'ಅಂಬಾನಿ' ಮಗನ ಮದ್ವೆಗೆ ಸ್ವರ್ಗವೇ ಧರೆಗಿಳಿದರೂ ಹೋಗಲಿಲ್ಲವೇಕೆ 'ದಿಲ್ ರುಬಾ' ತ್ಯಾಪ್ಸಿ ಪನ್ನು..?

ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು ಅನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದವರು ಮುಖೇಶ್ ಅಂಬಾನಿ.

ಆದರೆ.. ಹಿಂದೆಂದೂ ಯಾರು ಕಂಡರಿಯದಂತೆ ತನ್ನ ಎರಡನೇ ಕೂಸಿನ ಮದ್ವೆಗೆ ಕೋಟ್ಯಂತರ ರೂಪಾಯಿಗಳನ್ನೂ ನೀರಿನಂತೆ ಚೆಲ್ಲಿ ಕಿಮ್ ಕಾರ್ಡಶಿಯಾನ್ ಅವರಿಂದ ರಜಿನಿಕಾಂತ್ ವರೆಗೆ, ಶಾರುಖ್ ಖಾನ್‌ ಅವರಿಂದ ಯಶ್ವರೆಗೆ ತನ್ನ ಇಷ್ಟಾನುಸಾರ ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಎಂದು ಭೇದ ಭಾವ ಮಾಡದೇ ಎಲ್ಲರನ್ನೂ ಕುಣಿಸಿದ ಮುಖೇಶ್ ಅಂಬಾನಿ ತ್ಯಾಪ್ಸಿ ಪನ್ನು ಎಂಬ ಸುಂದರಿಯನ್ನ ಕುಣಿಸಲು ಸಾಧ್ಯವಾಗಲಿಲ್ಲವೇಕೆ ಎಂಬ ಪ್ರಶ್ನೆ ಈಗ ಅನೇಕರನ್ನು ಕಾಡುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಹೀಗಾಗಿಯೇ ಇದೆಲ್ಲವನ್ನೂ ಮನಗಂಡು ಖುದ್ದು ತ್ಯಾಪ್ಸಿ ಪನ್ನು ಉತ್ತರವನ್ನೂ ಕೊಟ್ಟಿದ್ದಾರೆ. ಸದ್ಯಕ್ಕೆ ತ್ಯಾಪ್ಸಿ ಪನ್ನು ಅವರ ಈ ಉತ್ತರ ಕೆಲವರ ನಿದ್ದೆ ಕೆಡಿಸಿದೆ. ಇನ್ನೂ ಕೆಲವರನ್ನೂ ನಿಬ್ಬೇರಗಾಗಿಸಿದೆ.

taapsee-pannu-clarifies-her-absence-from-anant-ambani-and-radhika-merchant-s-wedding

ಹೌದು, ತ್ಯಾಪ್ಸಿ ಪನ್ನು.. ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು.ಅಂಥಹದ್ದರಲ್ಲಿ ತನಗೆ ಅನಿಸಿದ್ದನ್ನ ನೇರಾ ನೇರವಾಗಿಯೇ ಹೇಳುವ ಛಾತಿ ಹೊಂದಿರುವವರು ತ್ಯಾಪ್ಸಿ ಪನ್ನು, ಸದ್ಯಕ್ಕೆ ಅಂಬಾನಿ ಮದ್ವೆಯಲ್ಲಿ ತಾನ್ಯಾಕೇ ಭಾಗಿಯಾಗಿಲ್ಲ ಅನ್ನುವುದಕ್ಕೆ ಉತ್ತರವನ್ನೂ ಕೊಟ್ಟಿದ್ದಾರೆ. ಗುರುತು ಪರಿಚಯ ಇರದೆ ಇರುವವರ ಮದುವೆಗೆ ಹೋಗಿ ನಾನೇನು ಮಾಡಲಿ ನೀವೇ ಹೇಳಿ ಎಂದು ಮರು ಪ್ರಶ್ನೆಯನ್ನೂ ಮಾಡಿದ್ದಾರೆ.

ಆರ್.ಜೆ.ಸ್ತುತಿ ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ತ್ಯಾಪ್ಸಿ ಪನ್ನು, ಮುಖೇಶ್ ಅಂಬಾನಿ, ನೀತಾ ಅಂಬಾನಿ, ಅಥವಾ ಅನಂತ್ ಅಂಬಾನಿ ಇವರಲ್ಲಿ ಯಾರು ನನಗೆ ವೈಯಕ್ತಿಕವಾಗಿ ಪರಿಚಯ ಇಲ್ಲ ಎಂದಿರುವ ತಾಪ್ಸಿ , ಸಂಪರ್ಕ ಸಂಬಂಧ ಇರದ ಮದುವೆಗೆ ಹೋಗಿ ನಾನೇನು ಮಾಡಲಿ ಎಂದಿದ್ದಾರೆ. ಬಾಲಿವುಡ್‌ನಲ್ಲಿ ಅವರಿಗೆ ಹಲವಾರು ಸ್ನೇಹಿತರಿದ್ದಾರೆ ಅವರೆಲ್ಲರೂ ಮದ್ವೆಗೆ ಹೋಗಿದ್ದಾರೆ. ನವ ಜೋಡಿಗೆ ಶುಭಾಶಯವನ್ನೂ ಕೋರಿದ್ದಾರೆ ಹಾಗಂಥ ನಾನು ಎಲ್ಲರಂತೆ ಅಲ್ಲಿ ಹೋಗಲಾರೆ ಎಂದು ಖಂಡ ತುಂಡವಾಗಿ ಮಾತನಾಡಿದ್ದಾರೆ ತ್ಯಾಪ್ಸಿ ಪನ್ನು.

taapsee-pannu-clarifies-her-absence-from-anant-ambani-and-radhika-merchant-s-wedding

ಅಂದ್ಹಾಗೇ ಜುಲೈ 12ರಂದು ನಡೆದ ಅದ್ದೂರಿ ಮದುವೆ ಕಣ್ತುಂಬಿಕೊಳ್ಳಲು, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಭ್ ಬಚ್ಚನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಮತ್ತು ಕಿಮ್ ಕಾರ್ಡಶಿಯಾನ್, ಖ್ಲೋಯ್ ಕಾರ್ಡಶಿಯಾನ್, ರೆಮಾ ಮತ್ತು ಲೂಯಿಸ್ ಫೋನ್ಸಿಯಂತಹ ಅಂತರಾಷ್ಟ್ರೀಯ ಸೆಲೆಬ್ರಿಟಿಗಳ ಹಾಜರಾಗಿದ್ದರು. ಪ್ರಿಯಾಂಕಾ ಚೋಪ್ರಾ ಜೊನಾಸ್ ತಮ್ಮ ಪತಿ ನಿಕ್ ಜೋನಾಸ್ ಅವರೊಂದಿಗೆ ಯುಎಸ್‌ನಿಂದ ಓಡೋಡಿ ಬಂದಿದ್ದರು. ಕೇವಲ ಸ್ಟಾರ್ಸ್ ಮಾತ್ರ ಅಲ್ಲ, ರಾಜಕೀಯದ ಗಣ್ಯರು ಕೂಡ ಮದುವೆಗೆ ಬಂದು ನವ ಜೋಡಿಗೆ ಶುಭ ಕೋರಿದ್ದರು. ಆದರೆ.. ಇವರೆಲ್ಲರೂ ಬಂದರೂ ಕೂಡ ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ಕಾರ್ತಿಕ್ ಆರ್ಯನ್, ಅಕ್ಷಯ್ ಕುಮಾರ್, ಕಂಗನಾ ರಣಾವತ್ ಮತ್ತು ತ್ಯಾಪ್ಸಿ ಪನ್ನು ಅವರ ಅನುಪಸ್ಥಿತಿ ಅನೇಕರನ್ನೂ ಕಾಡುತ್ತಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X