ನಾನು 'ಪಬ್ಲಿಕ್ ಫಿಗರ್', 'ಪಬ್ಲಿಕ್ ಪ್ರಾಪರ್ಟಿ' ಅಲ್ಲ ಎಂದು ಕಿಡಿ ಕಾರಿದ ಖ್ಯಾತ ನಟಿ..!
ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂದು ಸುಮ್ಮನೆ ಕೂರುವ ತಾರೆಯರೇ ಹೆಚ್ಚು. ಆದರೆ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ದ. ಎದ್ದು ಬಂದು ಎದೆಗೆ ಒದ್ದರೂ ಚಿಂತೆ ಇಲ್ಲ. ಇದ್ದಿದ್ದನ್ನು ಇದ್ದ ಹಾಗೇ ಹೇಳುವ ಛಾತಿಯನ್ನು ಹೊಂದಿರುವವರು ತಾಪ್ಸಿ ಪನ್ನು. ಇಂಥಾ ತಾಪ್ಸಿ ಪನ್ನು ಮತ್ತು ಪಾಪರಾಜಿಗಳ ನಡುವೆ ಆಗಾಗ ಕಿರಿಕ್ಕು ನಡೆಯುತ್ತಾನೇ ಇರುತ್ತೆ. ಇದಕ್ಕೆ ಕಾರಣವೇನು ಅನ್ನುವುದನ್ನು ತಾಪ್ಸಿ ಪನ್ನು ಸದ್ಯಕ್ಕೆ ಹೇಳಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ತಾಪ್ಸಿ ಪನ್ನು, ನಾನು ಪಬ್ಲಿಕ್ ಫಿಗರ್ ಹಾಗಂಥ ಪಬ್ಲಿಕ್ ಪ್ರಾಪರ್ಟಿ ಅಲ್ಲ ಎಂದಿದ್ದಾರೆ. ಸಾರ್ವಜನಿಕ ವ್ಯಕ್ತಿ ಮತ್ತು ಸಾರ್ವಜನಿಕ ಆಸ್ತಿಯ ನಡುವೆ ತುಂಬಾ ವ್ಯತ್ಯಾಸ ಇದೆ ಎಂದಿರುವ ತಾಪ್ಸಿ ಪನ್ನು, ನೀವು ನನ್ನ ಮೇಲೆ ಕೂಗಾಡಿದರೆ ನಾನು ಸಹಿಸಿಕೊಳ್ಳಲ್ಲ. ದೈಹಿಕವಾಗಿ ನನ್ನ ಹತ್ತಿರ ಬರುವ ಪ್ರಯತ್ನ ಮಾಡಿದರೆ ನಾನು ಸುಮ್ಮನೆ ಕೂರಲ್ಲ ಅಂದಿದ್ದಾರೆ. ಉದ್ದೇಶಪೂರ್ವಕವಾಗಿ ಕೆಣಕಲು ಮುಂದಾದರೆ ನಾನು ಬಿಡಲ್ಲ ಎಂದಿದ್ದಾರೆ.

ಇನ್ನೂ..ಕಾಲೆಳೆಯಲು ಹೊಂಚು ಹಾಕಿ ಕೂರುವ ಟ್ರೋಲಿಗರ ಕುರಿತು ಕೂಡ ಮಾತನಾಡಿರುವ ತಾಪ್ಸಿ ಪನ್ನು, ಯಾರಾದರೂ ನನ್ನ ಬಗ್ಗೆ ಕೀಳಾಗಿ ಮಾತನಾಡುತ್ತಿದ್ಧಾರೆ, ನನ್ನನ್ನೂ ಟ್ರೋಲ್ ಮಾಡುತ್ತಿದ್ದಾರೆ ಎಂದರೆ ನನ್ನಲ್ಲಿ ಏನೋ ಇದೆ ಎಂದೇ ಅರ್ಥ ಎಂದಿದ್ದಾರೆ. ಅವರ ಸಮಯವನ್ನು ನನ್ನನ್ನು ಟ್ರೋಲ್ ಮಾಡಲು ಅವರು ಹಾಳು ಮಾಡುತ್ತಿದ್ದಾರೆ ಎಂದರೆ ನಾನು ಬೆಳೆಯುತ್ತಿದ್ದೇನೆ ಎಂದು ಅರ್ಥ ಎಂದು ಹೇಳಿದ್ದಾರೆ.
ಆದರೆ, ಹಿಂದೆಯೆಲ್ಲ.. ಒಬ್ಬ ವ್ಯಕ್ತಿಯ ಜೀವನವನ್ನು ಇಲ್ಲಿ ಹಾಳು ಮಾಡಲು ವಿಮರ್ಷಕರಿಂದ ಸಾಧ್ಯವಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ನೀವು ಎಷ್ಟೇ ಪ್ರಯತ್ನ ಮಾಡಿದರೂ.. ಯಾರು ಎಷ್ಟೇ ಟ್ರೋಲ್ ಮಾಡಿದರೂ.. ಯಾರು ಯಾರನ್ನು ತುಳಿಯಲು ಸಾಧ್ಯ ಇಲ್ಲ ಎಂದಿದ್ದಾರೆ ತಾಪ್ಸಿ ಪನ್ನು.

ಯಾರು ಏನಾದರೂ ಅಂದುಕೊಳ್ಳಲಿ, ಯಾರು ಬೇಕಾದರೂ ಟ್ರೋಲ್ ಮಾಡಲಿ, ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದಿರುವ ತಾಪ್ಸಿ, ನನ್ನ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತೇನೆ, ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಕೆಲ ಚಿತ್ರಗಳು ನಾವು ಅಂದುಕೊಂಡಂತೆ ಗೆಲ್ಲುವುದಿಲ್ಲ. ಆದರೆ ಆ ಚಿತ್ರದಲ್ಲಿ ನಾವು ನಿರ್ವಹಿಸಿದ ಪಾತ್ರಕ್ಕೆ ವಿಮರ್ಷಕರಿಂದ, ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕರೆ ಅದಕ್ಕಿಂತ ಖುಷಿ ಇನ್ನೊಂದಿಲ್ಲ ಎಂದಿರುವ ತಾಪ್ಸಿ ಪನ್ನು ಒಂದು ಚಿತ್ರ ಕೇವಲ ಒಬ್ಬರಿಂದ ಆಗುವುದಲ್ಲ, ಅದು ಒಂದು ತಂಡದ ಶ್ರಮದಿಂದ ಆಗುವಂತಹದ್ದು ಎಂದಿದ್ದಾರೆ.
ಅಂದ್ಹಾಗೇ ತಾಪ್ಸಿ ಪನ್ನು ಪಾಪರಾಜಿಗಳ ಮೇಲೆ ಕಿಡಿ ಕಾರುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ತಾಪ್ಸಿ ಮತ್ತು ಪಾಪರಾಜಿಗಳ ನಡುವೆ ವಾಗ್ಯುದ್ದ ನಡೆದಿದೆ. ದಯವಿಟ್ಟು ನನ್ನೊಂದಿಗೆ ಗೌರವಯುತವಾಗಿ ಮಾತನಾಡಿ ಎಂದು ತಾಪ್ಸಿ ಪಾಪರಾಜಿಗಳಿಗೆ ಹೇಳಿದ್ದು ಇದೆ. ಉಳಿದಂತೆ ತಾಪ್ಸಿ ಅಭಿನಯದ ಫಿರ್ ಆಯಿ ಹಸೀನ್ ದಿಲ್‌ರುಬಾ ನೆಟ್‌ಪ್ಲಿಕ್ಸ್ ನಲ್ಲಿ ಇತ್ತೀಚಿಗೆ ಬಿಡುಗಡೆಯಾಗಿದೆ.
"I am a public figure, not public property" Taapsee Pannu blasts the paparazzi#ANIPodcast #SmitaPrakash #TaapseePannu #Paparazzi #Bollywood
— ANI (@ANI) August 23, 2024
Watch Full Episode Here: https://t.co/37YkT6m8lh pic.twitter.com/t6PxKdvJYM


Click it and Unblock the Notifications











