For Quick Alerts
  ALLOW NOTIFICATIONS  
  For Daily Alerts

  ಸೀತೆ ಪಾತ್ರಕ್ಕೆ ದೊಡ್ಡ ಸಂಭಾವನೆ: ಕರೀನಾ ಬೆಂಬಲಕ್ಕೆ ಬಂದ ತಾಪ್ಸಿ

  |

  ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ನಿರ್ದೇಶಿಸಲಿರುವ ರಾಮಾಯಣದ ಸೀತೆ ಪಾತ್ರ ಆಧರಿತ ಸಿನಿಮಾಕ್ಕೆ ನಟಿ ಕರೀನಾ ಕಪೂರ್ ಅನ್ನು ಸೀತೆ ಪಾತ್ರಕ್ಕಾಗಿ ಕೇಳಲಾಗಿತ್ತು. ಆದರೆ ಕರೀನಾ ಕಪೂರ್ ಭಾರಿ ದೊಡ್ಡ ಮೊತ್ತದ ಸಂಭಾವನೆ ಕೇಳಿದ ಕಾರಣ ನಿರ್ಮಾಪಕರು ಹಿಂದೆ ಸರಿದರು. ಇದು ದೊಡ್ಡದಾಗಿ ಸುದ್ದಿಯಾಯ್ತು.

  ಸಾಮಾನ್ಯವಾಗಿ ನಟಿ ಕರೀನಾ ಕಪೂರ್ ಸಿನಿಮಾವೊಂದಕ್ಕೆ 6 ರಿಂದ 8 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಸೀತೆ ಪಾತ್ರ ನಿರ್ವಹಿಸಲು ಬರೋಬ್ಬರಿ 12 ಕೋಟಿ ಹಣ ಕೇಳಿದ್ದರಂತೆ. ಕೊನೆಗೆ ಸಿನಿಮಾದ ನಿರ್ಮಾಪಕರು ಕರೀನಾರ ಜಾಗಕ್ಕೆ ಬೇರೆ ನಟಿಯ ಹುಡುಕಾಟದಲ್ಲಿದ್ದಾರೆ.

  ಸೀತೆ ಪಾತ್ರ ನಿರ್ವಹಿಸಲು ಕರೀನಾ ದೊಡ್ಡ ಸಂಭಾವನೆ ಕೇಳಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಕಠುವಾಗಿ ಟೀಕಿಸಿದ್ದರು. ಇನ್ನು ಕೆಲವರಂತೂ ಸೈಫ್ ಅಲಿ ಖಾನ್ ಅನ್ನು ವಿವಾಹವಾಗಿರುವ ಕರೀನಾರಿಂದ ಸೀತೆ ಪಾತ್ರ ಮಾಡಿಸಿದರೆ ಸಿನಿಮಾವನ್ನು ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಸಹ ಹಾಕಿದರು. ಆದರೆ ಈಗ ನಟಿ ತಾಪ್ಸಿ ಪನ್ನು, ಕರೀನಾ ಹೆಚ್ಚು ಸಂಭಾವನೆ ಕೇಳಿದ್ದನ್ನು ಬೆಂಬಲಿಸಿದ್ದಾರೆ.

  ''ನಟ ಹೆಚ್ಚು ಸಂಭಾವನೆ ಕೇಳಿದ್ದರೆ ಪಾಸಿಟಿವ್ ಸುದ್ದಿ ಆಗಿರುತ್ತಿತ್ತು''

  ''ನಟ ಹೆಚ್ಚು ಸಂಭಾವನೆ ಕೇಳಿದ್ದರೆ ಪಾಸಿಟಿವ್ ಸುದ್ದಿ ಆಗಿರುತ್ತಿತ್ತು''

  ''ಯಾವುದೇ ನಟ ಪೌರಾಣಿಕ ಪಾತ್ರ ಮಾಡಲು ಸಂಭಾವನೆ ಹೆಚ್ಚಿಸಿಕೊಂಡಿದ್ದಿದ್ದರೆ ಅದು ಪಾಸಿಟಿವ್ ಸುದ್ದಿ ಆಗಿರುತ್ತಿತ್ತು. ಯಾರೂ ಅದರ ಬಗ್ಗೆ ಋಣಾತ್ಮಕವಾಗಿ ಮಾತನಾಡುತ್ತಿರಲಿಲ್ಲ. ಅದೇ ನಟಿಯೊಬ್ಬರು ಹೆಚ್ಚಿನ ಸಂಭಾವನೆಗೆ ಡಿಮ್ಯಾಂಡ್ ಮಾಡಿದಾಗ ಎಲ್ಲರಿಗೂ ಸಮಸ್ಯೆ ಶುರುವಾಗುತ್ತದೆ'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ ನಟಿ ತಾಪ್ಸಿ.

  ''ನಟ ಹೆಚ್ಚು ಸಂಭಾವನೆ ಕೇಳಿದ್ದರೆ ಮಾರುಕಟ್ಟೆ ಹೆಚ್ಚಿದೆ ಎನ್ನುತ್ತಿದ್ದರು''

  ''ನಟ ಹೆಚ್ಚು ಸಂಭಾವನೆ ಕೇಳಿದ್ದರೆ ಮಾರುಕಟ್ಟೆ ಹೆಚ್ಚಿದೆ ಎನ್ನುತ್ತಿದ್ದರು''

  ''ಕರೀನಾ ಸ್ಥಾನದಲ್ಲಿ ಸ್ಟಾರ್ ನಟನೊಬ್ಬ ಇದ್ದು ಆತ ಹೆಚ್ಚು ಸಂಭಾವನೆ ಕೇಳಿದ್ದಿದ್ದರೆ ಆ ನಟನ ಮಾರುಕಟ್ಟೆ ಮೌಲ್ಯ ವೃದ್ಧಿಸಿದೆ. ಆತ ದೊಡ್ಡ ಯಶಸ್ಸು ಗಳಿಸಿಬಿಟ್ಟಿದ್ದಾನೆ ಎನ್ನುತ್ತಿದ್ದರು. ಆದರೆ ನಟಿಯೊಬ್ಬಾಕೆ ಹೆಚ್ಚಿನ ಸಂಭಾವನೆ ಕೇಳಿದಾಗ 'ಆಕೆ ತುಂಬಾ ಡಿಮ್ಯಾಂಡಿಂಗ್' ಎನ್ನುವ ಮಾತುಗಳು ಬರುತ್ತವೆ'' ಎಂದಿದ್ದಾರೆ ತಾಪ್ಸಿ.

  ಕರೀನಾ ಕಪೂರ್ ಸೂಪರ್ ಸ್ಟಾರ್: ತಾಪ್ಸಿ ಪನ್ನು

  ಕರೀನಾ ಕಪೂರ್ ಸೂಪರ್ ಸ್ಟಾರ್: ತಾಪ್ಸಿ ಪನ್ನು

  ಮುಂದುವರೆದು, ''ಕರೀನಾ ಕಪೂರ್ ಭಾರತದ ದೊಡ್ಡ ನಟಿಯರಲ್ಲಿ ಒಬ್ಬರು. ಆಕೆ ಸೂಪರ್ ಸ್ಟಾರ್. ಆಕೆ ಪಾತ್ರವೊಂದನ್ನು ಮಾಡಲು ದೊಡ್ಡ ಸಂಭಾವನೆ ಕೇಳುತ್ತಿದ್ದಾರೆ ಎಂದರೆ ಆಕೆ ಆ ಸಿನಿಮಾಕ್ಕೆ ತಮ್ಮ ಬಹುಸಸಮಯ ವ್ಯಯಿಸಲಿದ್ದಾರೆ. ಅದೇ ಯಾರಾದರೂ ನಟರು ಯಾವುದೇ ಪೌರಾಣಿಕ ಪಾತ್ರವನ್ನು ಸಂಭಾವನೆ ಪಡೆಯದೇ ಮಾಡಿದ್ದಾರಾ ಅಥವಾ ಮಾಡುತ್ತಾರಾ? ನನಗೆ ಹಾಗೆ ಅನ್ನಿಸುವುದಿಲ್ಲ'' ಎಂದಿದ್ದಾರೆ ತಾಪ್ಸಿ ಪನ್ನು.

  Kichcha Sudeep Biography | ಕಿಚ್ಚ ಸುದೀಪ್ ಜೀವನಚರಿತ್ರೆ | Sudeep Age, Movies, Family, Net Worth, Awards
  ಈ ಹಿಂದೆಯೂ ಮಾತನಾಡಿದ್ದರು ತಾಪ್ಸಿ

  ಈ ಹಿಂದೆಯೂ ಮಾತನಾಡಿದ್ದರು ತಾಪ್ಸಿ

  ನಟಿ ತಾಪ್ಸಿ ಪನ್ನು ಬಾಲಿವುಡ್‌ನ ಗಟ್ಟಿ ಗುಂಡಿಗೆಯ ನಟಿಯರಲ್ಲಿ ಒಬ್ಬರು. ತಮ್ಮ ಅಭಿಪ್ರಾಯವನ್ನು ಹೇಳಲು ಅವರು ಹಿಂಜರಿಯುವುದಿಲ್ಲ. ಕೇಂದ್ರದ ಕೆಲವು ನಿಯಮಗಳನ್ನು ಅವರು ಬಹಿರಂಗವಾಗಿ ಟೀಕಿಸಿದ್ದರು. ಅದಕ್ಕಾಗಿ ಕೆಲವು ಸಮಸ್ಯೆಗಳನ್ನೂ ಆಕೆ ಎದುರಿಸಬೇಕಾಯಿತು. ಸಿನಿಮಾ ರಂಗದಲ್ಲಿ ನಟ ಹಾಗೂ ನಟಿಯರ ನಡುವಿನ ಸಂಭಾವನೆ ತಾರತಮ್ಯದ ಬಗ್ಗೆ ಈ ಹಿಂದೆಯೂ ತಾಪ್ಸಿ ಮಾತನಾಡಿದ್ದರು.

  English summary
  Taapsee Pannu defends Kareena Kapoor for her decision of hiking remuneration for playing Sita character.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X