10 ವರ್ಷದ ಬಳಿಕ ಬೆಳ್ಳಿತೆರೆಗೆ ಮರಳಿದ ಮಾಜಿ ಭುವನ ಸುಂದರಿ

ಬಾಲಿವುಡ್ ನಟಿ ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಸುಮಾರು 10 ವರ್ಷದ ಬಳಿಕ ಬಾಲಿವುಡ್ ಗೆ ಕಂಬ್ಯಾಕ್ ಆಗುತ್ತಿದ್ದಾರೆ. ಈ ಕುರಿತು ಸ್ವತಃ ಸುಶ್ಮಿತಾ ಸೇನ್ ಅಧಿಕೃತ ಮಾಹಿತಿ ನೀಡಿದ್ದಾರೆ.

''ನನ್ನ ಅಭಿಮಾನಿಗಳಿಗಾಗಿ, ಅವರ ಪ್ರೀತಿಗಾಗಿ ನಾನು ಮತ್ತೆ ಬಾಲಿವುಡ್ ಗೆ ಬರುತ್ತಿದ್ದೇನೆ. ನನ್ನ ಬರುವಿಕೆಗಾಗಿ ಹತ್ತು ವರ್ಷದಿಂದ ಕಾಯುತ್ತಿದ್ದಾರೆ. ಈ ವಿರಾಮದ ಉದ್ದಕ್ಕೂ ನನಗೆ ಪ್ರೀತಿ ನೀಡಿದ್ದಾರೆ. ನಿಮಗಾಗಿ ನಾನು ಹಿಂತಿರುಗುತ್ತಿದ್ದೇನೆ. ಇದು ನನ್ನ ಸೆಕೆಂಡ್ ಇನ್ನಿಂಗ್ಸ್'' ಎಂದು ಇನ್ಸ್ಟಾಗ್ರಾಂನಲ್ಲಿ ಸುಶ್ಮಿತಾ ಸೇನ್ ಪೋಸ್ಟ್ ಮಾಡಿದ್ದಾರೆ.

ಕಂಬ್ಯಾಕ್ ಮಾಡುತ್ತಿದ್ದೇನೆ ಎಂದಷ್ಟೇ ಮಾಹಿತಿ ನೀಡಿರುವ ಸುಶ್ಮಿತಾ, ಬೆಳ್ಳಿತೆರೆನಾ ಅಥವಾ ಕಿರುತೆರೆನಾ ಎಂದು ಸ್ಪಷ್ಟಪಡಿಸಿಲ್ಲ. ಯಾವ ಸಿನಿಮಾ, ಯಾವಾಗ ಶುರು, ಯಾವ ಪಾತ್ರ ಹೀಗೆ ಬೇರೆ ಯಾವ ಮಾಹಿತಿಯೂ ನೀಡಿಲ್ಲ. ಹಾಗಾಗಿ, ಸುಶ್ಮಿತಾ ಸೇನ್ ಅವರ ಕಂಬ್ಯಾಕ್ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ.

Sushmita Sen Returning To Bollywood

2015ರಲ್ಲಿ ಬೆಂಗಾಳಿ ಚಿತ್ರವೊಂದರಲ್ಲಿ ಕೊನೆಯದಾಗಿ ಸುಶ್ಮಿತಾ ಸೇನ್ ಕಾಣಿಸಿಕೊಂಡಿದ್ದರು. 2010ರಲ್ಲಿ ತೆರೆಕಂಡಿದ್ದ 'ನೋ ಪ್ರಾಬ್ಲಂ' ಸುಶ್ಮಿತಾ ಸೇನ್ ನಟಿಸಿದ್ದ ಕೊನೆಯ ಹಿಂದಿ ಸಿನಿಮಾ.

2000ನೇ ವರ್ಷದ ಹೆಣ್ಣು ಮಗುವೊಂದನ್ನು ದತ್ತು ಪಡೆದುಕೊಂಡಿದ್ದ ಸುಶ್ಮಿತಾ ಸೇನ್, 2010ರಲ್ಲಿ ಮತ್ತೊಂದು ಮಗುವನ್ನು ದತ್ತು ಪಡೆದುಕೊಂಡಿದ್ದರು. ಸದ್ಯ ಮಾಡೆಲ್ ರೋಹ್ಮನ್ ಶಾಲ್ ಅವರ ಜೊತೆ ಸುಶ್ಮಿತಾ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Bollywood star actress Sushmita Sen returning to bollywood after 10 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X