ತಾಪ್ಸಿ ಪನ್ನು ಮೇಲೆ ಕೆಂಡ ಕಾರಿದ ಸೋಶಿಯಲ್ ಮೀಡಿಯಾ ಸ್ಟಾರ್..!

ಸೆಲೆಬ್ರೆಟಿಗಳೂ ಅಭಿಮಾನಿಗಳ ಸೆಲ್ಫಿ ಸಮಸ್ಯೆಗಳಿಂದ ಈಗೀಗ ಪ್ರತಿದಿನವೂ ನರಳುವಂತಾಗಿದೆ. ಸಿನಿಮಾ ತಾರೆಯರು ಎಲ್ಲಿ ಹೋದರೂ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದು ಅವರ ಸ್ವಾತಂತ್ರ್ಯ ಹರಣವನ್ನು ಮಾಡುತ್ತಲೇ ಇರುತ್ತಾರೆ. ಸಾಕಷ್ಟು ಸೆಲೆಬ್ರೆಟಿಗಳು ಇದರ ಸಲುವಾಗಿ ಪಬ್ಲಿಕ್ಕಿಗೆ ತಲೆ ಹಾಕುವುದೂ ಕಡಿಮೆ. ಇನ್ನೂ ಕೆಲವರು ಬಾಡಿಗಾರ್ಡ್ ಗಳನ್ನಿಟ್ಟುಕೊಂಡು ಅವೆಲ್ಲವನ್ನೂ ಅವಾಯ್ಡ್ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗ ಈಗೀಗ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಗಳ ಹಾವಳಿ ಹೆಚ್ಚಾಗುತ್ತಿದೆ. ಇವರಿಂದ ಸೆಲೆಬ್ರಿಟಿಗಳಿಗೆ ತುಸು ಹೆಚ್ಚೇ ಕಿರಿಕಿರಿಯಾಗುತ್ತಿದೆ. ಇದಕ್ಕೆ ಮೊನ್ನೆ ನಡೆದ ತಾಪ್ಸಿ ಪನ್ನು ಪ್ರಸಂಗ ಅತ್ಯುತ್ತಮ ಸಾಕ್ಷಿ.

ಹೌದು, ತಾಪ್ಸಿ ಪನ್ನು .. ಇತ್ತೀಚೆಗೆ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ನಾಯಕಿ. ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ತಾಪ್ಸಿ ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ.. ಮಾಯಾನಗರಿ ಮುಂಬೈನಲ್ಲಿ ಇವರಿಗೆ ಇವರದ್ದೇ ಆದ ಅಭಿಮಾನಿ ಬಳಗ ಇದೆ. ಇವರ ಅಭಿನಯವನ್ನ ಮೆಚ್ಚಿಕೊಳ್ಳುವ ಒಂದು ವರ್ಗ ಇದೆ.

Taapsee Pannu declined a photo with an influencer at a Khel Khel Mein event

ಇಂಥಾ ತಾಪ್ಸಿ ಪನ್ನು ಸದ್ಯಕ್ಕೆ ''ಖೇಲ್ ಖೇಲ್ ಮೇ'' ಎಂಬ ಚಿತ್ರದಲ್ಲಿ ಆಕ್ಟ್ ಮಾಡಿದ್ದಾರೆ.ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ನಾಯಕನಾಗಿರುವ ಈ ಚಿತ್ರ ಇನ್ನೇನು ಬಿಡುಗಡೆಯಾಗಲಿದೆ. ಹೀಗಾಗಿಯೇ ಚಿತ್ರದ ಪ್ರಚಾರದ ಕೆಲಸಕ್ಕೆ ಚಾಲನೆಯನ್ನೂ ನೀಡಿರುವ ಚಿತ್ರತಂಡ ಮೊನ್ನೆ ಚಿತ್ರದ ಹಾಡೊಂದರ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು.

ಹಾಡು ಬಿಡುಗಡೆಯ ಈ ಸಮಾರಂಭದಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಭಾಗಿಯಾಗಿದ್ದರು. ಬಳಿಕ ವೇದಿಕೆಯಲ್ಲಿ ತಾಪ್ಸಿ ಪನ್ನುಗೆ ಹಸ್ತಲಾಘವ ಮಾಡಿ ಸೆಲ್ಫಿ ಕೇಳಿದರು. ಆದರೆ, ನಗುಮುಖದಿಂದಲೇ ತಾಪ್ಸಿ ಪನ್ನು ಸೆಲ್ಫಿಗೆ ನಿರಾಕರಿಸಿದರು. ಸಾರ್ವಜನಿಕವಾಗಿ ತಮ್ಮ ಪ್ರತಿಷ್ಠೆಗೆ ಬಿದ್ದ ಈ ಪೆಟ್ಟಿನಿಂದ ಕೆರಳಿ ಕೆಂಡವಾದ ಈ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಅನನ್ಯ ದ್ವಿವೇದಿ ಆ ನಂತರ ತಾಪ್ಸಿ ವಿರುದ್ಧ ಹರಿಹಾಯ್ದಿದ್ದಾರೆ. ತಾಪ್ಸಿ ಪನ್ನುಗೆ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ.

taapsee-pannu-declined-a-photo-with-an-influencer-at-a-khel-khel-mein-event

ಬಾಲಿವುಡ್ ಪಾಪರಾಜಿಯೊಬ್ಬರ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕಾಮೆಂಟ್ ಮಾಡಿದ್ದ ಅನನ್ಯ ಅದು ನಾನು. ನೀವು ಈಗಾಗಲೇ ಕ್ಯಾಮೆರಾಗಳಿಂದ ಸುತ್ತುವರಿದಿರುವಾಗ ಯಾರಾದರೂ ಸೆಲ್ಫಿಯನ್ನು ಕೇಳಿದರೆ ಏಕೆ ನಿರಾಕರಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನನ್ನಂತಹ ಇನ್‌ಫ್ಲುಯೆನ್ಸರ್ ಕರೆದ ಏಕೈಕ ಕಾರಣವೆಂದರೆ ಅವರ ಹಾಡನ್ನು ಪ್ರಚಾರ ಮಾಡಲು! ಆಕೆಗೆ ನಿಜವಾಗಿಯೂ ಉತ್ತಮ ಪಿಆರ್ ತರಬೇತಿಯ ಅಗತ್ಯವಿದೆ" ಎಂದಿದ್ದಾರೆ.

ಅನನ್ಯ ದ್ವಿವೇದಿಯ ಈ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣದ ಸಕ್ರಿಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ತಾಪ್ಸಿ ಪರ ವಕಾಲತ್ತು ವಹಿಸಿ ಅನನ್ಯ ದ್ವಿವೇದಿಗೆ ಉಗಿದು ಉಪ್ಪಿನಕಾಯಿಯನ್ನೂ ಹಾಕಿದ್ಧಾರೆ.ಅಭಿಮಾನಿಯೊಬ್ಬರು ತಾಪ್ಸಿಯನ್ನು ಸಮರ್ಥಿಸಿಕೊಂಡು, ಹೀಗೆ ಬರೆದಿದ್ದಾರೆ.. "ಹೌದು.. ಆದರೆ ಅವರು ಕೆಲವೇ ಕೆಲವು ಮಾತು ಹೇಳಿ ತಕ್ಷಣ ತಮ್ಮ ಫೋನ್ ಕ್ಯಾಮೆರಾ ತೆಗೆದಿದ್ದಾರೆ. ತಾಪ್ಸಿ ಬಹುಶಃ ಸರಿಯಾದ ಫೋಟೋಗಳನ್ನು ತೆಗೆದುಕೊಳ್ಳುವಂತೆ ಹೇಳಿತ್ತಿದ್ದರು" ಎಂದಿದ್ದಾರೆ.

taapsee-pannu-declined-a-photo-with-an-influencer-at-a-khel-khel-mein-event

ಮತ್ತೊಬ್ಬ ಅಭಿಮಾನಿ, "ಅವರು ಯಾವುದೇ ತಪ್ಪು ಮಾಡಿಲ್ಲ, ಆಕೆಗೆ ಸೆಲ್ಫಿ ಕೊಡುವ ಯಾವುದೇ ಕೆಲಸ ಇಲ್ಲ, ಜೊತೆಗೆ ಅವರಿಗೆ ಸರಿಯಾದ ಫೋಟೋಗಳನ್ನು ತೆಗೆಯಲು ಅಲ್ಲಿಯೇ ಕ್ಯಾಮೆರಾಗಳಿವೆ" ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬ ಅಭಿಮಾನಿ, "ಅವರು ನಟಿ ಎಂಬ ಕಾರಣಕ್ಕೆ ಪ್ರತಿ ಫೋಟೋಗೆ ಅವರು ಹೌದು ಎಂದು ಹೇಳಬೇಕು ಎಂದಲ್ಲ. ಬಹುಶಃ ಅವಳು ಸೆಲ್ಫಿಗಳಲ್ಲಿ ತನ್ನನ್ನು ಇಷ್ಟಪಡುವುದಿಲ್ಲ, ಬಹುಶಃ ವೃತ್ತಿಪರ ಕ್ಯಾಮೆರಾಗಳು ಇವೆ. ಇವುಗಳಲ್ಲಿಯೇ ಸ್ಪಷ್ಟವಾಗಿ ಫೋಟೋಗಳು ಬರುತ್ತವೆ ಎಂದುಕೊಂಡಿರಬೇಕು. ಸಾರ್ವಜನಿಕ ವ್ಯಕ್ತಿ ಎಂಬ ಕಾರಣಕ್ಕಾಗಿ ಅವರು ಎಲ್ಲರಿಗೂ ಸೆಲ್ಫೀ ನೀಡಬೇಕು ಎಂಬ ನಿಯಮವಿಲ್ಲ" ಎಂದಿದ್ದಾರೆ.

Tapsee strikes again! Swipe for more
byu/Away-Enthusiasm8771 inBollyBlindsNGossip

ಅಂದ್ಹಾಗೇ ತಾಪ್ಸಿ ಪನ್ನು ಮತ್ತು ಅಕ್ಷಯ್ ಕುಮಾರ್ ಅಭಿನಯದ ''ಖೇಲ್‌ ಖೇಲ್ ಮೇ'' ಈ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ. ಇವರಿಬ್ಬರ ಜೊತೆ ಈ ಚಿತ್ರದಲ್ಲಿವಾಣಿ ಕಪೂರ್, ಆದಿತ್ಯ ಸೀಲ್, ಆಮಿ ವಿರ್ಕ್ ಮತ್ತು ಫರ್ದೀನ್ ಖಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ ''ಫಿರ್ ಆಯಿ ಹಸೀನ್ ದಿಲ್‌ ರುಬಾ'' ಚಿತ್ರದಲ್ಲಿ ಕೂಡ ತಾಪ್ಸಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 09ರಂದು ಈ ಚಿತ್ರ ನೆಟ್‌ಪ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X