For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಚಿತ್ರದಲ್ಲಿ ಹಾಲಿವುಡ್ ನಟ ನಟನೆ.!

  By Bharath Kumar
  |

  'ಟೈಗರ್ ಜಿಂದಾ ಹೈ' ಚಿತ್ರದ ಸೂಪರ್ ಯಶಸ್ಸಿನ ನಂತರ ಸಲ್ಮಾನ್ ಖಾನ್ 'ರೇಸ್-3' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಲು ಹೀರೋ ಆಲ್ಲ, ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಈಗಾಗಲೇ ಕುತೂಹಲ ಮೂಡಿಸಿದೆ.

  'ರೇಸ್-3' ಚಿತ್ರದ ಫೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದ ಒಂದೊಂದೆ ಪಾತ್ರಗಳು ಬಹಿರಂಗವಾಗುತ್ತಿದೆ. ಈ ಮಧ್ಯೆ ಸರ್ಪ್ರೈಸ್ ಸುದ್ದಿಯೊಂದನ್ನ ಸಲ್ಮಾನ್ ಖಾನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ಅವರ ವಿಡಿಯೋವನ್ನ ಸಲ್ಮಾನ್ ಖಾನ್ ಟ್ವಿಟ್ಟರ್ ಪೋಸ್ಟ್ ಮಾಡಿದ್ದಾರೆ.

  ಈ ವಿಡಿಯೋ ನೋಡಿದ ನಂತರ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಯಾಕಂದ್ರೆ, ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರಬಹುದಾ? ಎಂಬ ಪ್ರಶ್ನೆ ಕಾಡುತ್ತಿದೆ. ಆದ್ರೆ, ಇದಕ್ಕೆ ಉತ್ತರ ನೀಡದ ಸಲ್ಲು ಉತ್ತರವನ್ನ ಅಭಿಮಾನಿಗಳಿಗೆ ಬಿಟ್ಟಿದ್ದಾರೆ. ಮುಂದೆ ಓದಿ.....

  ಅಕ್ಷಯ್ ಜೊತೆ ಸಿಲ್ವೆಸ್ಟರ್ ಸ್ಟಲ್ಲೋನ್

  ಅಕ್ಷಯ್ ಜೊತೆ ಸಿಲ್ವೆಸ್ಟರ್ ಸ್ಟಲ್ಲೋನ್

  2009ರಲ್ಲಿ ಬಿಡುಗಡೆಯಾಗಿದ್ದ 'ಕಂಬಕ್ತ್ ಇಷ್ಕ್' ಚಿತ್ರದಲ್ಲಿ ಈ ಹಿಂದೆ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ಅಭಿನಯಿಸಿದ್ದರು. ಅಕ್ಷಯ್ ಕುಮಾರ್ ಮತ್ತು ಕರೀನಾ ಕಪೂರ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಹಾಲಿವುಡ್ ನ ಬ್ರ್ಯಾಂಡನ್ ರುಥ್, ಡೆನಿಸ್ ರಿಚರ್ಡ್ಸ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದರು.

  ಹೆಸರು ಬದಲಿಸಿಕೊಂಡಿರುವ ಸಲ್ಲು, ಸನ್ನಿ, ಕ್ಯಾಟ್, ಬಿಗ್-ಬಿಯ ಮೂಲ ಹೆಸರುಗಳೇನು.? ಹೆಸರು ಬದಲಿಸಿಕೊಂಡಿರುವ ಸಲ್ಲು, ಸನ್ನಿ, ಕ್ಯಾಟ್, ಬಿಗ್-ಬಿಯ ಮೂಲ ಹೆಸರುಗಳೇನು.?

  'ರೇಸ್-3' ಚಿತ್ರದಲ್ಲಿ ಸಿಲ್ವೆಸ್ಟರ್ ಸ್ಟಲ್ಲೋನ್.?

  'ರೇಸ್-3' ಚಿತ್ರದಲ್ಲಿ ಸಿಲ್ವೆಸ್ಟರ್ ಸ್ಟಲ್ಲೋನ್.?

  ಇದೀಗ, ಮತ್ತೆ ಹಿಂದಿ ಸಿನಿಮಾದಲ್ಲಿ ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಲ್ಲೋನ್ ಅಭಿನಯಿಸ್ತಾರ ಎಂಬ ಕುತೂಹಲ ಕಾಡುತ್ತಿದೆ. ಈ ಬಾರಿ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ರೇಸ್ 3 ಚಿತ್ರದಲ್ಲಿ ಬಣ್ಣ ಹಚ್ಚಬಹುದು ಎಂಬ ಮಾತಿದೆ. ಬಹುಶಃ ಈ ಸುದ್ದಿಯನ್ನ ಸ್ವತಃ ಸಲ್ಮಾನ್ ತಿಳಿಸಬಹುದು.

  ಫೆರಾರಿ ಕಾರು ಯಾರದು.?

  ಫೆರಾರಿ ಕಾರು ಯಾರದು.?

  'ರೇಸ್-3' ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಫೆರಾರಿ ಕಾರೊಂದನ್ನ ಬಳಸಿಕೊಂಡಿದ್ದಾರೆ. ಈ ಕಾರು ದುಬೈ ಮೂಲದ 16 ವರ್ಷದ ಯುವಕನೊಬ್ಬನದ್ದು ಎಂಬುದು ಈಗ ತಿಳಿದುಬಂದಿದೆ. ದುಬೈನ ಶ್ರೀಮಂತ ಯುವಕ ಬೆಲ್ಹಸಾ ರಶ್ ಎಂಬುವವರ ಕಾರು ಇದಾಗಿದೆ.

  ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಖಳನಾಯಕ.!ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಖಳನಾಯಕ.!

  'ರೇಸ್-3' ಚಿತ್ರದ ಸ್ಟಾರ್ ಕಲಾವಿದರು

  'ರೇಸ್-3' ಚಿತ್ರದ ಸ್ಟಾರ್ ಕಲಾವಿದರು

  'ರೇಸ್-3' ಚಿತ್ರವನ್ನ ರೆಮೋ ಡಿಸೋಜಾ ನಿರ್ದೇಶನ ಮಾಡುತ್ತಿದ್ದು, ಜಾಕ್ವೆಲಿನ್ ಫರ್ನಾಂಡಿಸ್, ಅನಿಲ್ ಕಪೂರ್, ಡೈಸಿ ಶಾ, ಬಾಬಿ ಡಿಯೋಲ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಜೂನ್ 15 ರಂದು ತೆರೆಗೆ ಬರಲಿದೆ ಎನ್ನಲಾಗಿದೆ.

  English summary
  Salman Khan has been sharing posters of his upcoming film, Race 3 and the latest one featured Bobby Deol. Posting the image on his Instagram account, Stallone sent ‘best wishes’ to the Dabangg star.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X