ಡಿವೋರ್ಸ್ ಬಳಿಕ ಮತ್ತೊಬ್ಬನ ಜೊತೆ ಹೃತಿಕ್ ಮಾಜಿ ಪತ್ನಿ ಡೇಟಿಂಗ್, ತಾಯಿ ಖುಷ್!

ಬಣ್ಣದ ಲೋಕದಲ್ಲಿ ಡಿವೋರ್ಸ್ ಅನ್ನೋದು ಈಗ ಸರ್ವೇ ಸಾಧಾರಣ ಎನ್ನುವಂತಾಗಿಬಿಟ್ಟಿದೆ. ಡಿವೋರ್ಸ್ ಬಳಿಕ ಮತ್ತೊಬ್ಬರ ಜೊತೆ ಪ್ರೀತಿಲಿ ಬೀಳುವವರ ಸಂಖ್ಯೆ ಕೂಡ ಹೆಚ್ಚುತ್ತಿದೆ. ಕೆಲವರು 2ನೇ ಮದುವೆ ಆದರೆ ಮತ್ತೆ ಕೆಲವರು ಮದುವೆ ಆಗದೇ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ.

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಸುಸೈನ್ ಖಾನ್ ಬಾಲ್ಯ ಸ್ನೇಹಿತರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆ ಆಗಿದ್ದರು. 2 ಮಕ್ಕಳು ಕೂಡ ಇದ್ದಾರೆ. ಆದರೆ 14 ವರ್ಷಗಳ ಕಾಲ ಒಟ್ಟಿಗೆ ಜೀವನ ಸಾಗಿಸಿದ ಜೋಡಿ ಬಳಿಕ ದೂರಾಗುವ ಮನಸ್ಸು ಮಾಡಿದ್ದರು. ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರೂ 2014ರಲ್ಲಿ ಡಿವೋರ್ಸ್ ಪಡೆದಿದ್ದರು. ಬಳಿಕ ಇಬ್ಬರೂ ಕೂಡ ಬೇರೆ ಬೇರೆ ಪಾರ್ಟ್ನರ್‌ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ.

Sussanne Khan s Mom Zarine opens up On Wedding With Arslan Goni

ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಪಾರ್ಟಿ, ಪಬ್ ಅಂತ ಸುತ್ತಾಡುತ್ತಿರುತ್ತಾರೆ. ಮತ್ತೊಂದು ಕಡೆ ಆರ್ಸ್ಲಾನ್ ಗೋನಿ ಜೊತೆ ಸುಸೈನ್ ಖಾನ್ ಅಫೇರ್ ಗಾಸಿಪ್ ಕೇಳಿಬಂದಿತ್ತು. 3 ವರ್ಷಗಳ ಹಿಂದೆ ತಮ್ಮ ರಿಲೇಷನ್‌ಶಿಪ್ ಅನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಖಚಿತಪಡಿಸಿದ್ದರು. ಇದೀಘ ಈ ಬಗ್ಗೆ ಸುಸೈನ್ ತಾಯಿ ಜರೀನ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಆಂಗ್ಲ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಡಿವೋರ್ಸ್ ಬಳಿಕ ಹೃತಿಕ್ ಹಾಗೂ ಸುಸೈನ್ ಮಕ್ಕಳಿಗಾಗಿ ಸ್ನೇಹಿತರಾಗಿಯೇ ಉಳಿದಿದ್ದಾರೆ. ಆಗಾಗ್ಗೆ ಮಕ್ಕಳ ಜೊತೆ ಇಬ್ಬರೂ ಕಾಣಿಸಿಕೊಳ್ಳುತ್ತಿರುತ್ತಾರೆ. ಹಾಗಂತ ಇಬ್ಬರೂ ಒಂಟಿಯಾಗಿ ಇಲ್ಲ. ಬೇರೆ ಬೇರೆಯವರ ಜೊತೆ ಪ್ರೀತಿಲಿ ಬಿದ್ದಿದ್ದಾರೆ. ಆರ್ಸ್ಲಾನ್ ಗೋನಿ ಬಗ್ಗೆ ಇದೀಗ ಜರೀನಾ ಖಾನ್ ಮಾತನಾಡಿದ್ದಾರೆ. ಆತ ಕಾನೂನು ಪದವಿ ಪಡೆದಿದ್ದಾನೆ. ಮ್ಮುವಿನ ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸೇರಿದವವನು. ನನ್ನ ಮಗಳು ಮತ್ತು ಆರ್ಸ್ಲಾನ್ ಒಟ್ಟಿಗೆ ಸಂತೋಷವಾಗಿರುವುದಕ್ಕೆ ನನಗೆ ಸಂತಸ ತಂದಿದೆ ಎಂದಿದ್ದಾರೆ.

Sussanne Khan s Mom Zarine opens up On Wedding With Arslan Goni

ಸುಸೈನ್ ಹಾಗೂ ಅರ್ಸ್ಲಾನ್ ಮದುವೆ ಬಗ್ಗೆ ಜರೀನ್ ಖಾನ್ ಪ್ರತಿಕ್ರಿಯಿಸಿದ್ದಾರೆ. "ಜೀವನದಲ್ಲಿ ಮದುವೆ ಅನ್ನೋದು ದೊಡ್ಡ ವಿಷಯವಲ್ಲ. ಹಾಲಿವುಡ್ ದಂಪತಿಗಳಾದ ಗೋಲ್ಡಿ ಹಾನ್ ಮತ್ತು ಕರ್ಟ್ ರಸೆಲ್ ನೋಡಿ, ಅನೇಕ ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಮತ್ತು ಇನ್ನೂ ಒಟ್ಟಿಗೆ ಸಂತೋಷವಾಗಿದ್ದಾರೆ ಎಂದು ಜರೀನ್ ಖಾನ್ ಹೇಳಿದ್ದಾರೆ.

ಇಂದಿನ ಜೀವನದಲ್ಲಿ ನೀವು ಯಾರೊಂದಿಗಾದರೂ ಸಂತೋಷವನ್ನು ಕಂಡುಕೊಂಡರೆ ನೀವು ಅದೃಷ್ಟವಂತರು. ಮದುವೆಯಾಗುವುದು ಮತ್ತು ಒಟ್ಟಿಗೆ ನೆಲೆಸುವುದು ಸಂತೋಷವಾಗಿರಲು ಎಂಬ ಹಳೆಯ ಕಲ್ಪನೆ, ಇನ್ನು ಮುಂದೆ ಅದರಲ್ಲಿ ಯಾವುದೇ ಸತ್ಯ ಇಲ್ಲ. ಅರ್ಸ್ಲಾನ್ ಮತ್ತು ಸುಸೈನ್‌ ಒಟ್ಟಿಗೆ ಸಂತೋಷವಾಗಿದ್ದಾರೆ ಮತ್ತು ಅವರ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದಾರೆ" ಅದೇ ನನಗೆ ಖುಷಿ ಎಂದಿದ್ದಾರೆ.

ಹೃತಿಕ್ ಎಂದಿಗೂ ನನ್ನ ಮಗನಾಗಿರುತ್ತಾನೆ. ಅವರಿಬ್ಬರೂ ಒಟ್ಟಿಗೆ ಇಲ್ಲದಿರಬಹುದು. ಆದರೆ ಒಬ್ಬರನ್ನೊಬ್ಬರು ಸ್ನೇಹಿತರಂತೆ ಪ್ರೀತಿಸುತ್ತಾರೆ. ಇಬ್ಬರೂ ಒಟ್ಟಿಗೆ ಅವರ ಮಕ್ಕಳಲ್ಲಿ ಗುಣಗಳನ್ನು ಬೆಳೆಸುತ್ತಿದ್ದಾರೆ ಎಂದು ಜರೀನ್ ಖಾನ್ ವಿವರಿಸಿದ್ದಾರೆ.

More from Filmibeat

English summary
Sussanne Khan's Mother On Daughter's dating With Arslan Goni
Read more about: hrithik roshan bollywood hindi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X