ನಟಿ ಸುಶ್ಮಿತಾ ಸೇನ್‌ಗೆ ಹೃದಯಾಘಾತ; ಈಗ ಹೇಗಿದ್ದಾರೆ ಮಾಜಿ ವಿಶ್ವಸುಂದರಿ?

ವಿಶ್ವ ಸುಂದರಿ ಕಿರೀಟವನ್ನು ಮೊದಲ ಬಾರಿಗೆ ಮುಡಿಗೇರಿಸಿಕೊಂಡ ಭಾರತೀಯೆ ಎಂಬ ದಾಖಲೆಯನ್ನು ಹೊಂದಿರುವ ಸುಶ್ಮಿತಾ ಸೇನ್‌ ಹೃದಯಾಘಾತಕ್ಕೊಳಗಾಗಿದ್ದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತಾಗಿ ಸ್ವತಃ ಸುಶ್ಮಿತಾ ಸೇನ್ ಅವರೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ತಮಗೆ ಹೃದಯಾಘಾತವಾಗಿತ್ತು ಎಂದು ಬರೆದುಕೊಂಡಿರುವ ಸುಶ್ಮಿತಾ ಸೇನ್ ಆಂಜಿಯೋಪ್ಲ್ಯಾಸ್ಟಿ ಮಾಡಿ ಸ್ಟೆಂಟ್ ಹಾಕಲಾಗಿದೆ ಸದ್ಯಕ್ಕೆ ತಾನು ಗುಣಮುಖಳಾಗಿದ್ದೇನೆ ಎಂದು ತಿಳಿಸಿದ್ದಾರೆ. ತನ್ನ ತಂದೆ ಶುಭೀರ್ ಸೇನ್ ಜತೆಗಿರುವ ಫೋಟೊವೊಂದನ್ನು ಹಂಚಿಕೊಂಡಿರುವ ಸುಶ್ಮಿತಾ ಸೇನ್ "ನಿನ್ನ ಹೃದಯವನ್ನು ಸಂತೋಷ ಹಾಗೂ ಧೈರ್ಯದಿಂದ ಇಟ್ಟುಕೊ. ನಿನಗೆ ಅಗತ್ಯವಿದ್ದ ಸಂದರ್ಭದಲ್ಲಿ ಅದು ನಿನ್ನ ಜತೆ ನಿಲ್ಲುತ್ತದೆ ಎಂಬ ಪ್ರಬುದ್ಧತೆಯ ಮಾತುಗಳನ್ನು ನನ್ನ ಅಪ್ಪ ಶುಭೀರ್ ಸೇನ್ ಹೇಳಿದರು" ಎಂದು ಬರೆದುಕೊಂಡಿದ್ದಾರೆ.

Sushmita Sen revealed that she was suffered of heart attack a few days back

ಮುಂದಿನ ಸಾಲಿನಲ್ಲಿ "ಕೆಲ ದಿನಗಳ ಹಿಂದೆ ನಾನು ಹೃದಯಾಘಾತ ಅನುಭವಿಸಿದ್ದೆ. ಆಂಜಿಯೋಪ್ಲ್ಯಾಸ್ಟಿ ಮಾಡಿ ಸ್ಟೆಂಟ್ ಹಾಕಲಾಗಿದೆ. ಮುಖ್ಯವಾಗಿ ನನ್ನ ಹೃದ್ರೋಗ ತಜ್ಞರು ನಿನಗೆ ದೊಡ್ಡ ಹೃದಯವಿದೆ ಎಂದು ತಿಳಿಸಿದರು" ಎಂದು ಬರೆದುಕೊಂಡಿರುವ ಸುಶ್ಮಿತಾ ಸೇನ್ "ಆ ಸಮಯದಲ್ಲಿ ಸ್ಪಂದಿಸಿದ ಹಲವರಿಗೆ ಧನ್ಯವಾದ ಹೇಳಬೇಕಿದೆ. ಅದನ್ನು ಮತ್ತೊಂದು ಪೋಸ್ಟ್‌ನಲ್ಲಿ ಮಾಡಲಿದ್ದೇನೆ" ಎಂದು ಉಲ್ಲೇಖಿಸಿದ್ದಾರೆ.

ಈ ಪೋಸ್ಟ್ ಕೇವಲ ನನ್ನ ಹಿತೈಶಿಗಳಿಗೆ ಹಾಗೂ ಪ್ರೀತಿ ಪಾತ್ರರಿಗೆ ಈ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುವುದಕ್ಕಷ್ಟೇ, ಎಲ್ಲವೂ ಈಗ ಸರಿಯಾಗಿದೆ ಹಾಗೂ ನಾನೀಗ ಮತ್ತೊಂದಷ್ಟು ಜೀವನಕ್ಕೆ ಸಿದ್ಧಳಿದ್ದೇನೆ, ನಾನು ನಿಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ದೇವರು ದೊಡ್ಡವನು ಎಂದು ಕೊನೆಯ ಸಾಲಿನಲ್ಲಿ ಸುಶ್ಮಿತಾ ಸೇನ್ ಬರೆದುಕೊಂಡಿದ್ದಾರೆ.

Sushmita Sen revealed that she was suffered of heart attack a few days back

ಸದ್ಯ ಸುಶ್ಮಿತಾ ಸೇನ್ ಹಾಕಿದ ಈ ದಿಢೀರ್ ಪೋಸ್ಟ್ ಕಂಡ ಆಕೆಯ ಅಭಿಮಾನಿಗಳು ಆತಂಕದ ಜತೆಗೆ ನಟಿ ಚೇತರಿಸಿಕೊಂಡದ್ದರ ಬಗ್ಗೆ ತುಸು ಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಜತೆಗೆ ಬಾಲಿವುಡ್‌ನ ಹಲವಾರು ಸೆಲೆಬ್ರಿಟಿಗಳು ಈ ಪೋಸ್ಟ್ ಕುರಿತು ಪ್ರತಿಕ್ರಿಯಿಸಿದ್ದು ದೇವರು ದೊಡ್ಡವನು ಕೆಡುಕೇನೂ ಸಂಭವಿಸದೇ ಇರುವುದೇ ಖುಷಿಯ ವಿಷಯ, ಇನ್ನಷ್ಟು ಆಯಸ್ಸು ಹಾಗೂ ಆರೋಗ್ಯ ನಿಮ್ಮದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Sushmita Sen revealed that she was suffered of heart attack and everything is ok now. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X