ಬಾಯ್ ಫ್ರೆಂಡ್ ಜೊತೆ ಮಾಜಿ ಭುವನ ಸುಂದರಿಯ ರೋಮ್ಯಾಂಟಿಕ್ ವರ್ಕೌಟ್

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 42 ವರ್ಷವಾದರು ಮದುವೆಯಾಗದೆ ಸಿಂಗಲ್ ಆಗಿರುವ ಸುಶ್ಮಿತಾ, ಸದ್ಯ 28 ವರ್ಷದ ಯುವನ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಾರೆ. ಇತ್ತೀಚಿಗೆ ರೂಮರ್ ಪ್ರಿಯತಮ ರೋಹ್ಮಾನ್ ಶಾವ್ಲ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಸುಶ್ಮಿತಾ ಸೇನ್ ವರ್ಕೌಟ್ ವಿಡಿಯೋ ಸಖತ್ ವೈರಲ್ ಆಗಿದೆ.

ಪ್ರಿಯತಮನ ಜೊತೆ ರೋಮ್ಯಾಂಟಿಕ್ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸುಶ್ಮಿತಾ ವಿಡಿಯೋಗೆ ನೆಟ್ಟಿಗರಿಂದ ಸಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿದೆ. ವಿಡಿಯೋ ಜೊತೆಗೆ ಸುಶ್ಮಿತಾ ಒಂದು ಕ್ಯಾಪ್ಷನ್ ಕೂಡ ನೀಡಿದ್ದಾರೆ.

Sushmita Sen Shared A Video Of Her Working Out With Her Boyfriend

"ಈ ವರ್ಕೌಟ್ ನಲ್ಲಿ ಶಕ್ತಿ, ರೂಪ, ಫ್ಲೆಕ್ಸಿಬಿಲಿಟಿ ಮತ್ತು ಬ್ಯಾಲೆನ್ಸ್ ಇರಬಹುದು. ನಂಬಿಕೆ ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ. ರೋಶ್ಮಾನ್ ಶಾವ್ಲ್ ನೀನು ತುಂಬಾ ಅದೃಷ್ಟವಂತ. ನಿನಗಾಗಿ ನಾನು ಅಕ್ಷರಶಹ ಹಿಂದೆ ಬಾಗಿದೆ. ನನಗೆ ಗೊತ್ತು ನನ್ನನ್ನು ಕೆಳಗೆ ಬೀಳದಂತೆ ಹಿಡಿದುಕೊಳ್ಳುತ್ತೀಯಾ" ಎಂದು ಬರೆದುಕೊಂಡಿದ್ದಾರೆ.

Sushmita Sen Shared A Video Of Her Working Out With Her Boyfriend

ಇಬ್ಬರ ಸಂಬಂಧದ ಬಗ್ಗೆ ಸುಶ್ಮಿತಾ ಆಗಲಿ ಅಥವಾ ರೋಶ್ಮಾನ್ ಆಗಲಿ ಎಲ್ಲಿಯೂ ತುಟಿಬಿಚ್ಚಿಲ್ಲ. ಆದ್ರೆ ಇಬ್ಬರು ಇದೇ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೆ ಈ ಜೋಡಿ ಮದುವೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆಯಂತೆ. ಆದ್ರೆ 42 ವರ್ಷದ ಸುಶ್ಮಿತಾ 28 ವರ್ಷದ ಯುವಕ ರೋಶ್ಮಾನ್ ಜೊತೆ ಹಸೆಮಣೆ ಏರುತ್ತಿರುವ ವಿಚಾರ ಚರ್ಚೆಯಾಗುತ್ತಿದೆ.

More from Filmibeat

English summary
Bollywood actress Sushmita Sen shared a video of her working out with her boyfriend.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X