For Quick Alerts
  ALLOW NOTIFICATIONS  
  For Daily Alerts

  ಹೃತಿಕ್-ಕಂಗನಾ ವಿವಾದದ ಬಗ್ಗೆ ಹೃತಿಕ್ ಮಾಜಿ ಪತ್ನಿ ಏನಂತಾರೆ?

  By ಸೋನು ಗೌಡ
  |

  'ಕ್ರಿಷ್' ಖ್ಯಾತಿಯ ನಟ ಹೃತಿಕ್ ರೋಷನ್ ಮತ್ತು 'ಕ್ವೀನ್' ಖ್ಯಾತಿಯ ನಟಿ ಕಂಗನಾ ರನೌತ್ ಅವರ ನಡುವೆ ನಡೆಯುತ್ತಿರುವ ಕಾನೂನು ಸಮರದ ಬಗ್ಗೆ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಇದೀಗ ಮೌನ ಮುರಿದಿದ್ದಾರೆ.

  'ನನ್ನ ಮಾಜಿ ಪತಿ ಹೃತಿಕ್ ರೋಷನ್ ಮತ್ತು ಕಂಗನಾ ರನೌತ್ ಅವರ ನಡುವೆ ನಡೆಯುತ್ತಿರುವ ಸಮರದ ಬಗ್ಗೆ ನಾನು ಏನು ಯೋಚನೆ ಮಾಡುತ್ತಿದ್ದೇನೆ ಅಂತ ನಿಮಗೆ ತಿಳಿಯಬೇಕೆ?. ಹಾಗಾದ್ರೆ ಕ್ಷಮಿಸಿ ನಿಮಗೆ ಅದು ತಿಳಿಯೋದಿಲ್ಲ. ಹಾಗಾಗಿ ನೀವೇ ಊಹಿಸಿ ಅಂತ ಸುಸೇನ್ ಖಾನ್ ಟ್ವೀಟ್ ಮಾಡಿದ್ದಾರೆ.[ಕಂಗನಾ-ಹೃತಿಕ್ ಅಫೇರ್ ಕೇಸ್ ನಲ್ಲಿ ಮಹತ್ತರ ತಿರುವು]

  ಅಂದಹಾಗೆ ಬಾಲಿವುಡ್ ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರನೌತ್ ಅವರ ಜಗಳ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಂಡು ಬಹಳ ಕೀಳು ಮಟ್ಟಕ್ಕೆ ಹೋಗುತ್ತಿದೆ.

  ಇಡೀ ಬಾಲಿವುಡ್ ಸೇರಿದಂತೆ ಎಲ್ಲರೂ ಇವರಿಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಇವರಿಬ್ಬರು ಇಷ್ಟೆಲ್ಲಾ ಕತ್ತಿ ಮಸೆಯುತ್ತಿದ್ದರೂ ಕೂಡ ಹೃತಿಕ್ ಆಪ್ತರು ಮತ್ತು ಕುಟುಂಬ ವರ್ಗದವರು ಮೌನವಾಗಿ ಎಲ್ಲವನ್ನು ನೋಡುತ್ತಿದ್ದಾರೆ. ಆದರೆ ಯಾಕೆ ಅನ್ನೋದು ಇನ್ನು ಯಾರಿಗೂ ಗೊತ್ತಾಗುತ್ತಿಲ್ಲ.['ಕ್ವೀನ್' ಕಂಗನಾ-ಹೃತಿಕ್ ಬಗ್ಗೆ ಹೊರಬಿದ್ದಿರುವ ಶಾಕಿಂಗ್ ನ್ಯೂಸ್]

  ನಟ ಹೃತಿಕ್ ರೋಷನ್ ಅವರು ಈ ವಿಚಾರವಾಗಿ ತಮ್ಮ ಮನೆಯ ಸ್ತ್ರೀಯರನ್ನು ತಮ್ಮ ಪರವಾಗಿ ವಕಾಲತ್ತು ವಹಿಸಲು ಪ್ರಯತ್ನ ಮಾಡಬಹುದಿತ್ತು. ಆದರೆ ಹೃತಿಕ್ ಅವರು ತಮ್ಮ ತಾಯಿ, ಸಹೋದರಿ ಅವರೆಲ್ಲಾ ಯಾಕೆ ತಮ್ಮ ಮಾಜಿ ಪತ್ನಿಯನ್ನು ಕೂಡ ಈ ಸಮರದ ನಡುವೆ ತರಲು ನಿರಾಕರಿಸಿದ್ದಾರೆ. ಹೃತಿಕ್-ಸುಸೇನ್ ಅವರ ಫೋಟೋ ಗ್ಯಾಲರಿ ನೋಡಿ ಕೆಳಗಿನ ಸ್ಲೈಡುಗಳಲ್ಲಿ...

  ಹೃತಿಕ್-ಕಂಗನಾ ವಿವಾದದ ಬಗ್ಗೆ ಹೃತಿಕ್ ಮಾಜಿ ಪತ್ನಿ ಏನಂತಾರೆ?

  English summary
  Recently, there were many reports doing the rounds that Sussanne Khan was overheard discussing about her ex-husband Hrithik Roshan and Kangana Ranaut case with her family at the Istanbul airport.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X