twitter
    For Quick Alerts
    ALLOW NOTIFICATIONS  
    For Daily Alerts

    ವಿಚಿತ್ರ ಕಾಯಿಲೆಯ ವಿರುದ್ಧ ಹೋರಾಡಿ ಗೆದ್ದ ಸುಶ್ಮಿತಾ ಸೇನ್: ಯಾವುದಾ ಕಾಯಿಲೆ?

    |

    ವಿಶ್ವಸುಂದರಿಯಾಗಿ ಮೆರೆದು, ಬಾಲಿವುಡ್‌ನಲ್ಲಿ ತನ್ನ ಪ್ರತಿಭೆಯಯಿಂದ ಗುರುತಿಸಿಕೊಂಡ ನಟಿ ಸುಶ್ಮಿತಾ ಸೇನ್ ಎಳವೆಯಿಂದಲೂ ಹೋರಾಟಗಾರ್ತಿ.

    Recommended Video

    ಕರೋನಾ ವಾರಿಯರ್ಸ್ ಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ತೋರಿದ ರಶ್ಮಿಕಾ ಮಂದಣ್ಣ |RashmikaMandanna|Corona warriors

    ಸ್ಥಿತಿವಂತ ಕುಟುಂಬದವರಾಗಿಲ್ಲದಿದ್ದರೂ ಕೇವಲ ಪ್ರತಿಭೆ ಸೌಂದರ್ಯ, ಹಠದ ಮೂಲಕವೇ ಭುವನ ಸುಂದರಿಯಾದ ಸುಶ್ಮಿತಾ ಸೇನ್‌ ಳದ್ದು ಹೋರಾಟದ ಮನೋಭಾವ.

    ಖಾಸಗಿ ಫೋಟೋಗಳನ್ನು ಹಂಚಿಕೊಂಡ ಸುಶ್ಮಿತಾ ಸೇನ್ ಸಹೋದರ: ನೆಟ್ಟಿಗರಿಂದ ಸಖತ್ ಟ್ರೋಲ್ಖಾಸಗಿ ಫೋಟೋಗಳನ್ನು ಹಂಚಿಕೊಂಡ ಸುಶ್ಮಿತಾ ಸೇನ್ ಸಹೋದರ: ನೆಟ್ಟಿಗರಿಂದ ಸಖತ್ ಟ್ರೋಲ್

    ಕೃಷ್ಣ ಸುಂದರಿ ಆಗಿದ್ದರೂ ಸಹ ಬಿಳಿ ಚರ್ಮದ ನಟಿಯರ ನಡುವೆ ಕೇವಲ ಪ್ರತಿಭೆಯಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ಎತ್ತರೆತ್ತರೆಕ್ಕೆ ಏರಿ ತನ್ನದೇ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡ ಸುಶ್ಮಿತಾ ಸೇನ್. ವೈಯಕ್ತಿಕ ಜೀವನದಲ್ಲೂ ಸಹ ಸಾಕಷ್ಟು ಅಡೆತಡೆಗಳನ್ನು ಕಂಡವರು.

    10 ವರ್ಷದ ಬಳಿಕ ಬೆಳ್ಳಿತೆರೆಗೆ ಮರಳಿದ ಮಾಜಿ ಭುವನ ಸುಂದರಿ10 ವರ್ಷದ ಬಳಿಕ ಬೆಳ್ಳಿತೆರೆಗೆ ಮರಳಿದ ಮಾಜಿ ಭುವನ ಸುಂದರಿ

    ಇಂಥಹಾ ಸುಶ್ಮಿತಾ ಸೇನ್, ಕೆಲ ವರ್ಷಗಳ ಹಿಂದೆ ತನಗೆ ಅಂಟಿದ್ದ ವಿಚಿತ್ರ ಕಾಯಿಲೆಯ ಜೊತೆಗೆ ಹೋರಾಡಿ ಕಾಯಿಲೆಯನ್ನು ಮಣಿಸಿದ್ದಾರೆ. ಆ ಬಗ್ಗೆ ಈಗ ಬಹಿರಂಗವಾಗಿ ಸುಶ್ಮಿತಾ ಮಾತನಾಡಿದ್ದಾರೆ.

    ಕಾಯಿಲೆಯಿರುವುದು ಗೊತ್ತಾಗಿದ್ದು 2014 ರಲ್ಲಿ

    ಕಾಯಿಲೆಯಿರುವುದು ಗೊತ್ತಾಗಿದ್ದು 2014 ರಲ್ಲಿ

    2014 ರಲ್ಲಿ ಸುಶ್ಮಿತಾ ಸೇನ್‌ ಗೆ ಅಡಿಸೋನ್ ಎಂಬ ವಿಚಿತ್ರ ಕಾಯಿಲೆ ಇರುವುದು ಪತ್ತೆಯಾಗಿತ್ತು. ಆಗ ಸುಶ್ಮಿತಾ ಪುರ್ಣವಾಗಿ ಕುಸಿದು ಹೋಗಿದ್ದರಂತೆ. ಜೀವದ ಮೇಲಿನ ಆಸೆಯನ್ನೂ ಕೈಬಿಟ್ಟಿದ್ದರಂತೆ ಸುಶ್ಮಿತಾ.

    ಫೈಟ್ ಬ್ಯಾಕ್ ಮಾಡಿದ ಸುಶ್ಮಿತಾ ಸೇನ್

    ಫೈಟ್ ಬ್ಯಾಕ್ ಮಾಡಿದ ಸುಶ್ಮಿತಾ ಸೇನ್

    ಆದರೆ ತಾವು ಹೀಗೆ ಕೈಚೆಲ್ಲಿ ಕೂತಿದ್ದು ಸ್ವತಃ ಸುಶ್ಮಿತಾ ಸೇನ್‌ ಗೆ ಇಷ್ಟವಾಗದೆ. ಫೈಟ್ ಬ್ಯಾಕ್ ಮಾಡಿದಂತೆ. ಪ್ರತಿದಿನ ವ್ಯಾಯಾಮ, ರೋಪ್ ವ್ಯಾಯಾಮ ಸೇರಿ, ಜಪಾನ್‌ನ ಸಮರ ಕಲೆಯಾದ ನುಂಚಾಕು ಅನ್ನು ಪ್ರತಿದಿನ ಅಭ್ಯಾಸ ಮಾಡಿ, ಅದರ ಮೂಲಕ ಧ್ಯಾನ ಮಾಡಲು ಪ್ರಾರಂಭಿಸಿದರಂತೆ ಸುಶ್ಮಿತಾ ಸೇನ್.

    ಬಾಯ್ ಫ್ರೆಂಡ್ ಜೊತೆ ಮಾಜಿ ಭುವನ ಸುಂದರಿಯ ರೋಮ್ಯಾಂಟಿಕ್ ವರ್ಕೌಟ್ಬಾಯ್ ಫ್ರೆಂಡ್ ಜೊತೆ ಮಾಜಿ ಭುವನ ಸುಂದರಿಯ ರೋಮ್ಯಾಂಟಿಕ್ ವರ್ಕೌಟ್

    ನೋವನ್ನು ವ್ಯಾಯಾಮವಾಗಿ ಬದಲಾಯಿಸಿದೆ: ಸುಶ್ಮಿತಾ

    ನೋವನ್ನು ವ್ಯಾಯಾಮವಾಗಿ ಬದಲಾಯಿಸಿದೆ: ಸುಶ್ಮಿತಾ

    ನೋವನ್ನು ವ್ಯಾಯಾಮವಾಗಿ ಬದಲಾಯಿಸಿದೆ. ಮರಳಿ ಹೋರಾಟಕ್ಕೆ ಇಳಿದೆ. ಪ್ರತಿದಿನ ಬಿಡದೆ ನಂಚಾಕು ಅಥವಾ ಚೇನ್ ಸ್ಟಿಕ್ಸ್ ಅಭ್ಯಾಸ ಮಾಡಿದೆ. ನನ್ನ ಅಡ್ರಿನಲ್ ಗ್ರಂಥಿಗಳು ಪುನಃ ಕೆಲಸ ಮಾಡಲು ಪ್ರಾರಂಭಿಸಿದವು. ನಾನು ಅಡಿಸೋನ್ ಕಾಯಿಲೆಯಿಂದ ಮುಕ್ತವಾದೆ ಎಂದಿದ್ದಾರೆ ಸುಶ್ಮಿತಾ ಸೇನ್.

    ಏನಿದು ಅಡಿಸೋನ್ ಕಾಯಿಲೆ?

    ಏನಿದು ಅಡಿಸೋನ್ ಕಾಯಿಲೆ?

    ಅಡಿಸೋನ್ ಕಾಯಿಲೆ ಹಾರ್ಮೊನುಗಳಿಗೆ ಸಂಬಂಧಿಸಿದ್ದು. ಈ ಕಾಯಿಲೆ ಬಂದವರ ಕಿಡ್ನಿಯ ಕೆಳಭಾಗದಲ್ಲಿರುವ ಅಡ್ರಿನಲ್ ಗ್ರಂಥಿಗಳು ಹಾರ್ಮೋನು ಉತ್ಪಾದನೆ ಮಾಡುವುದಿಲ್ಲ. ಇದರಿಂದಾಗಿ ತೂಕ ಕಡಿಮೆ ಆಗುವುದು, ಬಣ್ಣ ಕಳೆದುಕೊಳ್ಳುವುದು, ಕಿರಿ-ಕಿರಿ, ಸಿಟ್ಟು ಹೆಚ್ಚಾಗುವುದು ಆಗುತ್ತದೆ.

    ವಿಡಿಯೋ: ವಿಶ್ವ ಸುಂದರಿ ಸುಷ್ಮಿತಾ ಸೇನ್ ಪಡೆದ ಮರೆಯಲಾಗದ ಸ್ವಾಗತವಿಡಿಯೋ: ವಿಶ್ವ ಸುಂದರಿ ಸುಷ್ಮಿತಾ ಸೇನ್ ಪಡೆದ ಮರೆಯಲಾಗದ ಸ್ವಾಗತ

    English summary
    Actress Sushmita Sen opens up about her fight against rare Addison's disease.
    Monday, May 18, 2020, 19:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X