ಕಣ್ಣೇದುರು ಅಪ್ಸರೆ ಬಂದರೂ ಕಣ್ಣೆತ್ತಿ ನೋಡದ ಡೆಲಿವರಿ ಹುಡುಗ...!

ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು.. ಮಾತನಾಡಲು ಹವಣಿಸೋದು ಕಾಮನ್ನು. ಯಾಕೆಂದರೆ ಅವರೆಲ್ಲ ಈ ಪ್ರಪಂಚದವರಲ್ಲ ಬದಲಿಗೆ ದೇವ ಮಾನವರೆನ್ನುವುದು ಅನೇಕರಲ್ಲಿರುವ ಕಲ್ಪನೆ.ಆದರೆ.. ಇದಕ್ಕೆ ಸಂಪೂರ್ಣ ತದ್ವಿರುದ್ಧ ಆಲೋಚನೆ ವೈರಲ್ ಆದ ಈ ಡೆಲಿವರಿ ಹುಡುಗನದ್ದು.

ಹೌದು, ತ್ಯಾಪ್ಸಿ ಪನ್ನು ಗೊತ್ತಲ್ಲವಾ..? ಮೊನ್ನೆಯಷ್ಟೇ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ನಾಯಕಿ. ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ತ್ಯಾಪ್ಸಿ ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ.. ಮಾಯಾನಗರಿ ಮುಂಬೈನಲ್ಲಿ ಇವರಿಗೆ ಇವರದ್ದೇ ಆದ ಅಭಿಮಾನಿ ಬಳಗ ಇದೆ. ಇವರ ಅಭಿನಯವನ್ನ ಮೆಚ್ಚಿಕೊಳ್ಳುವ ಒಂದು ವರ್ಗ ಇದೆ.

Swiggy Reacts To Video Of Delivery Executive Walking Past Taapsee Pannu

ಇಂಥ ತ್ಯಾಪ್ಸಿ ಪನ್ನು ಕಣ್ಮುಂದೆ ಬಂದರೂ, ಡೆಲಿವರಿ ಬಾಯ್ ಕಣ್ಣೆತ್ತಿ ನೋಡಿಲ್ಲ. ಬದಲಿಗೆ ಕಾಯಾ..ವಾಚಾ..ಮನಸಾ ತನ್ನ ಕೆಲಸವನ್ನ ಮಾಡಿದ್ದಾನೆ. ಬಾಲಿವುಡ್‌ನ ನಾಯಕಿ ತನ್ನೆದುರು ಬಂದರು ತನ್ನ ಗ್ರಾಹಕರನ್ನ ಅಲ್ಲಿ ಹುಡಕಿದ್ದಾನೆ. ಸದ್ಯಕ್ಕೆ.. ಕಾಯಕದಲ್ಲಿ ಕೈಲಾಸ ಕಂಡ ಈ ಡೆಲಿವರಿ ಬಾಯ್‌ಗೆ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಕೆಲಸದ ಮೇಲಿರುವ ನಿಷ್ಠೆ-ಶ್ರದ್ಧೆ ಮತ್ತು ಶ್ರಮಕ್ಕೆ ಸಾಮಾಜಿಕ ಜಾಲತಾಣ ಸೆಲ್ಯೂಟ್ ಹೊಡೆಯುತ್ತಿದೆ.

ಅನೇಕರು ಅಪ್ಸರೆ ಬಂದರೂ ನೋಡಲಿಲ್ಲವಲ್ಲ ಗುರು ನೀನು ಎಂದರೆ, ಇನ್ನೂ ಕೆಲವರು ಏಕಾಗ್ರತೆ ಬದುಕಿನ ಗುರಿ ಮತ್ತು ಸಾಧನೆಗೆ ದಾರಿ ಅನ್ನುವುದನ್ನ ನೀವೂ ಸಾಬೀತು ಮಾಡಿದ್ದೀರಾ ಅದಕ್ಕೆ ನಿಮಗೆ ಅಭಿನಂದನೆ ಎನ್ನುತ್ತಿದ್ದಾರೆ. ಇವರಿಗೆ ಸಂಸ್ಥೆ ಪ್ರೋತ್ಸಾಹ ಧನವನ್ನ ನೀಡಬೇಕೆಂದು ಮನವಿಯನ್ನೂ ಸಲ್ಲಿಸುತ್ತಿದ್ದಾರೆ. ಇನ್ನೂ ಕೆಲವರು ತ್ಯಾಪ್ಸಿಯ ಫೋಟೋ ತೆಗೆಯಲು ಹವಣಿಸುತ್ತಿದ್ದ ಪಾಪರಾಜಿಗಳಿಗೆ ಛೀಮಾರಿಯನ್ನೂ ಹಾಕಿದ್ದಾರೆ.

Swiggy Reacts To Video Of Delivery Executive Walking Past Taapsee Pannu

ಇನ್ನೂ ಕೇವಲ ಸೋಶಿಯಲ್ ಮೀಡಿಯಾ ಮಾತ್ರವಲ್ಲ ಡೆಲಿವರಿ ಬಾಯ್ ನ ಈ ನಡೆಯನ್ನ ಸ್ವಿಗ್ಗಿ ಕೂಡ ಕೊಂಡಾಡಿದೆ. ಯಾವುಕ್ಕೂ ತಲೆಕೆಡಿಸಿಕೊಳ್ಳದೇ ಸಂತೋಷದಿಂದ ನಮ್ಮ ಕೆಲಸ ಮುಂದುವರಿಯುಯತ್ತಿರುತ್ತದೆ. ನಮ್ಮ ಗುರಿಯನ್ನು ತಲುಪಲು ಕೆಲಸ ಮುಂದುವರಿಯುತ್ತಿರುತ್ತದೆ ಎಂಬ ಸಾಲುಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಒಟ್ನಲ್ಲಿ ಅವಕಾಶ ಸಿಕ್ಕರೆ ಸಾಕು ಅತಿರೇಕದ ಅಭಿಮಾನದ ಪ್ರದರ್ಶನ ಮಾಡುವವರು ಇರುವ ಈ ಕಾಲದಲ್ಲಿ, ತ್ಯಾಪ್ಸಿ ಪನ್ನು ಅವರನ್ನ ನೋಡಿಯೂ ನೋಡದಂತೆ ಹೋದ ಈ ಡೆಲಿವರಿ ಬಾಯ್ ಗೆ ಸದ್ಯಕ್ಕೆ ಅನೇಕರು ಅಭಿಮಾನಿಗಳಾಗಿದ್ದಾರೆ. ಡೆಲಿವರಿ ಹುಡುಗನ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯನ್ನ ಕೊಂಡಾಡುತ್ತಿದ್ದಾರೆ

ಉಳಿದಂತೆ ತ್ಯಾಪ್ಸಿ ಪನ್ನು ಸದ್ಯಕ್ಕೆ ಇನ್ನೂ ಮದುವೆಯ ಗುಂಗಿನಲ್ಲಿದ್ದಾರೆ. ಸಾಂಸಾರಿಕ ಜೀವನವನ್ನ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಗಳಿಗಿಂತ ವೆಬ್ ಸರಣಿಗಳ ಕಡೆಗೆ ಹೆಚ್ಚೆಚ್ಚು ಗಮನ ಕೊಡುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಅಭಿನಯಿಸಿರುವ ಖೇಲ್ ಖೇಲ್ ಮೇ ಚಿತ್ರದ ಬಿಡುಗಡೆಯನ್ನು ಕೂಡ ಎದುರು ನೋಡುತ್ತಿದ್ದಾರೆ ತ್ಯಾಪ್ಸಿ ಪನ್ನು.

swiggy-reacts-to-video-of-delivery-executive-walking-past-taapsee-pannu

More from Filmibeat

English summary
In a recent viral video, a Swiggy delivery agent captured the internet's attention as he walked past Bollywood actress Taapsee Pannu in Mumbai. The unexpected encounter sparked amusement among viewers and garnered widespread attention online. Such moments highlight the unpredictable nature of everyday life and how even mundane interactions can become social media sensations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X