4 ವರ್ಷದ ಹುಡುಗ 'ಆಂಟಿ' ಎಂದಿದ್ದಕ್ಕೆ ಕೆಟ್ಟ ಪದದಿಂದ ನಿಂದನೆ: ನಟಿ ವಿರುದ್ಧ ರೊಚ್ಚಿಗೆದ್ದ ಜನ

'ನಾನು ಭೇಟಿ ನೀಡಿದ ದೇಶಗಳ ಪೈಕಿ ಪಾಕಿಸ್ತಾನ ಉತ್ತಮ ದೇಶ' ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಬಾಲಿವುಡ್ ನಟಿ ಸ್ವರ ಭಾಸ್ಕರ್ ಈಗ ನಾಲ್ಕು ವರ್ಷದ ಮಗುವನ್ನ ನಿಂದಿಸಿ ಮತ್ತೆ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಸಂದರ್ಶನವೊಂದರಲ್ಲಿ ತನ್ನ ಆರಂಭದ ದಿನಗಳ ಬಗ್ಗೆ ಮಾತನಾಡುತ್ತಿದ್ದ ವೇಳೆ, ತನ್ನ ಜೊತೆ ನಟಿಸಿದ್ದ ನಾಲ್ಕು ವರ್ಷದ ಬಾಲಕನ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದಾರೆ. ಅಶ್ಲೀಲ ಪದದಿಂದ ನಿಂದಿಸಿದ್ದಾರೆ. ಈ ವಿಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಟಿಯ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

ಆರಂಭದ ದಿನದಲ್ಲಿ ಸ್ವರ ಭಾಸ್ಕರ್ ಅವರು ಸೋಪ್ ಜಾಹೀರಾತಿನಲ್ಲಿ ನಟಿಸಿದ್ದರು. ಅದೇ ಜಾಹೀರಾತಿನಲ್ಲಿ ನಾಲ್ಕು ವರ್ಷದ ಬಾಲಕ ಕೂಡ ನಟಿಸಿದ್ದ. ಆ ಶೂಟಿಂಗ್ ವೇಳೆ ಆ ಬಾಲಕ ನಟಿ ಸ್ವರ ಭಾಸ್ಕರ್ ಅವರನ್ನ ಆಂಟಿ ಎಂದು ಕರೆದಿದ್ದರಂತೆ. (ಆಗ ಸ್ವರಭಾಸ್ಕರ್ ಅವರ ವಯಸ್ಸು 30 ವರ್ಷ) ಈ ಘಟನೆಯನ್ನ ಸಂದರ್ಶನದಲ್ಲಿ ಹೇಳಿಕೊಂಡಿರುವ ಸ್ವರಭಾಸ್ಕರ್, ಆ ಬಾಲಕ ನನ್ನ ಆಂಟಿ ಎಂದು ಕರೆದಿದ್ದ. ನನಗೆ ಕೆಟ್ಟ ಕೋಪ ಬಂದಿತ್ತು ಎಂದು ಹೇಳುತ್ತಾ ಕೆಲವು ಅಶ್ಲೀಲ ಪದ ಬಳಸಿದ್ದಾರೆ.

Swara Bhaskar Trolled For Using Abuse Word On 4 Years Kid

ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ #SwaraAunty.....ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. 30 ವರ್ಷದ ನಿನ್ನನ್ನು ನಾಲ್ಕು ವರ್ಷ ಬಾಲಕ 'ಆಂಟಿ' ಎನ್ನದೇ ಮತ್ತೇನು ಹೇಳಬೇಕು. ನಿನಗೆ ನಾಚಿಕೆ ಆಗಲ್ವಾ? ಸಣ್ಣ ಹುಡುಗನನ್ನ ಕೆಟ್ಟ ಪದಗಳಿಂದ ನಿಂದಿಸುವುದು ಸರಿಯಿಲ್ಲ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಮತ್ತೊಂದೆಡೆ ಸ್ವಯಂ ಸೇವಾ ಸಂಸ್ಥೆಯೊಂದು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಲು ಮುಂದಾಗಿದೆ.

More from Filmibeat

English summary
Swara Bhaskar trolled once again in social media. she called Kamina to 4 year old kid in interview.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X