ವಿಡಿಯೋ ವೈರಲ್: ಲಾಕ್ ಡೌನ್ ನಲ್ಲಿ ಬಾಯ್ ಫ್ರೆಂಡ್ ಜೊತೆ ಸುಶ್ಮಿತಾ ಸೇನ್ ರೊಮ್ಯಾಂಟಿಕ್ ವರ್ಕೌಟ್

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 42 ವರ್ಷವಾದರು ಮದುವೆಯಾಗದೆ ಸಿಂಗಲ್ ಆಗಿರುವ ಸುಶ್ಮಿತಾ, ಸದ್ಯ 28 ವರ್ಷದ ಯುವಕ ರೋಹ್ಮಾನ್ ಶಾವ್ಲ್ ಜೊತೆ ಡೇಟಿಂಗ್ ನಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಆಗಾಗ ಸುಶ್ಮಿತಾ ಬಾಯ್ ಫ್ರೆಂಡ್ ಜೊತೆ ಇರುವ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

Recommended Video

Hardik Pandya soon to be father , trolls and wishes rain over him | Hardik Pandya &Natasha Stankovic

ಪ್ರಿಯತಮ ರೋಹ್ಮಾನ್ ಶಾವ್ಲ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸುಶ್ಮಿತಾ ಸೇನ್ ಇತ್ತೀಚಿಗೆ ವರ್ಕೌಟ್ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಸುಶ್ಮಿತಾ, ಪ್ರಿಯತಮನ ಜೊತೆ ರೋಮ್ಯಾಂಟಿಕ್ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಶ್ಮಿತಾ ವರ್ಕೌಟ್ ವಿಡಿಯೋಗೆ ನೆಟ್ಟಿಗರಿಂದ ಸಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ.

ಅಂದ್ಹಾಗೆ ಸುಶ್ಮಿತಾ ವರ್ಕೌಟ್ ವಿಡಿಯೋ ಹಂಚಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಒಮ್ಮೆ ಪ್ರಿಯತಮನ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡು ಸುದ್ದಿಯಾಗಿದ್ದರು.

 Sushmita Sen romantic Workout With His Boyfriend Rohman Shaw

ಸದ್ಯ ಸುಶ್ಮಿತಾ ವಿಡಿಯೋ ಹಂಚಿಕೊಂಡು ಕ್ಯಾಪ್ಷನ್ ಕೂಡ ಹಾಕಿದ್ದಾರೆ. "ನಾನು ನಿನ್ನನ್ನು ಪ್ರೀತಿಸುತ್ತಿದ್ದೀನಿ ರೋಷನ್. ಸ್ಥಿರ ಸಂಬಂಧಕ್ಕೆ ಸಮತೋಲನ ಕೇಂದ್ರ ಮುಖ್ಯ, ಹೊಂದಿಕೊಳ್ಳುವ ಮನಸ್ಸು, ಪರಸ್ಪರ ಶಕ್ತಿ ಮತ್ತು ಆಳವಾದ ನಂಬಿಕೆ ಬೇಕು"ಎಂದು ಬರೆದುಕೊಂಡಿದ್ದಾರೆ.

ಇಬ್ಬರ ಸಂಬಂಧದ ಬಗ್ಗೆ ಆಗಾಗ ಚರ್ಚೆಯಾಗುತ್ತಿದ್ದರು, ಸುಶ್ಮಿತಾ ಆಗಲಿ ಅಥವಾ ರೋಶ್ಮಾನ್ ಆಗಲಿ ಎಲ್ಲಿಯೂ ತುಟಿಬಿಚ್ಚಿಲ್ಲ. ಆದ್ರೆ ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಲಾಕ್ ಡೌನ್ ನಲ್ಲಿ ಇಬ್ಬರು ಒಟ್ಟಿಗೆ ಸಮಯ ಕಳೆಯುತ್ತಿದ್ದು, ಫಿಟ್ ನೆಟ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

More from Filmibeat

English summary
Actress Sushmita Sen romantic workout with his boyfriend Rohman shaw.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X