For Quick Alerts
  ALLOW NOTIFICATIONS  
  For Daily Alerts

  ಸುಶಾಂತ್​ ಸಿಂಗ್​ ಕೊಲೆಯಾಗಿದ್ದಾನೆ: ಅಮೀರ್​ ಖಾನ್​ ಸಹೋದರನ ಶಾಕಿಂಗ್​ ಹೇಳಿಕೆ

  |

  ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಭಾರತೀಯ ಚಿತ್ರರಂಗವನ್ನೇ ದಿಗ್ಭ್ರಮೆಗೊಳಿಸಿತ್ತು. ಹಿಂದಿ ಚಿತ್ರರಂಗದ ಹ್ಯಾಂಡ್​ಸಮ್​ ಹಂಕ್​ ಆಗಿದ್ದ ಸುಶಾಂತ್​ ಸಿಂಗ್,​ 2020 ಜೂನ್​ 14ರಂದು ಬಾಂದ್ರಾದ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೇವಲ ಬಾಲಿವುಡ್​ ಅಷ್ಟೇ ಅಲ್ಲದೆ ದೇಶದ ಮೂಲೆ ಮೂಲೆಯ ಸುಶಾಂತ್​ ಸಿಂಗ್​ ಅಭಿಮಾನಿಗಳು ಯುವ ನಟನ ದಿಢೀರ್​ ಅಗಲಿಕೆಗೆ ಕಣ್ಣೀರು ಹಾಕಿದ್ದರು.

  ಸುಶಾಂತ್​ ಸಿಂಗ್​ ಸಾವು ಇಂದಿಗೂ ನಿಗೂಢವಾಗಿದ್ದು, ಈ ಬಗ್ಗೆ ಅನೇಕ ವಿಚಾರಗಳು ಆಗಾಗ ಮುಖ್ಯಭೂಮಿಕೆಗೆ ಬಂದು ಹೋಗುತ್ತಿರುತ್ತವೆ. ಮೊದಲು ಸುಶಾಂತ್​ ಸಿಂಗ್ ​ ಸಾವನ್ನು ಆತ್ಮಹತ್ಯೆ ಎಂದು ಕರೆಯಲಾಗಿದ್ದು, ನಟ ಖಿನ್ನತೆಯಿಂದ ಬಳಲುತ್ತಿದ್ದರು, ಹೀಗಾಗಿ ನೇಣಿಗೆ ಶರಣಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆದರೆ ಸುಶಾಂತ್​ ಸಿಂಗ್​ ಕುಟುಂಬಸ್ಥರು, ಆಪ್ತರು ಹಾಗೂ ಅಪಾರ ಅಭಿಮಾನಿಗಳು ಆತ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ದೃಢವಾಗಿ ವಾದಿಸಿದ್ದರು.

  ಸುಶಾಂತ್​ ಸಿಂಗ್​ ಸಾವಿನ ಬಗ್ಗೆ ಹಲವು ಆಯಾಮಗಳಲ್ಲಿ ಅನುಮಾನ ವ್ಯಕ್ತವಾಗಿತ್ತು. ಸುಶಾಂತ್​ ಸಿಂಗ್​ ಸಾವು ಆತ್ಮಹತ್ಯೆಯಲ್ಲ, ಇದು ವ್ಯವಸ್ಥಿತವಾದ ಕೊಲೆ ಎನ್ನುವ ಆರೋಪ ಸಹ ಕೇಳಿಬಂದಿತ್ತು. ಸುಶಾಂತ್​ ಸಿಂಗ್​ ಕೊಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಚರ್ಚೆಗಳು ಸಹ ನಡೆದಿದ್ದು, ಕೊನೆಗೂ ಪ್ರಕರಣದ ತನಿಖೆ ಸಿಬಿಐ ಕೈ ಸೇರಿತ್ತು.

   ಆಮೀರ್​ ಖಾನ್​ ಸಹೋದರನ ಶಾಂಕಿಗ್​ ಹೇಳಿಕೆ

  ಆಮೀರ್​ ಖಾನ್​ ಸಹೋದರನ ಶಾಂಕಿಗ್​ ಹೇಳಿಕೆ

  ಇದೀಗ ಸುಶಾಂತ್​ ಸಿಂಗ್​ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಬಾಲಿವುಡ್​ ನಟ ಆಮೀರ್​ ಖಾನ್​ ಸಹೋದರ ಸುಶಾಂತ್​ ಸಾವಿನ ಬಗ್ಗೆ ಶಾಕಿಂಗ್ ​ ಹೇಳಿಕೆ ನೀಡಿದ್ದಾರೆ. ಸುಶಾಂತ್​ ಸಿಂಗ್​ ಸಾವು ಆತ್ಮಹತ್ಯೆಯಲ್ಲ ಅದು ಕೊಲೆ ಎಂದು ನಟ ಫೈಸಲ್​​​ ಖಾನ್ ಬಹಿರಂಗ ಹೇಳಿಕೆ ನೀಡಿದ್ದಾರೆ. ಸುಶಾಂತ್​ ಸಿಂಗ್ ​ ಕೆಲ ಆಪ್ತರು ಹಾಗೂ ಅಭಿಮಾನಿಗಳಂತೆ ಫೈಸಲ್​​​ ಖಾನ್​ ಕೂಡ ಇದೊಂದು ವ್ಯವಸ್ಥಿತ ಕೊಲೆ ಎನ್ನುವುದನ್ನು ನಂಬಿದ್ದಾರೆ.

  ಸುಶಾಂತ್​ ಸಿಂಗ್​ ಸಾವಿನ ಸತ್ಯ ಹೊರಬರಲಿ

  ಸುಶಾಂತ್​ ಸಿಂಗ್​ ಸಾವಿನ ಸತ್ಯ ಹೊರಬರಲಿ

  ಫೈಸಲ್​​​ ಖಾನ್ ಇತ್ತೀಚಿಗೆ ಟೈಮ್ಸ್​ ನೌ ನವಭಾರತದ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದು, ಸುಶಾಂತ್​ ಸಿಂಗ್ ರಜಪೂತ್​ ಕೊಲೆಯಾಗಿದ್ದಾನೆ ಎಂದು ನನಗೆ ತಿಳಿದಿದೆ. ಸತ್ಯ ಯಾವಾಗ ಹೊರ ಬರುತ್ತದೆಯೋ, ಇಲ್ಲವೊ ಗೊತ್ತಿಲ್ಲ. ಆದರೆ ಸಮಯ ಎಲ್ಲವನ್ನೂ ಹೇಳುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ಕೆಲವೊಮ್ಮೆ ಎಷ್ಟೇ ತನಿಖೆ ನಡೆದರೂ ಸತ್ಯ ಹೊರ ಬರುವುದಿಲ್ಲ. ಆದರೆ ಸುಶಾಂತ್​ ಸಿಂಗ್​ ಸಾವಿನ ಸತ್ಯ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

   ಕರಣ್​ ಜೋಹರ್​ ಚಿತ್ರಕ್ಕೆ ಮೀತು ಸಿಂಗ್​ ಟಾಂಗ್​

  ಕರಣ್​ ಜೋಹರ್​ ಚಿತ್ರಕ್ಕೆ ಮೀತು ಸಿಂಗ್​ ಟಾಂಗ್​

  ಸುಶಾಂತ್​ ಸಿಂಗ್​ ಸಹೋದರಿ ಮೀತು ಸಿಂಗ್​ ಆಗಾಗ ಸುಶಾಂತ್​ ಫೋಟೋಗಳನ್ನು ಶೇರ್​ ಮಾಡಿ ಆತನೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸಹೋದರನ ಸಾವಿನ ಬಳಿಕ ಬಾಲಿವುಡ್​ ಕೆಲ ನಟರ ಬಗ್ಗೆ ಅಸಮಾಧಾಗೊಂಡಿರುವ ಮೀತು ಸಿಂಗ್, ಕಳೆದ ವಾರ ತೆರೆ ಕಂಡ​ ಕರಣ್​ ಜೋಹರ್ ನಿರ್ದೇಶನದ​ 'ಬ್ರಹ್ಮಾಸ್ತ್ರ' ಚಿತ್ರಕ್ಕೆ ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದಾರೆ. ಬಾಲಿವುಡ್​ ಅನ್ನು ನಾಶ ಪಡಿಸಲು ಸುಶಾಂತ್ ಎನ್ನುವ​ 'ಬ್ರಹ್ಮಾಸ್ತ್ರ' ಸಾಕು ಎಂದು ಬರೆದು, ನಟ ಸುಶಾಂತ್​ ಸಿಂಗ್​ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಕೂಡ​ ವೈರಲ್ ಆಗಿದೆ.

   ಸುಶಾಂತ್​ ಪ್ರಕರಣದ ತನಿಖೆ ಅಂತ್ಯಗೊಳಿಸದ ಸಿಬಿಐ

  ಸುಶಾಂತ್​ ಪ್ರಕರಣದ ತನಿಖೆ ಅಂತ್ಯಗೊಳಿಸದ ಸಿಬಿಐ

  ಸುಶಾಂತ್​ ಸಿಂಗ್​ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡಿರುವ ಸಿಬಿಐ ತನಿಖೆ ನಡೆಸುತ್ತಲೇ ಇದೆ. ಆದರೆ ಈವರೆಗೂ ತನಿಖೆಯ ಅಂತಿಮ ವರದಿ ಹೊರಬಂದಿಲ್ಲ. ಸುಶಾಂತ್​ ಸಿಂಗ್​ ಸಾವಿನ ಪ್ರಕರಣ ಸಂಬಂಧ ಅನೇಕರನ್ನು ವಿಚಾರಣೆಗೊಳಪಡಿಸಲಾಗಿದ್ದು, ನಟನ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಪರಿಗಣಿಸಿ ಸಿಬಿಐ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ವೇಳೆ ನಟಿಯ ಇನ್ನಷ್ಟು ಅಕ್ರಮಗಳು ಹೊರ ಬಂದಿದ್ದು, ಡ್ರಗ್ಸ್​ ಖರೀದಿ ಹಾಗೂ ದಾಸ್ತಾನು ಆರೋಪದಲ್ಲಿ ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ಬಂಧಿಸಿತ್ತು. ಆ ನಂತರ ರಿಯಾ, ಜಾಮೀನಿನ ಮೇಲೆ ಹೊರಗೆ ಬಂದರು.

  English summary
  Amir Khan's brother faisal Khan claims Sushanth Singh Rajput is murdered and he said sometimes truth doesn't even come out.
  Friday, September 16, 2022, 19:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X