ಕಂಗನಾಗೆ ಮತ್ತೊಂದು ಕಂಟಕ: ಮಣಿಕರ್ಣಿಕಾಗೆ ನಟಿ ಸ್ವಾತಿ ಗುಡ್ ಬೈ.?
'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರಕ್ಕೆ ನಿರ್ದೇಶಕ ಕ್ರಿಶ್ ಗುಡ್ ಬೈ ಹೇಳಿದ್ಮೇಲೆ ಡೈರೆಕ್ಟರ್ ಕುರ್ಚಿ ಮೇಲೆ ನಟಿ ಕಂಗನಾ ಕೂತರು. ನಟಿ ಕಂಗನಾ ಡೈರೆಕ್ಟರ್ ಕ್ಯಾಪ್ ತೊಟ್ಟ ಮೇಲಿಂದ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾ ವಿವಾದದ ಕೇಂದ್ರ ಬಿಂದುವಾಗಿದೆ.
ನಿರ್ದೇಶಕ ಕ್ರಿಶ್ ಪೆಂಡಿಂಗ್ ಇಟ್ಟಿದ್ದ ಪ್ಯಾಚ್ ವರ್ಕ್ ಗಳನ್ನ ಮುಗಿಸುವುದು ಬಿಟ್ಟು, ಸ್ಕ್ರಿಪ್ಟ್ ನಲ್ಲಿ ಬದಲಾವಣೆ ಮಾಡಿ, ಕೆಲವು ಸನ್ನಿವೇಶಗಳನ್ನ ರೀಶೂಟ್ ಮಾಡಲು ನಟಿ ಕಂಗನಾ ರೆಡಿ ಆಗಿದ್ದಾರೆ.
ನಟಿ ಕಂಗನಾ ಅವರ ಈ ನಡವಳಿಕೆ ಇಷ್ಟ ಆಗದೆ, 'ಮಣಿಕರ್ಣಿಕಾ' ಚಿತ್ರದಿಂದ ನಟ ಸೋನು ಸೂದ್ ಹೊರ ನಡೆದರು. ನಟಿ ಕಂಗನಾ ಕಾರಣದಿಂದಲೇ ನಿರ್ದೇಶಕ ಕ್ರಿಶ್ ಕೂಡ 'ಮಣಿಕರ್ಣಿಕಾ' ಚಿತ್ರಕ್ಕೆ ಗುಡ್ ಬೈ ಹೇಳಿದರು ಅಂತ ಹೇಳುವವರೂ ಇದ್ದಾರೆ.
ಹೀಗಿರುವಾಗಲೇ, 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ನಟಿ ಸ್ವಾತಿ ಸೆಮ್ವಾಲ್ ಹೊರಬರುವ ಸಾಧ್ಯತೆ ಇದೆ. ಹೀಗೇ ಮುಂದುವರೆದರೆ 'ಮಣಿಕರ್ಣಿಕಾ' ಚಿತ್ರ ಜನವರಿಯಲ್ಲಿ ಬಿಡುಗಡೆ ಆದ ಹಾಗೆ.! ಮುಂದೆ ಓದಿರಿ...

ರೀಶೂಟ್ ಮಾಡಬೇಕು.!
ನಟಿ ಸ್ವಾತಿ ಸೆಮ್ವಾಲ್ ರವರ ಕೆಲ ದೃಶ್ಯಗಳನ್ನು ರೀಶೂಟ್ ಮಾಡಲು ನಟಿ, ನಿರ್ದೇಶಕಿ ಕಂಗನಾ ನಿರ್ಧರಿಸಿದ್ದಾರಂತೆ. ಹೀಗಾಗಿ, ನಟಿ ಸ್ವಾತಿಗೆ ಚಿತ್ರತಂಡದ ಕಡೆಯಿಂದ ಕರೆ ಹೋಗಿದೆ. ಆದ್ರೆ, ರೀಶೂಟ್ ಗೆ ನಟಿ ಸ್ವಾತಿ ಸೆಮ್ವಾಲ್ ಇನ್ನೂ ಒಪ್ಪಿಗೆ ಸೂಚಿಸಿಲ್ಲ.

ಎರಡು ಕಾರಣಗಳು ಔಟ್
''ನಾನು ಈ ಚಿತ್ರವನ್ನ ಒಪ್ಪಿಕೊಳ್ಳಲು ಮೂರು ಕಾರಣಗಳಿತ್ತು. ಒಂದು ಕಮಲ್ ಜೈನ್, ಇನ್ನೊಂದು ಸೋನು ಸೂದ್, ಮತ್ತೊಂದು ನಿರ್ದೇಶಕ ಕ್ರಿಶ್. ಈ ಮೂರು ಕಾರಣಗಳಲ್ಲಿ ಇಬ್ಬರು ಈಗಾಗಲೇ ಹೊರಗೆ ಉಳಿದಿದ್ದಾರೆ. ಹೀಗಾಗಿ ರೀಶೂಟ್ ಮಾಡಲೋ, ಬೇಡ್ವೋ ಅನ್ನೋದು ಗೊತ್ತಾಗುತ್ತಿಲ್ಲ'' ಎನ್ನುತ್ತಾರೆ ನಟಿ ಸ್ವಾತಿ ಸೆಮ್ವಾಲ್.

ನಿರ್ಮಾಪಕರು ಕರೆ ಮಾಡಿಲ್ಲ
''ನಿರ್ಮಾಪಕರ ಒತ್ತಾಯದ ಮೇರೆಗೆ ನಾನು ಈ ಚಿತ್ರವನ್ನ ಒಪ್ಪಿಕೊಂಡೆ. ಆದ್ರೆ, ರೀಶೂಟ್ ಬಗ್ಗೆ ಅವರು ಇನ್ನೂ ನನಗೆ ಕರೆ ಮಾಡಿಲ್ಲ'' ಅಂತಾರೆ ನಟಿ ಸ್ವಾತಿ ಸೆಮ್ವಾಲ್.

ಜನವರಿಯಲ್ಲಿ ರಿಲೀಸ್ ಆಗುತ್ತಾ.?
'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದಿಂದ ಒಬ್ಬೊಬ್ಬರೇ ಹೊರಗೆ ಹೋಗುತ್ತಿದ್ದಾರೆ. ಎಲ್ಲರ ಭಾಗವನ್ನ ರೀಶೂಟ್ ಮಾಡಬೇಕು ಅಂದ್ರೆ ಇನ್ನೂ ಬೇಜಾನ್ ಟೈಮ್ ಬೇಕು. ಹೀಗಾಗಿ, 2019 ಜನವರಿ ಹೊತ್ತಿಗೆ ಈ ಚಿತ್ರ ರಿಲೀಸ್ ಆಗುವುದು ಬಹುತೇಕ ಅನುಮಾನವೇ.!


Click it and Unblock the Notifications











