ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ದಿನ ನಿಜಕ್ಕೂ ನಡೆದಿದ್ದೇನು?: ಸಂಪೂರ್ಣ ಮಾಹಿತಿ ಬಿಚ್ಚಿಟ್ಟ ಅಡುಗೆಯವರು

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಕೆ ಇನ್ನೂ ಮುಗಿದಿಲ್ಲ. ಸುಶಾಂತ್ ನಿಧನ ಹೊಂದಿ ಎರಡು ತಿಂಗಳಾಗುತ್ತಾ ಬಂತು, ಆದರೂ ಆತ್ಮಹತ್ಯೆಗೆ ನಿಖರ ಕಾರಣವೇನು ಎನ್ನುವುದು ಬಹಿರಂಗವಾಗಿಲ್ಲ. ಸುಶಾಂತ್ ಸಿಂಗ್ ಆತ್ಮಹತ್ಯೆಯ ನಿಖರ ಕಾರಣವೇನು ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೆ ಬಾಲಿವುಡ್ ನಲ್ಲಿ ಸಾಕಷ್ಟು ಮಂದಿಯನ್ನು ವಿಚಾರಣೆ ಮಾಡಿದ್ದಾರೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಮೇಲೆ ಸಾಕಷ್ಟು ಅನುಮಾನ ಕಾಡುತ್ತಿದೆ. ಈ ನಡುವೆ ಸುಶಾಂತ್ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ನೀರಜ್ ಸಿಂಗ್ ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಖಾಸಗಿ ವಾಹಿನಿ ಜೊತೆ ಮಾತನಾಡಿದ ನೀರಜ್ ಸಿಂಗ್, ಸುಶಾಂತ್ ಸಾವಿನ ಹಿಂದಿನ ದಿನ ಮತ್ತು ಸಾಯುವ ಮೊದಲು ಸುಶಾಂತ್ ಹೇಗಿದ್ದರು, ಏನು ತಿಂದಿದ್ದರು, ಯಾರ ಜೊತೆ ಮಾತನಾಡಿದ್ದರು, ಜೂನ್ 14 ನಿಖರವಾಗಿ ಏನಾಯಿತು ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ..

ಸುಶಾಂತ್ ಮನೆಯಲ್ಲಿ ಇದ್ದರು ಇಬ್ಬರು ಅಡುಗೆಯವರು

ಸುಶಾಂತ್ ಮನೆಯಲ್ಲಿ ಇದ್ದರು ಇಬ್ಬರು ಅಡುಗೆಯವರು

ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಮುಂಬೈನ ಬಾಂದ್ರಾ ಮನೆಯಲ್ಲಿ ನೀರಜ್ ಸಿಂಗ್ ಮತ್ತು ಕೇಶವ್ ಬಾಚ್ನರ್ ಇಬ್ಬರು ಅಡುಗೆಯವರು ಇದ್ದರು. ದೀಪೇಶ್ ಸಾವಂತ್ ಎನ್ನುವವರು ಮನೆಗೆಲಸ ಮಾಡುತ್ತಿದ್ದರು. ಜೊತೆಗೆ ಸುಶಾಂತ್ ಸಿಂಗ್ ಸ್ನೇಹಿತ ಸಿದ್ಧಾರ್ಥ್ ಪಿಥಾನಿ ಮನೆಯ ಮತ್ತೊಂದು ಕೋಣೆಯಲ್ಲಿ ವಾಸವಾಗಿದ್ದರಂತೆ.

ಸುಶಾಂತ್ ಜೊತೆ ತುಂಬ ಜನ ವಾಸಿಸುತ್ತಿದ್ದರು

ಸುಶಾಂತ್ ಜೊತೆ ತುಂಬ ಜನ ವಾಸಿಸುತ್ತಿದ್ದರು

ಅಡುಗೆ ಮಾಡುತ್ತಿದ್ದ ನೀರಜ್ 2019 ಮೇ ತಿಂಗಳಿಂದ ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನೀರಜ್ ಹೇಳುವ ಪ್ರಕಾರ ಸುಶಾಂತ್ ಮನೆಯಲ್ಲಿ ಮೊದಲು ಕನಿಷ್ಠ 10 ರಿಂದ 12 ವಾಸಿಸುತ್ತಿದ್ದರಂತೆ. ನಂತರ ಕೆಲವರನ್ನು ತೆಗೆದು ಹಾಕಿರುವುದಾಗಿ ಹೇಳಿದ್ದಾರೆ. ನಂತರ ರಿಯಾ ಚಕ್ರವರ್ತಿ ಕೆಲವರನ್ನು ಹೊರಹೋಗುವಂತೆ ಹೇಳಿದ್ದಾರಂತೆ.

ರಿಯಾ ಹೋದ ಬಳಿಕ ಕೆಲ ಸಮಯ ಸುಶಾಂತ್ ಏನು ತಿಂದಿರಲಿಲ್ಲ

ರಿಯಾ ಹೋದ ಬಳಿಕ ಕೆಲ ಸಮಯ ಸುಶಾಂತ್ ಏನು ತಿಂದಿರಲಿಲ್ಲ

ಸುಶಾಂತ್ ಸಾವಿಗೂ ಕೆಲವು ದಿನಗಳ ಹಿಂದೆ ಅಂದರೆ ಮೂರ್ನಾಲ್ಕು ದಿನಗಳ ಮುಂಚೆ "ಮಧ್ಯಾಹ್ನ 1.30ರ ಸುಮಾರಿಗೆ ರಿಯಾ ಸುಶಾಂತ್ ಮನೆ ಬಿಟ್ಟು ಹೊರಟು ಹೋಗಿದ್ದಾರೆ. ನಂತರ ರಿಯಾ ನನ್ನ ಬಟ್ಟೆಗಳನ್ನು ಪ್ಯಾಕ್ ಮಾಡಲು ನನಗೆ ಹೇಳಿದರು. ರಿಯಾ ಹೋದ ಬಳಿಕ ಸಂಜೆ 5 ಗಂಟೆಗೆ ಸುಶಾಂತ್ ಸಹೋದರಿ ಮೀತು ಸಿಂಗ್ ಮನೆಗೆ ಬಂದರು. ಮೂರು ದಿನಗಳ ಕಾಲ ಸುಶಾಂತ್ ಜೊತೆಯೇ ಇದ್ದರು. ಮೀತು ಸಿಂಗ್ ಜೂನ್ 12 ಅಥವಾ 13ರಂದು ಹೊರಟು ಹೋದರು." ಎಂದು ನೀರಜ್ ಹೇಳಿದ್ದಾರೆ.

ಬೆಳಗ್ಗೆ ಜ್ಯೂಸ್ ಮಾತ್ರ ಸೇವಿಸಿದ್ದ ಸುಶಾಂತ್

ಬೆಳಗ್ಗೆ ಜ್ಯೂಸ್ ಮಾತ್ರ ಸೇವಿಸಿದ್ದ ಸುಶಾಂತ್

ಜೂನ್ 13ರ ರಾತ್ರಿ ಸುಶಾಂತ್ ಊಟ ಮಾಡಿಲ್ಲವಂತೆ. ಕೇವಲ ಮಾವಿನ ಹಣ್ಣಿನ ಜ್ಯೂಸ್ ಮಾತ್ರ ಸೇವಿಸಿರುವುದಾಗಿ ನೀರಜ್ ಹೇಳಿದ್ದಾರೆ. " ಜೂನ್ 14 ರಂದು ಬೆಳಗ್ಗೆ ಅವರು ತಮ್ಮ ಕೋಣೆಯಿಂದ ಹೊರಬಂದು ಕೋಲ್ಡ್ ವಾಟರ್ ಕೇಳಿದರು. ಆದರೆ ಅವರು ಆರೋಗ್ಯವಾಗಿರಲಿಲ್ಲ ಜೊತೆಗೆ ತುಂಬಾ ಟೆನ್ಷನ್ ಆಗಿದ್ದರು. ಕೇಶವ್ ಬೆಳಗ್ಗೆಯ ತಿಂಡಿಗೆ ಏನು ಬೇಕು ಎಂದು ಕೇಳಿದರು. ಸರ್ ಎಳನೀರು, ಆರೆಂಜ್ ಜ್ಯೂಸ್ ಮತ್ತು ಬಾಳೆಹಣ್ಣು ಕೇಳಿದರು. ಎಳನೀರು ಮತ್ತು ಆರೆಂಜ್ ಜ್ಯೂಸ್ ಕುಡಿದು ಬಾಳೆಹಣ್ಣು ನಂತರ ತಿನ್ನುವುದಾಗಿ ಹೇಳಿದರು" ಎಂದಿದ್ದಾರೆ.

ಮಧ್ಯಾಹ್ನದ ಊಟಕ್ಕೆ ಎದ್ದೇಳಲೇ ಇಲ್ಲ

ಮಧ್ಯಾಹ್ನದ ಊಟಕ್ಕೆ ಎದ್ದೇಳಲೇ ಇಲ್ಲ

ಕೇಶವ್, ಸರ್ ಊಟಕ್ಕೆ ಏನು ಮಾಡುವುದು ಎಂದು ಕೇಳಿದರು, ಆದರೆ ಯಾವುದೇ ಉತ್ತರ ನೀಡಲಿಲ್ಲ ಎಂದು ನೀರಜ್ ಸಿಂಗ್ ಹೇಳಿದ್ದಾರೆ. ಯಾವುದೆ ಪ್ರತಿಕ್ರಿಯೆ ನೀಡದಿದ್ದಾಗ ಮತ್ತೆ ಮತ್ತೆ ಕರೆಯಲು ಪ್ರಾರಂಭಿಸಿದೆವು ಎಂದಿದ್ದಾರೆ. "ನಂತರ ನಾವು ಅವರ ಸಹೋದರಿ ಮೀತು ಸಿಂಗ್ ಅವರಿಗೆ ತಿಳಿಸಿದೆವು. ಅವರು ಬಾಗಿಲು ತೆರೆಯಲು ಪ್ರಯತ್ನ ಪಡಿ ಎಂದು ಹೇಳಿದರು. ನಾವು ಬಾಗಿಲು ತೆಗೆಯುವ ಲಾಕ್ ಸ್ಮಿತ್ ಗೆ ಕರೆ ಮಾಡಿ ಬಾಗಿಲಿನ ಬೀಗ ಮುರಿಸಿದೆವು. ಅವರು ಬೀಗ ಮುರಿದು ಹೊರಟು ಹೋದರು. ನಂತರ ಸಿದ್ಧಾರ್ಥ್ ಬಾಗಿಲು ತೆರೆದರು. ಬಾಗಿಲು ತೆಗೆದ ಸಿದ್ಧಾರ್ಥ್ ಆಘಾತಕ್ಕೊಳಗಾದರು. ಸುಶಾಂತ್ ದೇಹ ನೇತಾಡುತ್ತಿದ್ದನ್ನು ನೋಡಿದೆವು."

ಕುತ್ತಿಗೆಯಲ್ಲಿ ಮಾರ್ಕ್ ಆಗಿತ್ತು

ಕುತ್ತಿಗೆಯಲ್ಲಿ ಮಾರ್ಕ್ ಆಗಿತ್ತು

ಸಹೋದರಿ ಮೀತು ಸಿಂಗ್ ಸುಶಾಂತ್ ದೇಹವನ್ನು ಕೆಳಗಿಳಿಸಲು ಹೇಳಿದರು. ಸುಶಾಂತ್ ದೇಹ ಕೆಳಗಿಳಿಸುವಷ್ಟೊತ್ತಿಗೆ ಮೀತು ಸಿಂಗ್ ಆಗಮಿಸಿದರು. ನಾವು ಸುಶಾಂತ್ ಎದೆಯನ್ನು ಒತ್ತುವ ಪ್ರಯತ್ನ ಮಾಡಿದೆವು. ಬಟ್ಟೆಯನ್ನು ತೆಗೆದಾಗ ಅವರ ಕುತ್ತಿಗೆಯಲ್ಲಿ ಮಾರ್ಕ್ ಆಗಿತ್ತು." ಎಂದು ಹೇಳಿದ್ದಾರೆ.

ರಿಯಾ ಮತ್ತು ಸುಶಾಂತ್ ಸಂಬಂಧ ಹೇಗಿತ್ತು?

ರಿಯಾ ಮತ್ತು ಸುಶಾಂತ್ ಸಂಬಂಧ ಹೇಗಿತ್ತು?

ರಿಯಾ ಮತ್ತು ಸುಶಾಂತ್ ಸಿಂಗ್ ಸಂಬಂಧ ಬಗ್ಗೆ ಮಾತನಾಡಿದ ನೀರಜ್ "ರಿಯಾ ಚಕ್ರವರ್ತಿ ಮನೆಯಿಂದ ಹೊರಟು ಹೋದ ಬಳಿಕ ಕೆಲವು ಸಮಯ ಸುಶಾಂತ್ ಏನು ತಿಂದಿರಲಿಲ್ಲ. ರಿಯಾ ಸಹೋದರ ಶೋಯಿಕ್ ಮತ್ತು ಇತರ ಸ್ನೇಹಿತರು ಆಗಾಗ ಮನೆಗೆ ಭೇಟಿ ನೀಡುತ್ತಿದ್ದರು ಮೋಜು ಮಾಡುತ್ತಿದ್ದರು" ಎಂದು ನೀರಜ್ ತಿಳಿಸಿದ್ದಾರೆ.

More from Filmibeat

English summary
Sushant Singh's cook Neeraj singh reveals What exactly happened on June 14th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X