15 ವರ್ಷದ ಬಾಲಕನ ಕೆಟ್ಟ ವರ್ತನೆಗೆ ಬೇಸರಗೊಂಡ ಸುಶ್ಮಿತಾ ಸೇನ್
Recommended Video

ಸಿನಿಮಾ ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಗೆ ಸಿಲುಕುವುದು ಒಂದು ಸಮಸ್ಯೆಯಾದರೇ, ಖಾಸಗಿ ಕಾರ್ಯಕ್ರಮ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದಾಗ ಮತ್ತೊಂದು ರೀತಿಯಲ್ಲಿ ಸಮಸ್ಯೆ ಎದುರಿಸಬೇಕಾಗುತ್ತೆ ಎಂದು ಹಲವು ನಟಿಯರು ಹೇಳಿಕೊಂಡಿದ್ದಾರೆ.
ಇದೀಗ, ಮಾಜಿ ವಿಶ್ವ ಸುಂದರಿ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಈ ಬಗ್ಗೆ ಮಾತನಾಡಿದ್ದು, 15 ವರ್ಷದ ಬಾಲಕನೊಬ್ಬ ತನ್ನ ಬಳಿ ತೋರಿದ ದುರ್ವರ್ತನೆ ಬಗ್ಗೆ ಬಹಿರಂಗಪಡಿಸಿದ್ದಾರೆ.
''ನಟಿಯರು ಕಾರ್ಯಕ್ರಮ ಅಥವಾ ಸಾರ್ವಜನಿಕವಾಗಿ ಹೋದಾಗ, ಜನರು ಮುಗಿ ಬೀಳ್ತಾರೆ. ಅವರಿಂದ ರಕ್ಷಣೆ ಪಡೆಯಲು ಬಾಡಿಗಾರ್ಡ್ ಗಳನ್ನ ಇಟ್ಟುಕೊಂಡಿರುತ್ತಾರೆ. ಆದ್ರೆ, ಕೆಲವೊಮ್ಮೆ ಬಾಡಿಗಾರ್ಡ್ ಗಳಿದ್ದರೂ, ಕೆಟ್ಟ ಅನುಭವ ಆಗಿರುವ ಉದಾಹರಣೆಗಳಿವೆ'' ಎಂದು ಕಿಡಿಕಾರಿದ್ದಾರೆ. 15 ವರ್ಷದ ಬಾಲಕ ಮಾಡಿದ್ದೇನು. ಮುಂದೆ ಓದಿ....

ಆರು ತಿಂಗಳ ಹಿಂದೆ....
ಈ ಬಗ್ಗೆ ಸುಶ್ಮಿತಾ ಸೇನ್ ಮಾತನಾಡುತ್ತಾ ''ಆರು ತಿಂಗಳ ಹಿಂದೆ ನಾನೊಂದು ಅವಾರ್ಡ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಸಮಾರಂಭ ಮುಗಿಸಿ ಹೊರ ಬರುವ ವೇಳೆ ದೊಡ್ಡ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಈ ವೇಳೆ ಹತ್ತು ಮಂದಿ ಬಾಡಿಗಾರ್ಡ್ ಗಳಿದ್ದರೂ ಸಮಯ ಸಾಧಿಸಿದ ಕಿಡಿಗೇಡಿಯೊಬ್ಬ ಹಿಂದಿನಿಂದ ಅನುಚಿತವಾಗಿ ಸ್ಪರ್ಶಿಸಿದ'' ಎಂದ ಘಟನೆಯನ್ನ ಮೆಲುಕು ಹಾಕಿದರು.

ನನಗೆ ಆತನನ್ನ ನೋಡಿ ಆಶ್ಚರ್ಯವಾಯಿತು
''ಹೆಚ್ಚು ಜನ ಇದ್ದ ಕಾರಣ ಈ ಕೃತ್ಯ ಯಾರಿಗೂ ಗೊತ್ತಾಗುವುದಿಲ್ಲ ಎಂದು ಆತ ಭಾವಿಸಿದ್ದ. ಆದ್ರೆ, ಅನುಚಿತ ಸ್ಪರ್ಶದ ಅರಿವು ನನಗೆ ಗೊತ್ತಾಗುತ್ತಿದ್ದಂತೆ ಆತನ ಕೈಗಳನ್ನು ಹಿಡಿದುಕೊಂಡೆ. ಬಳಿಕ ಹಿಂದೆ ತಿರುಗಿ ನೋಡಿ ನನಗೆ ಆಘಾತವಾಯಿತು. ಯಾಕಂದ್ರೆ, ಆತ ಇನ್ನು ಸುಮಾರು ಹದಿನೈದು ವರ್ಷದ ಬಾಲಕನಾಗಿದ್ದ'' ಎಂದು ಶಾಕಿಂಗ್ ಸುದ್ದಿಯನ್ನ ಹೊರಹಾಕಿದ್ದಾರೆ.

ಬಾಲಕ ಎಂಬ ಕಾರಣಕ್ಕೆ ಕ್ಷಮಿಸಬೇಕಾಯಿತು
''ನಾನು ಈ ಸಂಗತಿಯನ್ನು ಹೇಳಿದರೆ ನಿನ್ನ ಪರಿಣಾಮ ಏನಾಗುತ್ತದೆ ಗೊತ್ತಾ...? ಎಂದು ಕೇಳಿದ್ದಕ್ಕೆ ಆತ ಆರಂಭದಲ್ಲಿ ನಾನು ಮಾಡಿಲ್ಲವೆಂದು ವಾದಿಸಿದ. ನಂತರ ತಪ್ಪಾಯಿತು ಎಂದು ತಪ್ಪೊಪ್ಪಿಕೊಂಡ, ಚಿಕ್ಕ ಹುಡುಗ ಎಂಬ ಕಾರಣಕ್ಕೆ ಸುಮ್ಮನಾಗಬೇಕಾಯಿತು'' ಎಂದು ತಮ್ಮ ಅನುಭವವನ್ನ ಹಂಚಿಕೊಂಡರು.

ತಪ್ಪಿಗೆ ತಕ್ಕ ಶಿಕ್ಷೆಯಾಗಬೇಕು
ಹೀಗೆ, ಮಹಿಳೆಯರಿಗೆ ಎಷ್ಟೇ ರಕ್ಷಣೆ ನೀಡಿದರೂ, ಕಿಡಿಗೇಡಿಗಳು ಸಮಸಯ ಸಾಧಿಸಿ ತಮ್ಮ ವರಸೆ ತೋರಿಸುತ್ತಾರೆ. ನಾನು ಹೇಳುವುದೇನೆಂದರೇ ಅತ್ಯಾಚಾರ ಮಾಡುವ ವ್ಯಕ್ತಿಯನ್ನ ಮುಲಾಜಿಲ್ಲದೇ ಗಲ್ಲಿಗೇರಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











