ಮಕ್ಕಳೆದುರೇ ಬಾಯ್‌ಫ್ರೆಂಡ್‌ ಗೆ ಡೀಪ್ ಕಿಸ್ ಮಾಡಿದ ಹೃತಿಕ್ ರೋಷನ್ ಮಾಜಿ ಪತ್ನಿ, ಗ್ರೀಕ್ ಗಾಡ್‌ ಮಾಡಿದ್ದೇನು..?

ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಪ್ರೇಮಕ್ಕೆ ಒಂದು ಅರ್ಥ ಇತ್ತು. ಎದುರಾದ ಎಲ್ಲ ಅಡೆ ತಡೆಯನ್ನು ದಾಟಿಕೊಂಡು ಎರಡು ಹೃದಯಗಳ ಮಿಲನವಾಗುತ್ತಿತ್ತು. ಅರಳಿದ ಪ್ರೇಮಾಂಕುರ ಎರಡು ಜೀವಗಳನ್ನು ಉಸಿರಿಗೆ ಉಸಿರು ತಾಕುವಷ್ಟು ಹತ್ತಿರವನ್ನಾಗಿಸುತ್ತಿತ್ತು. ಹೀಗೆ ಕುದುರಿದ ಪ್ರೀತಿ ಜೀವಮಾನವಡೀ ಜೊತೆಯಾಗೇ ಬಾಳಿಸುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ಪ್ರೀತಿಯನ್ನು ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಲವ್ವು-ನೋವು ಎರಡು ತೀರಾ ಕಾಮನ್ನು. ಇಲ್ಲಿ ನಿನ್ನೆ ಮೊನ್ನೆ ಜೊತೆ ಜೊತೆಯಲ್ಲಿ ಓಡಾಡಿದವರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ. ಇನ್ನೂ ಆದರ್ಶ ದಂಪತಿಗಳಂತೆ ಫೋಸು ಕೊಟ್ಟವರು ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಸಂಬಂಧ ಮುರಿದು ಬಿದ್ದ ಮಾರನೇ ದಿನವೇ ಮತ್ತೊಬ್ಬರ ಜೊತೆ ಕೈ ಕೈ ಹಿಡಿದುಕೊಂಡು ಓಡಾಡುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆಯಂತೆ ಇರುವ ಹೃತಿಕ್ ರೋಷನ್ ಮತ್ತು ಸುಸೈನ್ ಖಾನ್ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಎದೆಯೆತ್ತರಕ್ಕೆ ಬೆಳೆಯುತ್ತಿರುವ ಮಕ್ಕಳ ಮುಂದೆ ಹೃತಿಕ್ ಮಾಜಿ ಪತ್ನಿ ಸುಸೈನ್ ತಮ್ಮ ಪ್ರಿಯಕರನ ತುಟಿಗೆ ತುಟಿ ಒತ್ತಿದ್ದಾರೆ.

Sussanne Khan kissed Arslan Goni at her birthday party in front of her sons and ex-husband Hrithik

ಹೌದು, ಅಸಲಿಗೆ ಹೃತಿಕ್ ರೋಷನ್ ಅವರಿಂದ ದೂರವಾದ ನಂತರ ಆರ್ಸ್ಲಾನ್ ಗೋನಿಗೆ ಸುಸೈನ್ ಖಾನ್ ತಮ್ಮ ಹೃದಯವನ್ನು ನೀಡಿದ್ದರು. ಪ್ರೀತಿ-ಪ್ರೇಮ ಎಂದು ಸುತ್ತಾಡಲು ಶುರು ಮಾಡಿದ್ದರು. ಈ ಕಡೆ ಹೃತಿಕ್ ರೋಷನ್ ಕೂಡ ಸುಸೈನ್ ಅವರನ್ನು ಮರೆತು ತನಕ್ಕಿಂತ ಹನ್ನೆರಡು ವರ್ಷ ಚಿಕ್ಕವಳಾಗಿರುವ ಸಬಾ ಆಜಾದ್ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದರು.

ಹಾಗಂಥ ಸುಸೈನ್ ತಮ್ಮ ಮಾಜಿ ಪತಿ ಹೃತಿಕ್ ರೋಷನ್ ಅವರಿಂದ ಸಂಪೂರ್ಣ ದೂರವಾಗಿರಲಿಲ್ಲ. ಹೃತಿಕ್ ಕೂಡ ಸುಸೈನ್ ಅವರನ್ನು ಸಂಪೂರ್ಣ ಮರೆತಿರಲಿಲ್ಲ. ಸಮಯ ಸಿಕ್ಕಾಗ ಸುಸೈನ್ ಖಾನ್ ತಮ್ಮ ಪ್ರಿಯಕರ ಆರ್ಸ್ಲಾನ್ ಗೋನಿ ಜೊತೆ ಹೃತಿಕ್ ರೋಷನ್ ಮತ್ತು ಸಬಾ ಅವರನ್ನು ಭೇಟಿಯಾಗುತ್ತಿದ್ದರು. ನಾಲ್ಕು ಜನ ಜೊತೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು. ಇನ್ನೂ ಮಕ್ಕಳಿಗಾಗಿ ಸುಸೈನ್ ಆಗಾಗ ಹೃತಿಕ್ ರೋಷನ್ ಮನೆಗೆ ಬರುತ್ತಿದ್ದರು. ಸಮಯ ಸಿಕ್ಕಾಗ ಹೃತಿಕ್ ತಮ್ಮ ಮಕ್ಕಳು ಮತ್ತು ಮಾಜಿ ಪತ್ನಿಯನ್ನು ಕರೆದುಕೊಂಡು ಸಪ್ತಸಾಗರದಾಚೆ ಪ್ರವಾಸಕ್ಕೆ ಕೂಡ ಹೋಗುತ್ತಿದ್ದರು.

Sussanne Khan kissed Arslan Goni at her birthday party in front of her sons and ex-husband Hrithik

ಆದರೆ ಈಗ ಹೃತಿಕ್ ಮತ್ತು ಮಕ್ಕಳೆದುರೇ ಸುಸೈನ್ ಖಾನ್ ತನ್ನ ಬಾಯ್‌ಫ್ರೆಂಡ್ ಆರ್ಸ್ಲಾನ್ ಗೋನಿಗೆ ಡಿಪ್‌ ಕಿಸ್ ನೀಡಿದ್ದಾರೆ. ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟ್ರೋಲಿಗರಿಗೆ ಆಹಾರವೂ ಆಗಿದ್ದಾರೆ. ಹೌದು, ಅಸಲಿಗೆ ಸುಸೈನ್ ಮೊನ್ನೆ ಅಕ್ಟೋಬರ್ 26ರಂದು ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ತಮ್ಮ ಆತ್ಮೀಯ ಸ್ನೇಹಿತರಿಗಾಗಿ ಪಾರ್ಟಿಯನ್ನು ಕೂಡ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಸುಸೈನ್ ಮಾಜಿ ಪತಿ ಹೃತಿಕ್ ರೋಷನ್ ತಮ್ಮ ಇಬ್ಬರು ಮಕ್ಕಳಾದ ಹೇಹ್ರಾನ್, ಹರಿದಾನ್, ಮತ್ತು ತಮ್ಮ ಪ್ರಿಯತಮೆ ಸಬಾ ಜೊತೆ ಭಾಗಿಯಾಗಿದ್ದರು.

ಇದೇ ಸಮಯದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿರುವ ಸುಸೈನ್ ಮುತ್ತಿನ ಮತ್ತಲ್ಲಿ ತೇಲಾಡಿದ್ದಾರೆ. ವಾಲಾಡಿದ್ದಾರೆ. ಮಾಜಿ ಪತ್ನಿಯ ಈ ಡೀಪ್ ಕಿಸ್ ಕಂಡು ಹೃತಿಕ್ ರೋಷನ್ ಕೂಡ ಖುಷಿ ಪಟ್ಟಿದ್ದಾರೆ. ಚಪ್ಪಾಳೆ ತಟ್ಟಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಸೈನ್ ಮತ್ತು ಹೃತಿಕ್ ವಿರುದ್ಧ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.ಮಕ್ಕಳೆದುರು ಮಾದರಿ ವ್ಯಕ್ತಿಯಾಗಬೇಕಿದ್ದ ನೀವೆ ಹೀಗೆಲ್ಲ ಮಾಡುತ್ತಿದ್ದೀರಾ ನಿಮಗೆಲ್ಲ ಏನು ಹೇಳಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.ಮಾಜಿ ಗಂಡ ಅಂದರೆ ನಿನ್ನಂತೆ ಇರಬೇಕು ಎಂದು ಹೃತಿಕ್ ರೋಷನ್‌ ಅವರಿಗೆ ಒಂದು ವರ್ಗ ತರಾಟೆಯನ್ನು ತೆಗೆದುಕೊಳ್ಳುತ್ತಿದೆ.

More from Filmibeat

Read more about: hrithik roshan bollywood love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X