ಹಳೇ ಬಾಯ್‌ಫ್ರೆಂಡ್‌ ಜೊತೆ ಸುಷ್ಮಿತಾ ಸೇನ್ ಶಾಪಿಂಗ್: ಲಲಿತ್ ಮೋದಿ ಕಥೆಯೇನು ಎಂದ ನೆಟ್ಟಿಗರು!

ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವುದಾಗಿ ಐಪಿಎಲ್ ಮಾಜಿ ಚೇರ್ಮನ್ ಲಲಿತ್ ಮೋದಿ ಟ್ವೀಟ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು. ಅವರಿಬ್ಬರು ಬಹಳ ರೊಮ್ಯಾಂಟಿಕ್‌ ಮೂಡ್‌ನಲ್ಲಿ ಫೋಟೊಗಳು ಸಖತ್ ವೈರಲ್ ಆಗಿತ್ತು. ಆದರೆ ಇದೀಗ ಸುಷ್ಮಿತಾ ಸೇನ್ ಮತ್ತೆ ತಮ್ಮ ಹಳೇ ಬಾಯ್‌ಫ್ರೆಂಡ್ ರೊಹ್ಮನ್ ಸಾವಲ್ ಜೊತೆ ಸುತ್ತಾಡುತ್ತಿದ್ದಾರೆ. ಇದನ್ನು ನೋಡಿ ಕೆಲವರು ಅಯ್ಯೋ ಲಲಿತ್ ಮೋದಿ ಕಥೆ ಏನ್ ಆಯ್ತು? ಎಂದು ಕೇಳುತ್ತಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ತನ್ನ ಎರಡನೇ ಬಾಯ್‌ಫ್ರೆಂಡ್‌ ಜೊತೆ ಸುಷ್ಮಿತಾ ಸೇನ್ ಬ್ರೇಕಪ್ ಮಾಡಿಕೊಂಡಿದ್ದರು. ನಂತರ ಲಲಿತ್ ಮೋದಿ ಜೊತೆ ಕಾಣಿಸಿಕೊಂಡಿದ್ದರು. ಇಬ್ಬರು ಮದುವೆ ಕೂಡ ಆಗುತ್ತೇನೆ ಎಂದು ಐಪಿಎಲ್ ಮಾಜಿ ಬಾಸ್ ಟ್ವೀಟ್ ಮಾಡಿ ಹೇಳಿದ್ದರು. ಇವರಿಬ್ಬರ ಡೇಟಿಂಗ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿತ್ತು. ಆದರೆ ಈಗ ಸುಷ್ಮಿತಾ, ಲಲಿತ್ ಮೋದಿಗೂ ಕೈ ಕೊಟ್ರಾ ಅಥವಾ ಡಬಲ್ ಗೇಮ್ ಆಗುತ್ತಿದ್ದಾರಾ ಅಂತ ಕೆಲವರು ಕೇಳುತ್ತಿದ್ದಾರೆ. ಲಲಿತ್ ಮೋದಿ ಜೊತೆ ಡೇಟಿಂಗ್‌ನಲ್ಲಿರುವ ಆಕೆ ಇತ್ತೀಚೆಗೆ ಪದೇ ಪದೇ ಹಳೇ ಬಾಯ್‌ಫ್ರೆಂಡ್ ಜೊತೆ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿದ್ದಾರೆ. ಸುಷ್ಮಿತಾ ಈಗ ಸಿನಿಮಾಗಳ ವಿಚಾರಕ್ಕಿಂತ ಹೆಚ್ಚು ವೈಯಕ್ತಿಕ ವಿಚಾರಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಮಾಜಿ ಪ್ರಿಯಕರನ ಜೊತೆ ಸುಷ್ಮಿತಾ ಸಿನಿಮಾ, ಶಾಪಿಂಗ್ ಅಂತ ಸುತ್ತಾಡುತ್ತಿರುವುದು ನೋಡಿ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಬ್ರೇಕಪ್ ಆದಮೇಲೆ ಫ್ರೆಂಡ್ ಆಗಿ ಇರುವುದು ತಪ್ಪಾ? ಎಂದು ಕೇಳುತ್ತಿದ್ದಾರೆ.

ಮಗಳು ಆಲಿಷಾ ಬರ್ತ್‌ಡೇಗಾಗಿ ಶಾಪಿಂಗ್ ಬಂದಿದ್ದೇವೆ ಎಂದು ನಟಿ ಸುಷ್ಮಿತಾ ಸೇನ್ ಹೇಳಿದ್ದಾರೆ. ಕ್ಯಾಮರಾಗಳನ್ನು ಕಂಡ ಕೂಡಲೇ ರೊಹ್ಮನ್ ಹಾಗೂ ಮಗಳು ಆಲಿಷಾ ಜೊತೆ ಸೇರಿ ಪೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. 'ನೀನು ಹೀಗೆ ಮಾಡಿದರೆ ನಿನ್ನ ಬಾಯ್‌ಫ್ರೆಂಡ್ ಲಲಿತ್ ಮೋದಿ ಕಥೆ ಏನಾಗಬೇಕು?' ಎಂದು ಕೆಲವರು ಹೇಳಿದರೆ, ಮತ್ತೆ ಅವರಿಬ್ಬರು ಒಂದ್ಕಾಲದಲ್ಲಿ ಲವರ್ಸ್, ಈಗ ಬೆಸ್ಟ್ ಫ್ರೆಂಡ್ಸ್ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ಸುಷ್ಮಿತಾ 'ಲಾಲ್‌ ಸಿಂಗ್ ಚಡ್ಡ' ಸಿನಿಮಾ ನೋಡಲು ಮಕ್ಕಳ ಜೊತೆ ಬಂದಿದ್ದರು. ಜೊತೆಗೆ ರೊಹ್ಮನ್ ಶಾಲ್ ಕೂಡ ಇದ್ದರು.

Sushmita Sen Goes out Shopping With Ex-Boyfriend Rohman Shawl Photos Goes Viral

ಕೆಲ ವರ್ಷಗಳ ಹಿಂದೆ ಮಾಜಿ ಕ್ರಿಕೆಟರ್ ಜೊತೆ ಸುಷ್ಮಿತಾ ಸೇನ್ ಪ್ರೇಮಾಯಣ ನಡೆದಿತ್ತು. ನಂತರ ತನಗಿಂತ ಚಿಕ್ಕ ವಯಸ್ಸಿನ ರೊಹ್ಮನ್ ಶಾಲ್ ಜೊತೆ ಡೇಟಿಂಗ್ ಶುರು ಮಾಡಿದ್ದರು. ಆತನಿಂದ ದೂರಾದ ಮೇಲೆ ಲಲಿತ್ ಮೋದಿಗೆ ಹತ್ತಿರವಾಗಿದ್ದರು. ಆದರೂ ರೊಹ್ಮನ್ ಜೊತೆ ಸುತ್ತಾಡುತ್ತಿದ್ದಾರೆ. ಇತ್ತೀಚೆಗೆ ಸುಷ್ಮಿತಾ ಸೇನ್ ಬರ್ತ್‌ಡೇ ಪಾರ್ಟಿಯಲ್ಲೂ ರೊಹ್ಮನ್ ಕಾಣಿಸಿಕೊಂಡಿದ್ದರು. ಸಿನಿಮಾಗಳಲ್ಲಿ ಸುಷ್ಮಿತಾ ಈಗ ಅಷ್ಟಾಗಿ ನಟಿಸುತ್ತಿಲ್ಲ. ಕೊನೆಯದಾಗಿ 'ಆರ್ಯ'-2 ವೆಬ್‌ ಸೀರಿಸ್‌ಗಾಗಿ ಬಣ್ಣ ಹಚ್ಚಿದ್ದರು.

More from Filmibeat

English summary
Sushmita Sen Goes out Shopping With Ex-Boyfriend Rohman Shawl Photos Goes Viral. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X