ಸುಶಾಂತ್ ಸಿಂಗ್ ಗೆ ವಿಚಿತ್ರ ಧ್ವನಿಗಳು ಕೇಳುತ್ತಿತ್ತು: ಆಪ್ತರು ಹಂಚಿಕೊಂಡ ಆಘಾತಕಾರಿ ಮಾಹಿತಿ
ನಟ ಸುಶಾಂತ್ ಸಿಂಗ್ ರಜಪೂತ್ ನಿನ್ನೆ ಮುಂಬೈನ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಂತೆ ಸುಶಾಂತ್ ಸಿಂಗ್ ನೇಣುಬಿಗಿತದಿಂದಲೇ ಸಾವನ್ನಪ್ಪಿದ್ದಾರೆ.
Recommended Video
ಸುಶಾಂತ್ ಸಿಂಗ್ ಸಾವಿಗೆ ಖಿನ್ನತೆಯೇ ಕಾರಣ ಎಂದು ಬಲವಾಗಿ ಹೇಳಲಾಗುತ್ತಿದ್ದು, ಸುಶಾಂತ್ ಅವರ ಕೆಲವು ಆಪ್ತರು ಸಹ ಇದನ್ನೇ ಹೇಳುತ್ತಿದ್ದಾರೆ.
ಸುಶಾಂತ್ ಸಿಂಗ್ ಅವನ್ನು ಹತ್ತಿರದಿಂದ ನೋಡಿದ, ಸುಶಾಂತ್ ಸಿಂಗ್ ಪರಿಸ್ಥಿತಿಯ ಬಗ್ಗೆ ಗೊತ್ತಿದ್ದ ಬಾಲಿವುಡ್‌ನ ಪ್ರಮುಖ ಸಿನಿಮಾ ಕರ್ಮಿಯೊಬ್ಬರು ಸುಶಾಂತ್ ಸಿಂಗ್ ಗೆ ಇದ್ದ ಸಮಸ್ಯೆ, ಅವರು ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಕೆಲವು ಆಘಾತಕಾರಿ ವಿಷಯಗಳನ್ನು ಅವರು ಹೊರಗೆ ಹಾಕಿದ್ದಾರೆ.
ಸುಶಾಂತ್ ಸಿಂಗ್ ಗೆ ಮಾನಸಿಕ ಕಾಯಿಲೆ ಇತ್ತೆಂದೇ ಬಹುತೇಕರು ಹೇಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸುಶಾಂತ್ ಅವರನ್ನು ಹಾಗೂ ಅವರ ಆಪ್ತರನ್ನು ಹತ್ತಿರದಿಂದ ಬಲ್ಲ ಹಿರಿಯ ಪತ್ರಕರ್ತೆಯೊಬ್ಬರು ಸುಶಾಂತ್ ಗೆ ಇದ್ದ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ.

ಪತ್ರಕರ್ತೆ ಹಂಚಿಕೊಂಡ ಆಘಾತಕಾರಿ ಮಾಹಿತಿ
ಸುಶಾಂತ್ ಸಿಂಗ್ ಬಗ್ಗೆ ಹಿರಿಯ ನಿರ್ದೇಶಕ ಮಹೇಶ್ ಭಟ್ ಅವರು ಹೇಳಿದ ವಿಷಯಗಳನ್ನು ಪತ್ರಕರ್ತೆ ಮಹೇಶ್ ಭಟ್ ಆಪ್ತೆ ಸುಹ್ರಿತಾ ಸೇನ್‌ಗುಪ್ತಾ ಹೇಳಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಗೆ ವಿಚಿತ್ರ ಧ್ವನಿಗಳು ಕೇಳುತ್ತಿದ್ದವು ಎಂಬುಗಾಗಿ ಸುಹ್ರಿತಾ ಹೇಳಿದ್ದಾರೆ.

ಮಹೇಶ್ ಭಟ್‌ಗೆ ಸುಶಾಂತ್ ವಿಷಯ ಗೊತ್ತಿತ್ತು.
ನಿರ್ದೇಶಕ ಮಹೇಶ್ ಭಟ್ ಗೆ ಸುಶಾಂತ್ ಸಿಂಗ್ ಪರಿಸ್ಥಿತಿ ಗೊತ್ತಿತ್ತಂತೆ. ಮಹೇಶ್ ಭಟ್, ದಿವಂಗತ ನಟಿ ಪರ್ವೀನ್ ಬಾಬಿಯಲ್ಲಿ ಅದೇ ಗುಣಗಳನ್ನು ಕಂಡಿದ್ದರಂತೆ. ಹಾಗಾಗಿ ಸುಶಾಂತ್‌ನ ಗರ್ಲ್‌ಫ್ರೆಂಡ್ ರೆಹಾ ಚಕ್ರಬೊರ್ತಿಗೆ ಎಚ್ಚರಿಕೆ ನೀಡಿದ್ದರಂತೆ.

ಅನುರಾಗ್ ಕಶ್ಯಪ್ ಕೊಲ್ಲುತ್ತಾರೆ ಎಂದಿದ್ದರಂತೆ
ಸುಶಾಂತ್ ಒಮ್ಮೆ ಅನುರಾಗ್ ಕಶ್ಯಪ್ ನೀಡಿದ್ದ ಸಿನಿಮಾ ಆಫರ್ ಅನ್ನು ತಿರಸ್ಕರಿಸಿದರಂತೆ. ಆ ನಂತರ ಹಲವು ಬಾರಿ 'ಅನುರಾಗ್ ಸಿನಿಮಾ ನಾನು ಒಪ್ಪಿಕೊಳ್ಳಲಿಲ್ಲ, ಆತ ನನ್ನನ್ನು ಕೊಲ್ಲಲು ಬರುತ್ತಾನೆ' ಎಂದು ಹೇಳಿದ್ದರಂತೆ ಸುಶಾಂತ್! ಸುಶಾಂತ್ ಮಾತುಗಳನ್ನು ಕೇಳಿ ರೆಹಾ ಚಕ್ರೊಬೊರ್ತಿ ಗಾಬರಿಗೊಂಡಿದ್ದಳಂತೆ.

ಮಹೇಶ್ ಭಟ್ ಎಚ್ಚರಿಕೆ ನೀಡಿದ್ದರಂತೆ
ಮಹೇಶ್ ಭಟ್ ಅವರೇ ರೆಹಾ ಗೆ ಎಚ್ಚರವಾಗಿರುವಂತೆ ಹೇಳಿದ್ದರಂತೆ. ಸುಶಾಂತ್ ಸಿಂಗ್ ಪರಿಸ್ಥಿತಿ ದಿನೇ-ದಿನೇ ಕೆಟ್ಟದಾಗಿ ಹೋಗುತ್ತಿರುವಾಗ ರೆಹಾ ಸುಶಾಂತ್ ಅವರ ಸಹೋದರಿಗೆ ಮಾಹಿತಿ ನೀಡಿ, ಸುಶಾಂತ್ ಸಿಂಗ್ ನಿಂದ ದೂರಾಗಿದ್ದಾರೆ.

ಚಿಕಿತ್ಸೆ ನಿಲ್ಲಿಸಿದ ಸುಶಾಂತ್ ಸಿಂಗ್
ಸುಶಾಂತ್ ಗೆ ಸಾಕಷ್ಟು ಸಹಾಯವನ್ನು ರೆಹಾ ಮಾಡಿದಳು, ಆದರೆ ಆತ ಚಿಕಿತ್ಸೆ ತೆಗೆದುಕೊಳ್ಳುವುದನ್ನೇ ಬಿಟ್ಟುಬಿಟ್ಟ, ದಿನೇ ದಿನೇ ಆತನ ಪರಿಸ್ಥಿತಿ ಬಿಗಡಾಯಿಸಿತು. ಆತನ ಮಾತುಗಳು, ವರ್ತನೆಯಲ್ಲಿ ಭಾರಿ ಬದಲಾವಣೆ ಕಾಣಿಸಿಕೊಂಡಿತು ಎಂದು ಸುಹ್ರಿತಾ ಸೇನ್‌ಗುಪ್ತಾ ಹೇಳಿದ್ದರಂತೆ.


Click it and Unblock the Notifications











