ಪ್ರಧಾನಿ ಮೋದಿಗೆ ಬಹಿರಂಗ ಪತ್ರ ಬರೆದ ಸುಶಾಂತ್ ಸಹೋದರಿ ಶ್ವೇತಾ ಸಿಂಗ್
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣ ಸಾಕಷ್ಟು ಗೊಂದಲವನ್ನು ನಿರ್ಮಾಣ ಮಾಡಿದೆ. ಸುಶಾಂತ್ ಆತ್ಮಹತ್ಯೆಯ ಹಿಂದೆ ಯಾರ ಕೈವಾಡವಿದೆ, ಆತ್ಮಹತ್ಯೆಗೆ ಪ್ರಚೋದನೆ ಮಾಡಿದವರ್ಯಾರು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಈ ಪ್ರಕರಣ ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಬಾಲಿವುಡ್ ನಲ್ಲಿ ಈಗಾಗಲೆ ಸಾಕಷ್ಟು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಇನ್ನೂ ಸಾಕಷ್ಟು ಮಂದಿಯ ವಿಚಾರಣೆಯನ್ನು ನಡೆಸುವ ಸಾಧ್ಯತೆ ಇದೆ. ಈ ನಡುವೆ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದಾರೆ. "ನಾನು ಸುಶಾಂತ್ ಸಿಂಗ್ ಸಹೋದರಿ. ಈ ಪ್ರಕರಣದ ಬಗ್ಗೆ ತುರ್ತಾಗಿ ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಭಾರತದ ನ್ಯಾಯಾಂಗ ವ್ಯವಸ್ತೆ ಮೇಲೆ ನನಗೆ ನಂಬಿಕೆ ಇದೆ" ಎಂದು ಹೇಳಿದ್ದಾರೆ.
ಪ್ರಧಾನಿಗೆ ಬರೆದ ಪತ್ರದಲ್ಲಿ "ಡಿಯರ್ ಸರ್, ನೀವು ಸತ್ಯದ ಪರ ನಿಂತಿರುವಿರಿ ಎಂದು ನನ್ನ ಮನಸ್ಸು ಹೇಳುತ್ತಿದೆ. ನಾವು ತುಂಬಾ ಸರಳ ಕುಟುಂಬದಿಂದ ಬಂದವರು. ನನ್ನ ತಮ್ಮ ಯಾವುದೇ ಗಾಡ್ ಫಾದರ್ ಇಲ್ಲದೆ ಬಾಲಿವುಡ್ ಗೆ ಬಂದಿದ್ದಾನೆ. ನೀವು ಕೂಡಲೆ ಈ ಪ್ರಕರಣದ ಬಗ್ಗೆ ಗಮನ ಹರಿಸಬೇಕು ಎಂಬುದು ನನ್ನ ಮನವಿ. ಯಾವುದೆ ಸಾಕ್ಷಿ ನಾಶ ಆಗಲು ಅವಕಾಶ ಕೊಡಬೇಡಿ. ನ್ಯಾಯ ಮೇಲುಗೈ ಸಾಧಿಸುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದೀನಿ" ಎಂದು ಶ್ವೇತ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ.

ಈ ಹಿಂದೆ ರಿಯಾ ಚಕ್ರವರ್ತಿ ಸುಶಾಂತ್ ನಿಂಗ್ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದರು. ಇದೀಗ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಸಿಂಗ್ ತಂದೆ ದೂರು ದಾಖಲಿಸಿದ್ದಾರೆ. ರಿಯಾ ವಿರುದ್ಧ ಸುಶಾಂತ್ ಕುಟುಂಬದವರು ಗಂಭೀರ ಆರೋಪ ಮಾಡುತ್ತಿದ್ದಾರೆ. ಪೊಲೀಸರು ರಿಯಾ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ.


Click it and Unblock the Notifications











