ಹಸ್ತಮೈಥುನ ಚಿತ್ರದ ಬಗ್ಗೆ ಟ್ರಾಲ್, ಖಡಕ್ ರಿಪ್ಲೇ ಕೊಟ್ಟ ಸ್ವರಾ ಭಾಸ್ಕರ್!
ವೀರೇ ದಿ ವೆಡ್ಡಿಂಗ್ ಚಿತ್ರದ ದೃಶ್ಯವೊಂದು ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಚಿತ್ರದಲ್ಲಿ ನಟಿ ಸ್ವರಾ ಭಾಸ್ಕರ್ ಅವರು ವೈಬ್ರೇಟರ್ ಬಳಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುವ ಚಿತ್ರ ಮತ್ತೆ ಟ್ವಿಟ್ಟರ್ ನಲ್ಲಿ ಮೇಲಕ್ಕೆ ಬಂದಿದೆ.
ಹಸ್ತಮೈಥುನ ವಿಚಾರಕ್ಕೆ ಸಂಬಂಧಿಸಿದಂತೆ ಈ ಒಬ್ಬ ವ್ಯಕ್ತಿ ಸ್ವರಾ ಅವರು ನಟಿಸಿರುವ ಹಸ್ತಮೈಥುನ ಚಿತ್ರವನ್ನು ಸ್ವರಾ ಅವರ ತಂದೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ, ಇಲ್ಲಿ ಇರೋದು ಯಾರು? ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಸ್ವರಾ ತಕ್ಕ ಉತ್ತರ ನೀಡಿ, ಏನಾದರೂ ಕೇಳುವುದಿದ್ದರೆ ನನ್ನನ್ನು ಕೇಳಿ ಎಂದಿದ್ದಾರೆ.
ನಟಿ ಸ್ವರಾ ಭಾಸ್ಕರ್ ಆಗಾಗ ಟ್ರೋಲರ್ ಗಳಿಗೆ ದಿಟ್ಟ ಉತ್ತರ ನೀಡುವ ಮೂಲಕ ಗಮನ ಸೆಳೆಯುತ್ತಾರೆ. ಈಗ ಇಂತಹ ಕೆಳಮಟ್ಟದ ತಂತ್ರಗಳಿಂದ ಹಿರಿಯ ವ್ಯಕ್ತಿಗಳನ್ನು ಅವಮಾನಿಸುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ
ಸ್ವರಾ ಹಸ್ತಮೈಥುನ ವಿಚಾರಕ್ಕೆ ಸಂಬಂಧಿಸಿದಂತೆ ಟ್ರೋಲರ್ ಒಬ್ಬ ಸ್ವರಾ ತಂದೆಗೆ ಕಮೆಂಟ್ ಮಾಡಿದ್ದ. ಸ್ವರಾ ಭಾಸ್ಕರ್ ತಂದೆ ಉದಯ್ ಭಾಸ್ಕರ್ ಟ್ವೀಟರ್ ಗೆ ಸ್ವರಾ ಹಸ್ತಮೈಥುನದ ಫೋಟೋ ಹಾಕಿ, ಈಕೆ ಯಾರು? ಏನು ಮಾಡ್ತಿದ್ದಾಳೆ? ಇಲ್ಲಿ ಏನು ನಡೆಯುತ್ತಿದೆ? ನಾನು ಸ್ವರಾ ದೊಡ್ಡ ಅಭಿಮಾನಿ ಎಂದು ಕಮೆಂಟ್ ಮಾಡಿದ್ದ. ಇದಕ್ಕೆ ಸ್ವರಾ ಕೊಟ್ಟ ಉತ್ತರವೇನು? ಮುಂದೆ ಓದಿ...

ಹಸ್ತಮೈಥುನ ದೃಶ್ಯ ಸಂಬಂಧದ ಫೋಟೋ
ಹಸ್ತಮೈಥುನ ದೃಶ್ಯ ಸಂಬಂಧದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಸ್ವರಾ ಅವರ ತಂದೆ ಉದಯ್ ಅವರಿಗೆ ಟ್ಯಾಗ್ ಮಾಡಿ, ಯಾರವಳು? ಅವಳು ಏನು ಮಾಡುತ್ತಿದ್ದಾಳೆ ಸರ್, ನಿಜಕ್ಕೂ ನಾನು ಗೊಂದಲಕ್ಕೀಡಾಗಿದ್ದೇನೆ. ನಿಜವಾಗಿಯೂ ನಾನು ಸ್ವರಾ ಅವರ ದೊಡ್ಡ ಅಭಿಮಾನಿ, ನಿನ್ನನ್ನು ನೋಡಿ ನಿಮ್ಮ ತಂದೆ ಈಗ ಹೆಮ್ಮೆ ಪಡುತ್ತಾರೆ. ಹೆಮ್ಮೆಯ ತಂದೆಗೆ ಹೆಮ್ಮೆಯ ಮಗಳು, ಧನ್ಯವಾದಗಳು ಸ್ವರಾ ಎಂದು ಟ್ವೀಟ್ ಮಾಡಿದ್ದರು.
ನಾನು ನಟಿ, ವೈಬ್ರೇಟರ್ ಬಳಸಿದ್ದೇನೆ
ನಾನು ನಟಿ, ವೈಬ್ರೇಟರ್ ಬಳಸಿದ್ದೇನೆ, ನಾನು ಹಸ್ತಮೈಥುನ ಸಾಧನವನ್ನು ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನಷ್ಟೆ. ಮುಂದಿನ ಬಾರಿ ಏನೇ ಕೇಳುವುದಾದರೆ ನೇರವಾಗಿ ನನ್ನನ್ನೆ ಕೇಳಿ. ನನ್ನ ತಂದೆಯನ್ನು ಕೇಳಬೇಕಾದ ಅವಶ್ಯಕತೆಯಿಲ್ಲ. ನಿಮ್ಮ ಹೆಸರಿನಲ್ಲಿರುವ ವೀರ್ ಎಂಬ ಪದವನ್ನು ಬಿಟ್ಟುಬಿಡಿ. ಇಂತಹ ಕೆಳಮಟ್ಟದ ತಂತ್ರಗಳಿಂದ ಹಿರಿಯ ವ್ಯಕ್ತಿಗಳನ್ನು ಅವಮಾನಿಸುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಪನ್ನಲಾಲ್ ಅವರಿಂದ ಪ್ರಶ್ನೆ
ನಾನು ನಿಮ್ಮ ಫ್ಯಾನ್ ಎನ್ನುತ್ತಾ, ಪನ್ನಲಾಲ್ ಅವರಿಂದ ಪ್ರಶ್ನೆ ಅದಕ್ಕೆ ಸರಣಿ ಉತ್ತರಗಳು ಕಂಡು ಬಂದಿದೆ.
ನಿಮ್ಮ ಮಗಳು ಅಸಮಾನ್ಯಳು
ನಿಮ್ಮ ಮಗಳು ಅಸಮಾನ್ಯಳು, ಬೇರೆಯವರು ಮಾಡಲಾಗದ್ದನ್ನು ಈಕೆ ಮಾಡಿದ್ದಾಳೆ, ನೀವು ಹೆಮ್ಮೆ ಪಡಿ, ನಟಿಯಾಗಿ ಇಂಥ ಬೋಲ್ಡ್ ಪಾತ್ರ ನಟಿಸುವುದೇ ಸವಾಲು ಎಂದು ಕೆಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.


Click it and Unblock the Notifications










