ಆ ನಿರ್ದೇಶಕನ ನೀಚ ಕೃತ್ಯ ಅರಿಯಲು ಈ ನಟಿಗೆ 8 ವರ್ಷ ಬೇಕಾಯಿತಂತೆ.!
ಬಾಲಿವುಟ್ ನಟಿ ಸ್ವರ ಭಾಸ್ಕರ್ ಮತ್ತೆ ಸುದ್ದಿಯಾಗಿದ್ದಾರೆ. ಹಲವು ವರ್ಷಗಳ ಹಿಂದೆ ನಡೆದಿದ್ದ ಘಟನೆಯೊಂದನ್ನ ಬಹಿರಂಗಪಡಿಸುವ ಮೂಲಕ ಬಿಟೌನ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.
ಸಿನಿಮಾ ಲೋಕದಲ್ಲಿ ನಿರ್ದೇಶಕರು ಹೇಗೆ ಕಿರುಕುಳ ನೀಡ್ತಾರೆ ಎಂಬುದನ್ನ ಸ್ವರ ಭಾಸ್ಕರ್ ಬಹಿರಂಗವಾಗಿ ಹೇಳಿದ್ದಾರೆ. ಎಲ್ಲಿಯೂ ಆ ನಿರ್ದೇಶಕನ ಹೆಸರು ಉಲ್ಲೇಖಿಸದೇ ತನಗಾದ ಅನುಭವನ್ನ ಬಿಚ್ಚಿಟ್ಟಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸ್ವರ ಭಾಸ್ಕರ್ ''ಆಗೊಂದು ಸಿನಿಮಾ ಮಾಡಬೇಕಾದರೇ ಆ ಚಿತ್ರದ ನಿರ್ದೇಶಕ ನನ್ನ ಬಳಿ ಅನುಚಿತವಾಗಿ ವರ್ತಿಸುತ್ತಿದ್ದ. ನನ್ನನ್ನು ಶಾರೀರಕವಾಗಿ ಪಡೆಯಬೇಕು ಎಂಬ ಕಾರಣದಿಂದಲೇ ಯಾವಾಗಲೂ ಪ್ರಯತ್ನ ಪಡ್ತಿದ್ದ. ಆದ್ರೆ, ನಾನು ಆತನಿಗೆ ಸಿಕ್ಕಿರಲಿಲ್ಲ. ಇದೀಗ, ಎಲ್ಲರೂ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ನನಗೆ ಅರಿವಾಯಿತು. ಆತ ಅಂದು ಯಾಕೆ ಹಾಗೆ ಮಾಡಿದ ಎಂದು ತಿಳಿಯಲು ನನಗೆ ಸುಮಾರು ಆರೇಳು ವರ್ಷ ಬೇಕಾಯಿತು. ಅಂತಹ ವ್ಯಕ್ತಿಯಿಂದ ಬಹಳ ನೋವಾಗಿದೆ'' ಎಂದು ಹೇಳಿಕೊಂಡಿದ್ದಾರೆ.
''ಇನ್ನೊಮ್ಮೆ ಶೂಟಿಂಗ್ ಮಾಡಬೇಕಾದರೇ ಕೂಡ ನಿರ್ದೇಶಕರೊಬ್ಬರಿಂದ ಅದೇ ರೀತಿ ಅನುಭವವಾಗಿತ್ತು. ಆತ ಆ ರೀತಿ ಮಾಡ್ತಾನೆ ಎಂದು ಊಹಿಸಿರಲಿಲ್ಲ. ದೇವರ ದಯೆ ಅಂದು ನಾನು ಆತನಿಂದ ಎಸ್ಕೇಪ್ ಆದೆ. ನನ್ನು ಟಚ್ ಕೂಡ ಮಾಡಲು ಬಿಡಲಿಲ್ಲ. ಆ ಘಟನೆಗಳು ನೆನಪಿಸಿಕೊಂಡಾಗ ನನಗೆ ಭಯವಾಗುತ್ತೆ'' ಎಂದು ಸ್ವರ ಭಾಸ್ಕರ್ ಹೇಳಿಕೊಂಡಿದ್ದಾರೆ.
''ನಮ್ಮ ದೇಶದಲ್ಲಿ ಲೈಂಗಿಕ ಕಿರುಕುಳದ ಘಟನೆಗಳನ್ನ ಬಹಿರಂಗವಾಗಿ ಹೇಳುವ ಸಂಸ್ಕೃತಿ ಬಂದಿಲ್ಲ. ಅಂತಹ ಸನ್ನಿವೇಶಗಳನ್ನ ಹೊರಗಡೆ ಹೇಳಿದ್ರೆ ಆ ನೊಂದ ಯುವತಿಯನ್ನೇ ಅಪರಾಧಿಯನ್ನಾಗಿ ನೋಡುವ ಸಮಾಜ ಇದು. ಪ್ರತಿಭೆಯನ್ನ ಗುರುತಿಸದೇ ಇತರೆ ಅಂಶಗಳನ್ನ ನೋಡುವುದೇ ಇಲ್ಲಿದೆ. ಆದ್ರೆ, ನೊಂದ ಮಹಿಳೆಯರಿಗೆ ಇದು ಅಭದ್ರತೆಯ ಆತಂಕವನ್ನ ಸೃಷ್ಟಿಸುತ್ತೆ'' ಎಂದು ನಟಿ ಸ್ವರ ಭಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











