಿನಿಮಾ ಡಿಡಿಎಲ್‌ಜೆ ಸಿನಿಮಾದ ನಕಲು ಸಿನಿಮಾದಲ್ಲಿದ್ದು ಸುಶಾಂತ್ ಅದರಲ್ಲಿ ಶಾರುಖ್ ಆಗಿದ್ದಾರೆ.

ಮನೋಜ್ ತಿವಾರಿ-ರವಿ ಕಿಶನ್
ಸುಶಾಂತ್ ಸಿಂಗ್ ಬಿಹಾರದವರು. ಅಲ್ಲಿನ ಭೋಜ್‌ಪುರಿ ಸಿನಿಮಾಗಳ ಫ್ಯಾನ್ ಅವರು. ಭೋಜ್‌ಪುರಿ ಸಿನಿಮಾದ ಸ್ಟಾರ್ ಮನೋಜ್ ತಿವಾರಿ ಅವರ ಉಲ್ಲೇಖ ಮಾಡುತ್ತಾರೆ ಸುಶಾಂತ್. 'ನಾನು ಮನೋಜ್ ತಿವಾರಿ ಅಥವಾ ರವಿ ಕಿಶನ್ ಆಗುತ್ತೇನೆ' ಎನ್ನುತ್ತಾರೆ ಸುಶಾಂತ್. ಆ ಮೂಲಕ ಮನೋಜ್ ತಿವಾರಿ ಹಾಗೂ ರವಿ ಕೃಷ್ಣ ಗೆ ತಮ್ಮ ಅಭಿಮಾನ ಸಲ್ಲಿಸುತ್ತಾರೆ.

ಬಾಸ್ಕೆಟ್‌ಬಾಲ್ ಆಟಗಾರ ರಿಗಿ ಮಿಲ್ಲರ್
ದಿಲ್ ಬೇಚಾರಾ ಸಿನಿಮಾದ ಮೊದಲ ಹಾಡಿನಲ್ಲಿ ಸುಶಾಂತ್ ಸಿಂಗ್ ಟೀ-ಶರ್ಟ್ ಒಂದನ್ನು ಧರಿಸಿದ್ದಾರೆ ಅದರ ಮೇಲೆ 'ಕೊಲಂಬಿಯಾ 31' ಎಂದಿದೆ. ಇದು ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ರಿಗಿ ಮಿಲ್ಲರ್ ಬಳಸುತ್ತಿದ್ದ ಟೀ-ಶರ್ಟ್. ರಿಗಿ ಮಿಲ್ಲರ್ ಸತತ 18 ವರ್ಷ ಎನ್‌ಬಿಎ ಗಾಗಿ ಆಡಿದ್ದ ಬಹಳ ಪ್ರಖ್ಯಾತ ಆಟಗಾರ.


Click it and Unblock the Notifications











