ಮೊದಲ ಬಾರಿ ಶಾರುಖ್ ಖಾನ್ ಎದುರು ಬಂದಾಗ ; ಸುಶ್ಮಿತಾ ಸೇನ್ ಹೇಳಿದ ಸತ್ಯ ಕಥೆ..!

ಬಿಟೌನ್ ಕಿಂಗ್ ಶಾರುಖ್ ಖಾನ್ ಜೊತೆ ನಟಿಸುವ ಆಸೆ ಯಾರಿಗೆ ಇರಲ್ಲ. ಒಂದೆರೆಡು ಸನ್ನಿವೇಶವಾದರೂ ಸರಿ, ಶಾರುಖ್ ಖಾನ್ ಜೊತೆ ತೆರೆ ಹಂಚಿಕೊಳ್ಳುವ ಕನಸನ್ನ ಹಿಂದಿ ಉದ್ಯಮದಲ್ಲಿ ಅನೇಕರು ಕಾಣ್ತಾನೇ ಬಂದಿದ್ದಾರೆ. ಇವತ್ತು ಕೂಡ ಕಾಣ್ತಾನೇ ಇದ್ದಾರೆ.

ಈ ಕನಸು ನನಸಾದಾದ ಕೆಲವರು ಚಿವುಟಿ ನೋಡಿಕೊಳ್ಳುತ್ತಾರೆ. 2004ರಲ್ಲಿ ಸುಶ್ಮಿತಾ ಸೇನ್ ಇಂಥಹದ್ದೇ ಒಂದು ಸಂದರ್ಭದಲ್ಲಿದ್ದರು. ಕುಣಿದು ಕುಪ್ಪಳಿಸಿದ್ದರು. ಈ ವಿಚಾರವನ್ನ ಎರಡು ದಶಕದ ನಂತರ ಸುಶ್ಮಿತಾ ಸೇನ್ ಬಹಿರಂಗಗೊಳಿಸಿದ್ದಾರೆ.

 Sushmita Sen Makes Shocking Revelation About Shah Rukh Khan

ಹೌದು, ಅದು.. ಶಾರುಖ್ ಖಾನ್ ಅಭಿನಯದ ಮೈ ಹೂ ನಾ ಚಿತ್ರದ ಚಿತ್ರೀಕರಣದ ಸಂದರ್ಭ. ಚಿತ್ರದ ನಾಯಕ ಯಾರೆಂಬ ವಿಚಾರವನ್ನ ಚಿತ್ರದ ನಿರ್ದೇಶಕಿ ಫರ್ಹಾ ಖಾನ್ ನಾಯಕಿ ಸುಶ್ಮಿತಾ ಸೇನ್ ಅವರಿಂದ ಗೌಪ್ಯವಾಗಿ ಇಟ್ಟಿದ್ದರು. ಅದೊಂದು ದಿನ ಚಿತ್ರದ ಚಿತ್ರೀಕರಣಕ್ಕೆ ಫಿಲ್ಮ್ ಸಿಟಿಗೆ ಕರೆದೊಯ್ದರು. ಆದರೆ ಸುಶ್ಮಿತಾ ಸೇನ್ ಗೆ ಅಲ್ಲಿ ಅಚ್ಚರಿ ಕಾದಿತ್ತು.

ಯಾಕೆಂದರೆ ಸ್ಥಳದಲ್ಲಿ ಶಾರುಖ್ ಖಾನ್ ಬೀಡು ಬಿಟ್ಟಿದ್ದರು. ಇದ್ರಿಂದ ಆಶ್ಚರ್ಯಕ್ಕೊಳಗಾದ ಸುಶ್ಮಿತಾ ನಿರ್ದೇಶಕಿ ಹಾಗೂ ನೃತ್ಯ ಸಂಯೋಜಕಿ ಫರ್ಹಾ ಖಾನ್ ಅವರಲ್ಲಿ ಶಾರುಖ್ ಖಾನ್ ಇಲ್ಲೇನು ಮಾಡ್ತಿದ್ದಾರೆ ಎಂಬ ಪ್ರಶ್ನೆಯನ್ನ ಕೇಳಿದ್ದರು. ಆಗ ನೀನು ನಾಯಕಿಯಾಗಿ ನಟಿಸುತ್ತಿರುವ ನಾಯಕ ಅವರೇ ಎಂದು ಫರ್ಹಾ ಖಾನ್ ಹೇಳಿದಾಗ ಸುಶ್ಮಿತಾ ಕನಸೋ, ನನಸೋ ಎಂದು ಅತ್ತಿತ್ತ ನೋಡತೋಡಗಿದ್ದರು

ತಮ್ಮ ಈ ಅನುಭವದ ಕಥೆಯನ್ನ ಪಿಂಕ್ ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿರುವ ಸುಶ್ಮಿತಾ ಸೇನ್, ಫರ್ಹಾ ಖಾನ್ ಗೆ ಧನ್ಯವಾದ ಹೇಳಿದ್ದಾರೆ. ಫರ್ಹಾ ಖಾನ್ ಮಾತು ತಪ್ಪದ ಮಗಳು ಎಂದು ಬಾಯ್ತುಂಬ ಹೊಗಳಿದ್ದಾರೆ.

 Sushmita Sen Makes Shocking Revelation About Shah Rukh Khan

ಮೈ ಹೂ ನಾಗೆ ಆಯ್ಕೆಯಾಗಿದ್ಹೇಗೆ ಸುಷ್ಮಿತಾ ಸೇನ್ ?

ಸುಶ್ಮಿತಾ ಸೇನ್ ಆಗಷ್ಟೇ ವಿಶ್ವ ಸುಂದರಿಯ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದರು. ದಸ್ತಕ್, ಜೋರ್ ಸಿನಿಮಾದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನ ಮಾಡಿಕೊಂಡಿದ್ದರು. ಆದರೆ ಹೇಳಿಕೊಳ್ಳುವಂತಹ ಹೆಸರು ಸುಶ್ಮಿತಾ ಸೇನ್ ಗೆ ಸಿಕ್ಕಿರಲಿಲ್ಲ.

ಇದೇ ಸಮಯದಲ್ಲಿ ಸಿರ್ಫ್ ತುಮ್ ಚಿತ್ರದಲ್ಲಿನ ಐಟಂ ಹಾಡಿಗೆ ಹೆಜ್ಜೆ ಹಾಕುವ ಅವಕಾಶ ಸುಶ್ಮಿತಾ ಸೇನ್ ಗೆ ಸಿಕ್ಕಿತ್ತು. ಸಿಕ್ಕ ಈ ಅವಕಾಶ ಬಳಿಸಿಕೊಂಡ ಸುಶ್ಮಿತಾ ದಿಲ್ಬರ್-ದಿಲ್ಬರ್ ಹಾಡಿಗೆ ಹೆಜ್ಜೆ ಹಾಕಿದ್ದರು. ಸುಶ್ಮಿತಾ ಬದುಕು ಬದಲಾಗಿದ್ದು ಇಲ್ಲಿಯೇ. ಯಾಕೆಂದರೆ ದಿಲ್ಬರ್ ದಿಲ್ಬರ್ ಹಾಡಿಗೆ ಫರ್ಹಾ ಖಾನ್ ನೃತ್ಯ ನಿರ್ದೇಶನ ಮಾಡ್ತಿದ್ದರು.

ಸುಶ್ಮಿತಾ ಅವರಲ್ಲಿನ ಮುಗ್ದತೆ ಹಾಗೂ ಬದ್ದತೆಯನ್ನ ಕಂಡು ಪ್ರಭಾವಕ್ಕೊಳಗಾದ ಫರ್ಹಾ ನನ್ನ ನಿರ್ದೇಶನದ ಮೊದಲ ಚಿತ್ರಕ್ಕೆ ನೀನೆ ನಾಯಕಿ ಎಂದು ಸುಶ್ಮಿತಾಗೆ ಹೇಳಿದ್ದರು. ಸಹಜವಾಗಿ ಸುಶ್ಮಿತಾ ಫರ್ಹಾ ಹೇಳಿದ್ದ ಈ ಮಾತನ್ನ ನಂಬಿರಲಿಲ್ಲ. ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

 Sushmita Sen Makes Shocking Revelation About Shah Rukh Khan

ಆದರೆ, 2004ರಲ್ಲಿ ಮೈ ಹೂ ನಾ ಚಿತ್ರದ ಘೋಷಣೆ ಮಾಡಿದ್ದ ಫರ್ಹಾ ಸೀದಾ ಸುಶ್ಮಿತಾ ಅವರಿಗೆ ಕರೆ ಮಾಡಿದರು. ಕರೆ ಬಂದ ಬಳಿಕ ಒಂದು ನಿಮಿಷ ಕೂಡ ವ್ಯರ್ಥ ಮಾಡದ ಸುಶ್ಮಿತಾ ಚಿತ್ರದ ಕಥೆಯನ್ನೂ ಕೇಳಲಿಲ್ಲ. ನಾಯಕ ಯಾರೆಂಬ ಪ್ರಶ್ನೆಯನ್ನೂ ಕೂಡ ಮುಂದಿಡಲಿಲ್ಲ. ಸೀದಾ ನಾಯಕಿಯಾಗಲು ಒಪ್ಪಿದರು.

ಮುಂದಾಗಿದ್ದು ಇತಿಹಾಸ. ಮೈ ಹೂ ನಾ ಚಿತ್ರ ಸುಶ್ಮಿತಾ ಸೇನ್ ಬದುಕಿಗೆ ಭದ್ರ ಬುನಾದಿ ಹಾಕಿತು. ಒಂದಾದ ಮೇಲೊಂದು ಅವಕಾಶಗಳು ಸುಶ್ಮಿತಾ ಅವರನ್ನ ಅರಸಿ ಹೋದವು. ಇವತ್ತು ಕೂಡ ಮೈ ಹೂ ನಾ ಚಿತ್ರದ ತುಮೇ ಜೋ ಮೈನೆ ದೇಖಾ ಹಾಗೂ ತುಮ್ಸೇ ಮಿಲ್ಕೇ ದಿಲ್ ಕಾ ಜೋ ಹಾಲ್ ಹಾಡನ್ನ ಆ ಕಾಲದ ಸಿನಿಪ್ರಿಯರು, ಸಿನಿ ರಸಿಕರು ಮರೆತಿಲ್ಲ.

More from Filmibeat

English summary
Former Miss Universe Sushmita Sen says she didn’t know Shah Rukh Khan was a part of Main Hoon Na before signing the film: ‘It was a surprise’
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X