»   »  ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ.!

ತನ್ನ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಸತ್ಯ ಬಿಚ್ಚಿಟ್ಟ ನಟಿ.!

Posted By:
Subscribe to Filmibeat Kannada

'ಬಾಲಿವುಡ್ ನಲ್ಲಿ ಕಾಸ್ಟಿಂಗ್ ಕೌಚ್ ಇದೆ' ಹಾಗೂ 'ಒಳ್ಳೆಯ ಅವಕಾಶ ಸಿಗಬೇಕು ಅಂದರೆ ಕಾಂಪ್ರಮೈಸ್ ಮಾಡಿಕೊಳ್ಳಬೇಕು' ಎನ್ನುವ ಮಾತು ಪದೇ ಪದೇ ಕೇಳಿ ಬರುತ್ತಿದೆ. ಈಗ ಮತ್ತೊಬ್ಬ ನಟಿ ತನ್ನ ಮೇಲಾದ ಲೈಂಗಿಕ ಕಿರುಕುಳ ಬಗ್ಗೆ ಹೇಳಿಕೊಂಡಿದ್ದಾರೆ.

ಹೆಣ್ಮಕ್ಕಳನ್ನ ಮಂಚಕ್ಕೆ ಕರೆಯುವವರಿಗೆ ಚಪ್ಪಲಿ ತಗೊಂಡು ಹೊಡೆಯಿರಿ ಎಂದ ಜಗ್ಗೇಶ್!

ನಟಿ ಸ್ವರಾ ಭಾಸ್ಕರ್ ಚಿತ್ರರಂಗಕ್ಕೆ ಬಂದ ಸಮಯದಲ್ಲಿ ಒಬ್ಬ ನಿರ್ದೇಶಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ್ದರಂತೆ. ರಾತ್ರಿ ವೇಳೆ ಚಿತ್ರದ ಕಥೆ ಹೇಳುತ್ತೇನೆ ಎಂದು ನಿರ್ದೇಶಕನೊಬ್ಬ ಅವರಿದ್ದ ಹೋಟೆಲ್ ಗೆ ಬಂದು ಲೈಂಗಿಕ ಕಿರುಕುಳ ನೀಡಿದ್ದರಂತೆ.

Swara Bhaskar speaks about sexual harassment

ಜೊತೆಗೆ ''ಆ ವೇಳೆ ನನಗೆ ತುಂಬ ಭಯ ಆಗುತ್ತಿತ್ತು. ನಾನು ಈ ರೀತಿ ಯಾವುದಕ್ಕೂ ಒಪ್ಪಿಕೊಳ್ಳದ ಕಾರಣ ನನಗೆ ಸಾಕಷ್ಟು ಆಫರ್ ಗಳು ಸಿಕ್ಕಿಲ್ಲ'' ಎಂದು ಸ್ವರಾ ಭಾಸ್ಕರ್ ಇತ್ತೀಚಿಗೆ ಹೇಳಿಕೆ ನೀಡಿದ್ದಾರೆ. ಅಂದಹಾಗೆ, ಸ್ವರಾ ಹಿಂದಿಯಲ್ಲಿ 'ತನು ವೆಡ್ಸ್ ಮನು', 'ಪ್ರೇಮ್ ರತನ್ ಧನ್ ಪಾಯೋ' ಸೇರಿದಂತೆ ಕೆಲ ಸಿನಿಮಾದಲ್ಲಿ ನಟಿಸಿದ್ದಾರೆ.

English summary
Bollywood actress Swara Bhaskar recollects sexual harassment incident.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada