ಸಿಕ್ಸ್ ಪ್ಯಾಕ್ ಪ್ರದರ್ಶಿಸಿ ಸವಾಲಾಕಿದ ತಾಪ್ಸಿ ಪನ್ನು ಹಾಗೂ ನಿಶ್ವಿಕಾ ನಾಯ್ಡು
ಸಿನಿಮಾ ನಟರು ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಮಾಡಿ ಅಭಿಮಾನಿಗಳಿಗೆ ಥ್ರಿಲ್ ಕೊಡೋದನ್ನು ನೋಡಿದ್ದೇವೆ. ನೆಚ್ಚಿನ ನಟನ ಟೋನ್ಡ್ ಬಾಡಿ ನೋಡಿದ ಅಭಿಮಾನಿಗಳು ಕೂಡ ಕಸರತ್ತು ಮಾಡುವ ಪ್ರಯತ್ನ ಮಾಡುತ್ತಾರೆ. ನಟಿಯರು ಫಿಟ್ ಅಂಡ್ ಫೈನ್ ಆಗಿ ಇರಲು, ಪರ್ಫೆಕ್ಟ್ ಫಿಗರ್ ಮೇಂಟೇನ್ ಮಾಡೋಕೆ ಜಿಮ್‌ನಲ್ಲಿ ಬೆವರಿಳಿಸುತ್ತಾರೆ. ಆದರೆ ಕೆಲ ನಟಿಯರು ಸಿಕ್ಸ್‌ಪ್ಯಾಕ್ ಹ್ಯಾಬ್ಸ್ ಶಾಕ್ ಕೊಡ್ತಾರೆ.
ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ನಟಿಯರು ಉತ್ತಮ ಮೈಮಾಟಕ್ಕಾಗಿ ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ. ಕೆಲವರು ಎಷ್ಟರಮಟ್ಟಿಗೆ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ಅಂದರೆ ಸಿಕ್ಸ್ ಪ್ಯಾಕ್ಸ್ ಮಾಡಿ ಹುಬ್ಬೇರಿಸುತ್ತಾರೆ. ಸದ್ಯ ಕನ್ನಡ ನಟಿ ನಿಶ್ವಿಕಾ ನಾಯ್ಡು ಹಾಗೂ ಬಾಲಿವುಡ್ ನಟಿ ತಾಪ್ಸಿ ಪನ್ನು ಸಿಕ್ಸ್ ಪ್ಯಾಕ್ ಪ್ರದರ್ಶಿಸುತ್ತಿರುವ ಫೋಟೊಗಳು ವೈರಲ್ ಆಗ್ತಿದೆ. ಅಭಿಮಾನಿಗಳು ಇವರಿಬ್ಬರ ಡೆಡಿಕೇಷನ್ ನೋಡಿ ನಾವು ಜಿಮ್‌ಗೆ ಸೇರುತ್ತೇವೆ ಎನ್ನುತ್ತಿದ್ದಾರೆ.

ಕನ್ನಡ ನಟಿ ನಿಶ್ವಿಕಾ ನಾಯ್ಡು ಸದಾ ಜಿಮ್‌ನಲ್ಲಿ ವರ್ಕೌಟ್, ಯೋಗ ಮಾಡುತ್ತಿರುವ ವಿಡಿಯೋಗಳನ್ನು, ಫೋಟೊಗಳನ್ನು ಶೇರ್ ಮಾಡುತ್ತಿರುತ್ತಾರೆ. ಬಹಳ ಹಿಂದೆಯೇ ಅವರ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರಲ್ಲಿ ಒಂದು ಫೋಟೊ ಮತ್ತೆ ಈಗ ವೈರಲ್ ಆಗುತ್ತಿದೆ. ಇನ್ನು ತಾಪ್ಸಿ ಪನ್ನು ಜಿಮ್‌ನಲ್ಲಿ ತಮ್ಮ ಕೋಚ್ ಜೊತೆ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಪ್ರದರ್ಶಿಸುತ್ತಾ ಪೋಸ್ ಕೊಟ್ಟಿದ್ದಾರೆ.
ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ ಅತ್ಯಾವಶ್ಯಕ. ಪ್ರತಿದಿನ ಕಸರತ್ತು ಮಾಡಿ ಬೆವರಿಳಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅದರಲ್ಲೂ ಮುಖ್ಯವಾಗಿ ಸಿನಿಮಾ ತಾರೆಯರು ತೆರೆಮೇಲೆ ಚೆನ್ನಾಗಿ ಕಾಣಿಸಿಕೊಳ್ಳಬೇಕು. ದೇಹದ ತೂಕ ಹೆಚ್ಚಾದ ಕಾರಣಕ್ಕೆ ಚಿತ್ರರಂಗದಿಂದ ದೂರಾದ ನಟ- ನಟಿಯರು ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ತಾರೆಯರು ಹೆಚ್ಚು ಹೆಚ್ಚು ಜಿಮ್‌ನಲ್ಲಿ ಕಾಲ ಕಳೆಯುತ್ತಾರೆ. ಕೆಲವರು ಮನೆಯಲ್ಲೇ ಪುಟ್ಟ ಜಿಮ್ ನಿರ್ಮಿಸಿಕೊಂಡಿರುತ್ತಾರೆ. ಆದರೂ ಕೂಡ ನಟಿಯರು ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಮಾಡೋದು ಕಮ್ಮಿ. ಆದರೆ ತಾಪ್ಸಿ, ನಿಶ್ವಿಕಾ ಮಾಡಿ ತೋರಿಸಿದ್ದಾರೆ.
ಆಕರ್ಷಕ ಹಾಗೂ ಬಲಿಷ್ಠ ದೇಹದ ಸ್ನಾಯುಗಳನ್ನು ಬೆಳೆಸಲು ನಾನಾ ರೀತಿಯ ಕಸರತ್ತು ಮಾಡಬೇಕು. ಇನ್ನು ಹೊಟ್ಟೆ ಕರಗಿಸಿ ಸಿಕ್ಸ್ ಪ್ಯಾಕ್ ಹ್ಯಾಬ್ಸ್ ಕಾಣುವಂತೆ ಮಾಡಲು ಪ್ರತ್ಯೇಕ ಕಸರತ್ತುಗಳಿವೆ. ಜೊತೆಗೆ ಡಯೆಟ್ ಕೂಡ ಅತ್ಯಾವಶ್ಯಕ. ನಟಿ ತಾಪ್ಸಿ ತಮ್ಮ ಜಿಮ್ ಕೋಚ್ ಸುಜಿತ್ ಕಾರ್ಗುಟ್‌ಕರ್‌ನ ಕೂಡ ಪರಿಚಯಿಸಿದ್ದಾರೆ. ಕನ್ನಡ ನಟಿಯರಲ್ಲಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೆಗ್ಡೆ ಹೆಚ್ಚು ಹೆಚ್ಚು ಜಿಮ್‌ನಲ್ಲಿ ಕಸರತ್ತು ಮಾಡುತ್ತಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ಕಳೆದ ವರ್ಷ ನಿಶ್ವಿಕಾ ನಟನೆಯ 'ಗುರುಶಿಷ್ಯರು' ಹಾಗೂ 'ದಿಲ್ ಪಸಂದ್' ಸಿನಿಮಾಗಳು ರಿಲೀಸ್ ಆಗಿತ್ತು. ನಿಶ್ವಿಕಾ ಕಾಣಿಸಿಕೊಂಡಿದ್ದ 'ಆಣೆ ಮಾಡಿ ಹೇಳುತ್ತೀನಿ' ಸಾಂಗ್ ಸೂಪರ್ ಹಿಟ್ ಆಯಿತು. ಸದ್ಯ ಹೊಸ ಸಿನಿಮಾಗಳಲ್ಲಿ ಆಕೆ ನಟಿಸ್ತಿದ್ದಾರೆ. ಇನ್ನು ವೆರೈ ವೆರೈಟಿ ಫೋಟೊಶೂಟ್‌ಗಳಿಂದಲೂ ಚೆಲುವೆ ಗಮನ ಸೆಳೆಯುತ್ತಾರೆ.
ಇನ್ನು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸಿ ತಾಪ್ಸಿ ಸದಾ ಸುದ್ದಿಯಲ್ಲಿ ಇರ್ತಾರೆ. ಬೋಲ್ಡ್ ಅವತಾರದಲ್ಲಿ ಅಭಿಮಾನಿಗಳ ಮನಗೆಲ್ಲುತ್ತಾರೆ. ವೆಬ್ ಸೀರಿಸ್‌ಗಳಲ್ಲೂ ನಟಿಸುತ್ತಿರುತ್ತಾರೆ. ಸದ್ಯ ತಮಿಳಿನ 'ಜನಗಣಮನ' ಹಾಗೂ 'ಏಲಿಯನ್' ಸಿನಿಮಾಗಳಲ್ಲಿ ತಾಪ್ಸಿ ನಟಿಸ್ತಿದ್ದಾರೆ. 'ವೋ ಲಡ್ಕಿ ಹೈ ಕಹಾನ್', 'ಡಂಕಿ' ಹಾಗೂ 'ಪಿರ್ ಆಯಿ ಹಸೀನ್ ದಿಲ್‌ರುಬಾ' ಹಿಂದಿ ಸಿನಿಮಾಗಳು ಕೈಯಲ್ಲಿವೆ. 'ಡಂಕಿ' ಚಿತ್ರದಲ್ಲಿ ಶಾರುಕ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.


Click it and Unblock the Notifications











