ತೂಕ ಹೆಚ್ಚಾಗಿದ್ದಕ್ಕೆ ಅವಕಾಶ ಸಿಗ್ತಿಲ್ಲ ಎಂದ ಮಾಧ್ಯಮದ ಮೇಲೆ ಸ್ವರಾ ಭಾಸ್ಕರ್ ಕೆಂಡಾಮಂಡಲ..!
ತಾಯಿಯಾದ ನಂತರ ಸಾಮಾನ್ಯವಾಗಿ ಅನೇಕರು ದಪ್ಪ ಆಗ್ತಾರೆ. ಅದು ಸಹಜ. ಆದರೆ ಕೆಲವರು ಈ ವಿಚಾರವನ್ನ ಕಾಲೆಳೆಯಲು ಬಳಿಸಿಕೊಳ್ತಾರೆ. ಕುಂತಲ್ಲಿ.. ನಿಂತಲ್ಲಿ.. ದಪ್ಪ ಎಂದು ಹಂಗಿಸುತ್ತಾರೆ. ದೇಹಾಕೃತಿ ಎಂಬ ತೀರಾ ವ್ಯೆಯಕ್ತಿಕ ವಿಷಯವನ್ನು ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ಇನ್ನೂ ಸೆಲೆಬ್ರಿಟಿ ಆದರೆ ಮುಗೀತು. ಅಡಿಗಡಿಗೂ ಅವಮಾನ ಮಾಡ್ತಾರೆ. ಟ್ರೋಲ್ ಮಾಡಿ ವಿಕೃತಿಯನ್ನು ಮೆರೆಯುತ್ತಾರೆ. ಬಾಲಿವುಡ್ ನ ನಾಯಕಿ ಸ್ವರಾ ಭಾಸ್ಕರ್ ಅವರ ವಿಚಾರದಲ್ಲಿ ಕೂಡ ಸದ್ಯಕ್ಕೆ ಇದೇ ಆಗಿದೆ.
ಹೌದು, ತಮ್ಮಲ್ಲಿನ ರಾಜಕೀಯ ಆಸಕ್ತಿಯಿಂದ ಟ್ರೋಲಿಗರ ಪಾಲಿಗೆ ಮೊದಲಿಂದ ಎಲೆ ಅಡಿಕೆಯಾಗಿರುವ ಸ್ವರಾ ಭಾಸ್ಕರ್ ಸದ್ಯಕ್ಕೆ ತಾಯ್ತನದ ಸುಖ ಅನುಭವಿಸುತ್ತಿದ್ದಾರೆ. ಮನೆ-ಗಂಡ-ಸಂಸಾರ ಎಂದು ನೆಮ್ಮದಿಯಿಂದ ಇದ್ದಾರೆ.

ಇನ್ನೂ.. ಸ್ವರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಕಳೆದ ಸೆಪ್ಟೆಂಬರ್‌ನಲ್ಲಿ. ಈ ಕಾರಣಕ್ಕೆ ಸ್ವರಾ ಅವರ ದೇಹದ ಆಕಾರ-ತೂಕ ಸಹಜವಾಗಿಯೇ ಹೆಚ್ಚಾಗಿದೆ. ಇದನ್ನೇ ಸದ್ಯಕ್ಕೆ ಅಸ್ತ್ರವನ್ನಾಗಿಸಿಕೊಂಡ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಸ್ವರಾ ಭಾಸ್ಕರ್ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ವಿಪರ್ಯಾಸ ಎಂದರೆ ಹಿಂದಿಯ ಪ್ರಮುಖ ಪತ್ರಿಕೆ ಕೂಡ ಸ್ವರಾ ಭಾಸ್ಕರ್ ಅವರನ್ನ ಅಣುಕಿಸಿದೆ. ಕೆಣಕಿದೆ. ಸ್ವರಾ ಭಾಸ್ಕರ್ ತುಂಬಾ ದಪ್ಪ ಆಗಿರುವ ಕಾರಣ ಬಾಲಿವುಡ್‌ನಲ್ಲಿ ಯಾರು ಅವಕಾಶ ಕೊಡ್ತಿಲ್ಲ ಎಂದು ವರದಿಯನ್ನ ಮಾಡಿದೆ. ಬಾಡಿ ಶೇಮಿಂಗ್ ಮಾಡಿದೆ.
ಸಹಜವಾಗಿ ಈ ಊಹಾಪೋಹದ ವರದಿಯನ್ನ ನೋಡಿ ಕೆರಳಿ ಕೆಂಡವಾಗಿರುವ ಸ್ವರಾ ಭಾಸ್ಕರ್, ವರದಿಯ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ. ಹೊಸತಾಗಿ ತಾಯಿಯಾದವಳ ದೇಹ ಇನ್ಹೇಗೆ ಇರುತ್ತದೆ ಎಂಬ ಹೆರಿಗೆಯ ಶರೀರಶಾಸ್ತ್ರವನ್ನು ಈ ಬುದ್ಧಿವಂತರಿಗೆ ವಿವರಿಸಬಹುದೇ ಎಂದು ಪ್ರಶ್ನಿಸಿದ್ದಾರೆ.
ಸದ್ಯಕ್ಕೆ ಸ್ವರಾ ಭಾಸ್ಕರ್ ಅವರ ಈ ಪ್ರತಿಕ್ರಿಯೆ, ಬಾಲಿವುಡ್‌ನಲ್ಲಿ ಬಾಡಿ ಶೇಮಿಂಗ್ ಕುರಿತ ಚರ್ಚೆಯನ್ನ ಮತ್ತೆ ಹುಟ್ಟಿ ಹಾಕಿದೆ. ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ.
ಅಂದ್ಹಾಗೇ ಸ್ವರಾ ಭಾಸ್ಕರ್ ಮತ್ತು ರಾಜಕಾರಣಿ ಫಹಾದ್ ಅಹ್ಮದ್ ಅವರು ಕೋರ್ಟ್‌ನಲ್ಲಿ ವಿವಾಹವಾಗಿದ್ದರು. ಬಳಿಕ ಮಾರ್ಚ್ ತಿಂಗಳಲ್ಲಿ ಹಳದಿ, ಸಂಗೀತ, ವೆಡ್ಡಿಂಗ್ ರಿಸೆಪ್ಷನ್ ಸೇರಿದಂತೆ ಅನೇಕ ಮದುವೆಯ ಕಾರ್ಯಕ್ರಮಗಳನ್ನು ನಡೆಸಿದ್ದರು. ಜೂನ್ ತಿಂಗಳಲ್ಲಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಅವರು ಘೋಷಿಸಿದ್ದರು.
ಎಲ್ಲಾ ಮಕ್ಕಳು ತಮ್ಮ ಹೆತ್ತವರು ಏನೆಂಬುದನ್ನು ಪ್ರತಿಬಿಂಬಿಸುತ್ತಾರೆ; ಅವರು ತಮ್ಮ ಪೋಷಕರು ನೀಡುವ ಮೌಲ್ಯಗಳೊಂದಿಗೆ ಬೆಳೆಯುತ್ತಾರೆ. ಅಂತೆಯೇ ನನ್ನ ಮಗಳು ಎರಡೂ ಧರ್ಮದ ಅತ್ಯುತ್ತಮವಾದವುಗಳನ್ನು ಪಡೆಯುತ್ತಾಳೆ' ಎಂದಿದ್ದರು ಸ್ವರಾ ಭಾಸ್ಕರ್.


Click it and Unblock the Notifications











