'ಸ್ವಾತಂತ್ರ ವೀರ್ ಸಾವರ್ಕರ್’ ಸಿನಿಮಾ ಹಿಟ್ಟಾ ? ಫ್ಲಾಪಾ ? ಗಳಿಸಿದ್ದೆಷ್ಟು ಕೋಟಿ..?

ವರ್ಷದ ಆರಂಭ ಬಾಲಿವುಡ್ ಮಂದಿಯನ್ನ ಚಿಂತೆಗೀಡು ಮಾಡಿದೆ. ನಿರೀಕ್ಷಿತ ಚಿತ್ರಗಳ ಅನಿರೀಕ್ಷಿತ ಸೋಲು ಹಿಂದಿ ಚಿತ್ರರಂಗವನ್ನ ಹೈರಾಣಾಗಿಸಿದೆ. ಮೊದಲ ಮೂರು ತಿಂಗಳಿನಲ್ಲಿ ಫೈಟರ್, ಆರ್ಟಿಕಲ್ 370, ಲಾಪತಾ ಲೇಡಿಸ್ ಹಾಗೂ ಶೈತಾನ್ ಚಿತ್ರವನ್ನ ಹೊರತು ಪಡಿಸಿದರೆ ಬಾಲಿವುಡ್ ನವರ ಸಾಧನೆ ಅಷ್ಟಕಷ್ಟೇ.

ಈ ಕಾರಣಕ್ಕೆ 'ಸ್ವಾತಂತ್ರ ವೀರ್ ಸಾವರ್ಕರ್' ಮೇಲೆ ಬೆಟ್ಟದಷ್ಟು ನಿರೀಕ್ಷೆಯನ್ನ ಇಟ್ಟುಕೊಂಡು ಹಿಂದಿ ಉದ್ಯಮದವರು ಕುಳಿತಿದ್ದರು. ಚುನಾವಣೆಯ ಬಿಸಿ ಕಾವೇರುತ್ತಿರುವ ಸಮಯದಲ್ಲಿ ಬರ್ತಿರುವ ವೀರ್ ಸಾವರಕರ್ ಜೀವನಗಾಥೆಯನ್ನ ನಮ್ಮ ಜನ ಮುಗಿ ಬಿದ್ದು ನೋಡುತ್ತಾರೆ ಎಂದುಕೊಂಡಿದ್ದರು. 'ದಿ ಕೇರಳ ಸ್ಟೋರಿ' ಹಾಗೂ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಗಳಂತೆಯೇ ''ಸ್ವಾತಂತ್ರ ವೀರ್ ಸಾವರ್ಕರ್'' ಚಿತ್ರ ಐತಿಹಾಸಿಕ ದಾಖಲೆ ಬರೆಯುತ್ತೆ ಎಂದು ಕನಸನ್ನ ಕಂಡಿದ್ದರು. ಆದರೆ 'ಸ್ವಾತಂತ್ರ ವೀರ್ ಸಾವರ್ಕರ್' ಚಿತ್ರಕ್ಕೆ ರಣದೀಪ್ ಹೂಡಾ 30 ಕೆಜಿ ತೂಕ ಇಳಿಸಿಕೊಂಡಿದ್ದಷ್ಟೇ ಬಂತು, ಮೊದಲ ದಿನ ಚಿತ್ರ ಮೂರು ಕೋಟಿಯನ್ನ ಕೂಡ ಗಳಿಸಲಿಲ್ಲ ಅನ್ನುವುದು ಕಹಿ ಆದರೂ ಸತ್ಯ.

Swatantrya Veer Savarkar box office collection day 1

ಹೌದು, ನಿನ್ನೆ ಭಾರತದೆಲ್ಲೆಡೆ ತೆರೆಗೆ ಬಂದ ''ಸ್ವಾತಂತ್ರ ವೀರ್ ಸಾವರ್ಕರ್'' ಚಿತ್ರಕ್ಕೆ ಸಿಕ್ಕಾಪಟ್ಟೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಚಿತ್ರ ಕೇವಲ ಒಂದು ಕೋಟಿ ಹತ್ತು ಲಕ್ಷವನ್ನಷ್ಟೇ ಗಳಿಸಿದೆ.

ನಿಜಾ.. ಚಿತ್ರ ನೋಡಿದವರು ನಿರ್ದೇಶಕ ಹಾಗೂ ನಾಯಕ ರಣ್‌ದೀಪ್ ಹೂಡ ಶ್ರದ್ಧೆಯನ್ನ ಮೆಚ್ಚಿಕೊಂಡಿದ್ದಾರೆ. ಆದರೆ, ಈ ಮಾತು ಬೇರೆ ಬೇರೆ ರಾಜ್ಯದ ಸಿನಿ ಪ್ರಿಯರ ಕಿವಿಗೆ ಇನ್ನೂ ತಲುಪಿಲ್ಲ. ತಲುಪಿದರೆ ಅಷ್ಟೇ ''ಸ್ವಾತಂತ್ರ ವೀರ್ ಸಾವರ್ಕರ್'' ಚಿತ್ರ ಚಿತ್ರಮಂದಿರದಲ್ಲಿ ಉಳಿಯಬಹುದು. ಇಲ್ಲದೇ ಇದ್ದರೆ ಕಷ್ಟ ಅನ್ನುವ ಮಾತು ಈಗ ಹಿಂದಿ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಇಂದು ಹಾಗೂ ನಾಳೆಯ ಅಗ್ನಿ ಪರೀಕ್ಷೆಯಲ್ಲಿ ''ಸ್ವಾತಂತ್ರ ವೀರ್ ಸಾವರ್ಕರ್'' ಗೆದ್ದರಷ್ಟೇ ಉಳಿಗಾಲ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

Swatantrya Veer Savarkar box office collection day 1

ಅಂದ್ಹಾಗೇ 'ಸ್ವಾತಂತ್ರ ವೀರ್ ಸಾವರ್ಕರ್' ಚಿತ್ರಕ್ಕೆ ರಣ್ ದೀಪ್ ಹೂಡ ಕೇವಲ ನಿರ್ದೇಶನ ಮಾಡಿ, ಪಾತ್ರವನ್ನಷ್ಟೇ ನಿರ್ವಹಿಸಿಲ್ಲ. ತಮ್ಮ ಜೇಬಿಂದ ಚಿತ್ರಕ್ಕೆ ಹಣವನ್ನೂ ಸುರಿದಿದ್ದಾರೆ ರಣ್‌ದೀಪ್ ಹೂಡ. ಹಿಂದೆ ಸಂದರ್ಶನವೊಂದರಲ್ಲಿ ಖುದ್ದು ರಣ್‌ದೀಪ್ ಹೂಡ ಹೇಳಿರುವಂತೆ ಚಿತ್ರಕ್ಕಾಗಿ ತಮ್ಮ ಮನೆಯನ್ನೂ ಮಾರಾಟ ಮಾಡಿದ್ದಾರೆ.

Swatantrya Veer Savarkar box office collection day 1

ಉಳಿದಂತೆ ಸಾವರಕರ್ ಅವರ ಪತ್ನಿ ಯಮುನಾಬಾಯಿ ಸಾವರ್ಕರ್ ಪಾತ್ರದಲ್ಲಿ ಅಂಕಿತಾ ಲೋಖಂಡೆ ನಟಿಸಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಸಿನಿಮಾ ಮೊದಲನೇ ದಿನ ಸಾಧಾರಣ ಪ್ರದರ್ಶನವನ್ನ ಕಂಡಿದೆ. ಇಂದು ಹಾಗೂ ನಾಳೆಯ ಗಳಿಕೆ ಚಿತ್ರದ ಮುಂದಿನ ಭವಿಷ್ಯವನ್ನ ನಿರ್ಧಾರ ಮಾಡಲಿದೆ. ಸೋಮವಾರ ಹೋಳಿ ಹಬ್ಬದ ರಜೆಯ ಹಿನ್ನೆಲೆ, 'ಸ್ವಾತಂತ್ರ್ಯ ವೀರ್ ಸಾವರ್ಕರ್' ಸಿನಿಮಾ ನೋಡಲು ಪ್ರೇಕ್ಷಕರು ಬರ್ತಾರೆ ಎಂಬ ವಿಶ್ವಾಸದಲ್ಲಿ ಹಿಂದಿ ಚಿತ್ರರಂಗ ಇದೆ.

More from Filmibeat

English summary
Randeep Hooda’s patriotic drama Swatantrya Veer Savarkar Struggles At Box Office On Day 01.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X