ಸುಶಾಂತ್ ಸಿಂಗ್ ಒಳಾಂಗಗಳ ಪರೀಕ್ಷಾ ವರದಿ ಹೇಳುತ್ತಿರುವುದೇನು?
ನಟ ಸುಶಾಂತ್ ಸಿಂಗ್ ಆತ್ಮಹತ್ಯೆಯ ಸುತ್ತಾ ಹಲವಾರು ಅನುಮಾನುಗಳು ಮೂಡಿದ್ದವು. ಕೆಲವರು ಇದನ್ನು ಕೊಲೆಯೆಂದು ಅನುಮಾನಿಸಿದರೆ, ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರಿಪಸಲಾಗಿತ್ತು ಎಂದು ಇನ್ನು ಕೆಲವರು ಅನುಮಾನಿಸಿದ್ದರು.
Recommended Video
ಹೈಫ್ರೊಫೈಲ್ ಪ್ರಕರಣ ಇದಾಗಿದ್ದ ಕಾರಣ, ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆಯ ಜೊತೆಗೆ ಒಳಾಂಗಗಳ ಪರೀಕ್ಷೆ (ವಿಸ್ಸೆರಾ) ಸಹ ಮಾಡಲಾಗಿತ್ತು.
ಸುಶಾಂತ್ ಸಿಂಗ್ ದೇಹದ ಒಳಾಂಗಗಳ ಸೂಕ್ಷ್ಮ ಪರೀಕ್ಷೆ ಮಾಡಲಾಗಿದ್ದು, ಅದರ ವರದಿ ಇದೀಗ ಬಂದಿದೆ. ಸುಶಾಂತ್ ಅವರದ್ದು ಆತ್ಮಹತ್ಯೋ ಕೊಲೆಯ ಅನುಮಾನಕ್ಕೆ ಈ ಪರೀಕ್ಷಾ ವರದಿ ಪೂರ್ಣ ವಿರಾಮವಿಟ್ಟಿದೆ.

ವಿಸ್ಸೆರಾ ಪರೀಕ್ಷಾ ವರದಿ
ಸುಶಾಂತ್ ಸಿಂಗ್ ಮೃತದೇಹದ ವಿಸ್ಸೆರಾ ವರದಿ ಪ್ರಕಾರ ಸುಶಾಂತ್ ಸಾವು ಆತ್ಮಹತ್ಯೆಯಿಂದಲೇ ಆಗಿದೆಯಂತೆ. ಸುಶಾಂತ್ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ವರದಿ ಹೇಳುತ್ತಿದೆ.

ಸ್ಪಷ್ಟತೆಗಾಗಿ ಇನ್ನೊಂದಿಷ್ಟು ಪರೀಕ್ಷೆ
ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷಾ ವರದಿಯು ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಿಂದಲೇ ಆಗಿದೆಯೆಂದು ಈಗಾಗಲೇ ಸ್ಪಷ್ಟಪಡಿಸಿತ್ತು. ಆದರೆ ಹೆಚ್ಚಿನ ಸ್ಪಷ್ಟತೆಗಾಗಿ ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಲಾಗಿತ್ತು.

ಉಗುರು ಮತ್ತು ಹೊಟ್ಟೆಯ ಭಾಗಗಳ ಪರೀಕ್ಷೆ
ಬಲವಂತದ ಉಸಿರುಗಟ್ಟಿಸುವಿಕೆ ನಡೆದಿರಬಹುದಾದ ಅನುಮಾನದ ಮೇರೆಗೆ ಸುಶಾಂತ್ ಅವರ ಉಗುರು, ಹೊಟ್ಟೆ ಭಾಗಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಅದರ ವರದಿ ಇನ್ನಷ್ಟೆ ಬರಬೇಕಿದೆ.

37 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 37 ಮಂದಿಯನ್ನು ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಕರಣ್ ಜೋಹರ್‌ನ ಧರ್ಮಾ ಪ್ರೊಡಕ್ಷನ್‌ನ ಸಿಇಒ ಮಂಗಳವಾರ ಹೇಳಿಕೆಯನ್ನು ನೀಡಲಿದ್ದಾರೆ. ಇಂದು ಮಹೇಶ್ ಭಟ್ ಹೇಳಿಕೆ ನೀಡಿದ್ದಾರೆ.


Click it and Unblock the Notifications











