ಕರೀನಾ ಪುತ್ರ ಜಹಾಂಗೀರ್ ಹೆಸರನ್ನು ವಿರೋಧಿಸಿದವರು 'ಕತ್ತೆಗಳು' ಎಂದ ನಟಿ ಸ್ವರಾ ಭಾಸ್ಕರ್
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮೊದಲ ಮಗುವಿಗೆ ತೈಮೂರ್ ಎಂದು ಹೆಸರಿಟ್ಟು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 2ನೇ ಮಗು ಜನಿಸಿದ ಬಳಿಕ ಏನೆಂದು ಹೆಸರಿಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಕರೀನಾ-ಸೈಫ್ ದಂಪತಿಯ ಎರಡನೇ ಮಗುವಿನ ಹೆಸರು ಬಹಿರಂಗವಾಗುವ ಮೂಲಕ ಚರ್ಚೆಗೆ ಕಾರಣವಾಗಿದೆ. ಅಂದಹಾಗೆ ಕರೀನಾ ಎರಡನೇ ಮಗನಿಗೆ ಜಹಾಂಗೀರ್ ಎಂದು ಹೆಸರಿಟ್ಟು ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದಾರೆ.
ಸೈಫ್ ದಂಪತಿ ತಮ್ಮ ಎರಡನೇ ಮಗನಿಗೆ 'ಜೆಹ್ ಅಲಿ ಖಾನ್' ಎಂದು ಹೆಸರಿಟ್ಟಿದ್ದಾರೆ ಎನ್ನುವ ವಿಚಾರ ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಕರೀನಾ ಕಪೂರ್ ತಂದೆ ರಣದೀರ್ ಕಪೂರ್ ಈ ಬಗ್ಗೆ ಮಾಧ್ಯಮಗಳಿಗೆ ಸುಳಿವು ನೀಡಿದ್ದರು. ಆದ್ರೀಗ, ಕರೀನಾ ಮಗನ ಹೆಸರು ಜೆಹ್ ಅಲ್ಲ, ಜಹಾಂಗೀರ್ ಎನ್ನುವುದು ಬಹಿರಂಗವಾಗಿದೆ.
ಜಹಾಂಗೀರ್ ಹೆಸರು ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್‌ನ ಮತ್ತೋರ್ವ ಖ್ಯಾತ ನಟಿ ಸ್ವರಾ ಭಾಸ್ಕರ್, ಕರೀನಾ ಕಪೂರ್ ಬೆಂಬಲಕ್ಕೆ ನಿಂತಿದ್ದಾರೆ. ಜಹಾಂಗೀರ್ ಹೆಸರನ್ನು ಟೀಕಿಸಿ ವಿರೋಧ ಮಾಡುತ್ತಿರುವರು ಕತ್ತೆಗಳು ಎಂದು ಕರೆದಿದ್ದಾರೆ.

ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸ್ವರಾ, "ಕರೀನಾ ದಂಪತಿ ಅವರ ಮಕ್ಕಳಿಗೆ ಹೆಸರಿಟ್ಟಿದ್ದಾರೆ. ಆ ಜೋಡಿ ನೀವಲ್ಲ. ಆದರೆ ಅವರ ಹೆಸರುಗಳ ಬಗ್ಗೆ ನೀವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೀರಿ. ನಿಮ್ಮ ಈ ಯೋಚನೆ ಭಾವನೆಯನ್ನು ನೋಯಿಸುವ ಸಮಸ್ಯೆಯಾಗಿದೆ. ನೀವು ವಿಶ್ವದ ಅತಿ ಕತ್ತೆಗಳು" ಎಂದು ಖಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಟ್ರೋಲಿಗರಿಗೆ ಖಡಕ್ ಉತ್ತರ ನೀಡಿದ್ದಾರೆ.
ಕರೀನಾ ಕಪೂರ್ ಇತ್ತೀಚಿಗೆ ಬಿಡುಗಡೆ ಮಾಡಿದ ಪ್ರೆಗ್ನೆನ್ಸಿ ಬೈಬಲ್ ಪುಸ್ತಕದಲ್ಲಿ ತನ್ನ ಎರಡನೇ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಎರಡನೇ ಮಗನಿಗೆ ಜಹಾಂಗೀರ್ ಅಲಿ ಖಾನ್ ಎಂದು ಹೆಸರಿಡಲಾಗಿದೆ ಎನ್ನುವ ವಿಚಾರ ಬಯಲಾಗುತ್ತಿದಂತೆ ಕೆಲವರು ವಿರೋಧಿಸಿದ್ದಾರೆ. ಜಹಾಂಗೀರ್, ಖಿಲ್ಜಿ, ಔರಂಗಜೇಬ್ ಮಾಡ್ಕೊಳ್ಳಿ ಎಂದು ಖಂಡಿಸಿದ್ದಾರೆ. ಇನ್ನು ಕೆಲವರು ತಮ್ಮ ಮಕ್ಕಳಿಗೆ ಏನು ಹೆಸರಿಡಬೇಕು ಎನ್ನುವುದು ಅವರಿಗೆ ಬಿಟ್ಟಿದ್ದು, ಅವರಿಗೆ ಆ ಸ್ವಾತಂತ್ರ್ಯ ಇದೆ ಎಂದು ಬೆಂಬಲಕ್ಕೆ ನಿಂತಿದ್ದಾರೆ.
ನಟಿ ಕರೀನಾ ಕಪೂರ್ ಫೆಬ್ರವರಿ 22 ರಂದು ಮುಂಬೈನ ಬ್ರಿಡ್ಜ್ ಕ್ಯಾಂಡಿ ಹಾಸ್ಪಿಟಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಎರಡನೇ ಮಗುವನ್ನು ಸ್ವಾಗತಿಸಿ ಸುಮಾರು ಆರು ತಿಂಗಳು ಕಳೆದಿದೆ. ಆರು ತಿಂಗಳ ಬಳಿಕ ಮಗನ ಹೆಸರನ್ನು ಬಹಿರಂಗ ಮಾಡಿ ಟ್ರೋಲಿಗೆ ಗುರಿಯಾಗಿದ್ದಾರೆ.

ಈ ಮೊದಲು 2016ರಲ್ಲಿ ಮೊದಲ ಮಗುಗೆ ಜನ್ಮ ನೀಡಿದ್ದ ಕರೀನಾ ಮಗನಿಗೆ ತೈಮೂರ್ ಅಲಿ ಖಾನ್ ಎಂದು ಹೆಸರಿಟ್ಟಾಗಲೂ ವಿವಾದಕ್ಕೆ ಕಾರಣವಾಗಿತ್ತು. ನೆಟ್ಟಿಗರು ಕರೀನಾ ಮತ್ತು ಸೈಫ್ ದಂಪತಿಯ ವಿರುದ್ಧ ಕಿಡಿಕಾರಿದ್ದರು. ತೈಮೂರ್ ಓರ್ವ ಸರ್ವಾಧಿಕಾರಿ, ಭಾರತದ ಮೇಲೆ ದಾಳಿ ನಡೆಸಿ, ದೆಹಲಿಯಲ್ಲಿ ನೂರಾರು ಮಂದಿಯನ್ನು ಹತ್ಯೆ ಮಾಡಿದ್ದ' ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಂತಹ ವ್ಯಕ್ತಿಯ ಹೆಸರನ್ನು ಮಗನಿಗೆ ಇಡಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿತ್ತು. ಹಾಗಾಗಿ, ಈ ಹೆಸರು ಕೈಬಿಡುವಂತೆ ಒತ್ತಾಯಿಸಿದ್ದರು. ಆದರೆ ಕರೀನಾ-ಸೈಫ್ ದಂಪತಿ ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.
ಕರೀನಾ ಸದ್ಯ ಬಾಲಿವುಡ್‌ಗೆ ರೀ-ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಸಖತ ವರ್ಕೌಟ್ ಮಾಡುತ್ತಿರುವ ಕರೀನಾ ತೆಳ್ಳಗಾಗುತ್ತಿದ್ದಾರೆ. ಸದ್ಯ ಕರೀನಾ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.


Click it and Unblock the Notifications











