ಸಿನಿಮಾ ಇಲ್ಲ, ಕೆಲಸನೂ ಇಲ್ಲ...ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ನಟ
ಕೊರೊನಾ ವೈರಸ್ ಬಿಕ್ಕಟ್ಟಿನ ಪರಿಣಾಮ ಕೆಲಸ ಇಲ್ಲ, ಹಣವೂ ಇಲ್ಲ, ಜೀವನ ನಡೆಸುವುದು ಕಷ್ಟಕರವಾಗಿದೆ ಎಂಬ ಕಾರಣಕ್ಕೆ ಮನನೊಂದ ಸಿನಿಮಾ ನಟ ಫೇಸ್‌ಬುಕ್ ಲೈವ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ (ಜೂನ್ 8) ವರದಿಯಾಗಿದೆ.
ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದೇ, ಹಣವೂ ಇಲ್ಲದೇ ಜೀವನ ನಡೆಸಲು ಸಾಧ್ಯವಾಗದೆ ಬಹಳಷ್ಟು ಜನ ಕಷ್ಟಕ್ಕೆ ಸಿಲುಕಿದ್ದಾರೆ. ಮಾನಸಿಕ ಖಿನ್ನತೆಗೂ ಒಳಗಾಗಿರುವ ಬಗ್ಗೆಯೂ ವರದಿಗಳಾಗಿವೆ. ಶೂಟಿಂಗ್ ಬೇರೆ ನಡೆಯುತ್ತಿಲ್ಲ. ಚಿತ್ರರಂಗ ಸಂಪೂರ್ಣವಾಗಿ ಸ್ತಬ್ದವಾಗಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ ಬೆಂಗಾಳಿ ನಟ ಸುವೊ ಚಕ್ರವರ್ತಿಗೆ ಇದು ತೀರಾ ಆಘಾತ ತಂದಿತ್ತು. ತೀವ್ರ ಅಸಹಾಯಕತೆ ಸ್ಥಿತಿ ತಲುಪಿದ ನಟ ಫೇಸ್‌ಬುಕ್ ಲೈವ್‌ನಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮುಂದೆ ಓದಿ...
( ಚಿತ್ರಕೃಪೆ: ಟ್ವಿಟ್ಟರ್)

ನಾನು ಹೋಗುತ್ತಿದ್ದೇನೆ
'ನಾನು ಹೋಗುತ್ತಿದ್ದೇನೆ' ಎಂದು ಫೇಸ್‌ಬುಕ್ ಪೋಸ್ಟ್ ಹಾಕಿ ಲೈವ್ ಬಂದಿದ್ದ ನಟ ಸುವೊ ಚಕ್ರವರ್ತಿ, 'ತಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ, ನನಗೆ ಬದುಕಲು ಇಷ್ಟವಿಲ್ಲ, ನಾನು ಸಾಯುತ್ತೇನೆ' ಎಂದು ಹೇಳಿ ಲೈವ್‌ನಲ್ಲಿ ನಿದ್ರೆ ಮಾತ್ರೆ ಸೇವಿಸಿದ್ದಾರೆ. ಇದರಿಂದ ಗಾಬರಿಗೊಂಡ ಸ್ನೇಹಿತರು ಪೊಲೀಸರ ಸಹಾಯದಿಂದ ಆತನನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉದ್ಯೋಗ ಇಲ್ಲ, ಹಣವೂ ಇಲ್ಲ
''ಲಾಕ್‌ಡೌನ್ ಸಮಯದಲ್ಲಿ ಶೂಟಿಂಗ್ ಇಲ್ಲ, ಕೆಲಸ ಇಲ್ಲ. ಜೀವನ ಮಾಡುವುದು ಹೇಗೆ, ನನ್ನ ಮಗನಿಗೆ 31 ವರ್ಷ ವಯಸ್ಸು. ನಿರುದ್ಯೋಗಿ ಎಂದು ಅಮ್ಮ ಹೇಳ್ತಾರೆ. ಕಳೆದ ವರ್ಷ ಅಪ್ಪ ತೀರಿಕೊಂಡರು. ಪಿಂಚಣಿ ಹಣದಲ್ಲಿ ಜೀವನ ಮಾಡುತ್ತಿದ್ದೇವೆ'' ಎಂದು ಲೈವ್‌ನಲ್ಲಿ ಸುವೊ ಚಕ್ರವರ್ತಿ ಹೇಳಿಕೊಂಡಿದ್ದರು.

ಮಹಡಿಯಿಂದ ಜಿಗಿಯುವುದು ಇಷ್ಟವಿಲ್ಲ
''ನನಗೆ ಮಹಡಿಯಿಂದ ಜಿಗಿಯುವುದು, ಕೈ ಕತ್ತರಿಸಿಕೊಳ್ಳುವುದು ಇದೆಲ್ಲ ನನಗೆ ಇಷ್ಟ ಆಗಲ್ಲ. ಅದಕ್ಕಾಗಿ ನಾನು ನಿದ್ರೆ ಮಾತ್ರೆ ಸೇವಿಸುತ್ತಿದ್ದೇನೆ. ಇದನ್ನು ತೆಗೆದುಕೊಂಡರೆ ಅಧಿಕರಕ್ತದೊತ್ತಡ ಸಂಭವಿಸಿ ಹೃದಯಾಘಾತ ಬರುವ ಸಾಧ್ಯತೆ ಇದೆ'' ಎಂದು ಲೈವ್‌ನಲ್ಲಿ ಸುವೊ ಹೇಳಿದ್ದರು.
Recommended Video

ಯಾರು ಈ ಸುವೊ ಚಕ್ರವರ್ತಿ?
ಬೆಂಗಾಳಿ ಭಾಷೆಯಲ್ಲಿ ಕೆಲವು ಸಿನಿಮಾಗಳಲ್ಲಿ ಸುವೊ ಚಕ್ರವರ್ತಿ ನಟಿಸಿದ್ದಾರೆ. 'ಮಂಗಲ್ ಚಂಡಿ', 'ಮಾನಸಾ' ಅಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ, ಸುವೊ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದಾಗ ಅವರ ತಾಯಿ ಮತ್ತು ಸಹೋದರಿಯೂ ಮನೆಯಲ್ಲಿದ್ದರು. ಆದರೆ. ಮಗ ಏನು ಮಾಡುತ್ತಿದ್ದಾನೆ ಎನ್ನುವುದರ ಬಗ್ಗೆ ಮಾಹಿತಿ ಇರಲಿಲ್ಲ ಎಂದು ತಿಳಿದು ಬಂದಿದೆ.


Click it and Unblock the Notifications











