ತೆರೆಮೇಲೆ ಟೀಂ ಇಂಡಿಯಾ ನಾಯಕಿ ಮಿಥಾಲಿ ಬಯೋಪಿಕ್: ನಾಯಕಿ ಇವರೇ ನೋಡಿ
Recommended Video
ಬಾಲಿವುಡ್ ನಲ್ಲಿ ಬಯೋಪಿಕ್ ಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇತ್ತೀಚಿಗೆ ಸಾಕಷ್ಟು ಬಯೋಪಿಕ್ ಗಳು ಸೆಟ್ಟೇರಿವೆ. ಅದರಲ್ಲೂ ಕ್ರೀಡಾ ಆಧಾರಿತ ಬಯೋಪಿಕ್ ಗಳು ಹೆಚ್ಚಾಗಿ ಬರುತ್ತಿವೆ. ಈಗಾಗಲೆ ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಬಯೋಪಿಕ್ ತಯಾರಾಗುತ್ತಿದೆ. ನಟ ರಣ್ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಈಗ ಇದೆ ಸಾಲಿಗೆ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಬಯೋಪಿಕ್ ಸೇರ್ಪಡೆಯಾಗುತ್ತಿದೆ.
ಹೌದು, ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಜೀವನ ಈಗ ತೆರೆಮೇಲೆ ಬರಲು ಸಿದ್ಧವಾಗುತ್ತಿದೆ. ಮಿಥಾಲಿ ರಾಜ್ ಜೀವನಾಧಾರಿತ ಸಿನಿಮಾ ಬರುತ್ತೆ ಎಂದು ಅನೇಕ ಸಮಯದಿಂದ ಹೇಳಲಾಗುತ್ತಿತ್ತು. ಆದರೀಗ ಅಧಿಕೃತವಾಗಿ ಅನೌನ್ಸ್ ಆಗಿದೆ. ಇಂದು ಮಿಥಾಲಿ ರಾಜ್ 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ದಿನವೆ ಸಿನಿಮಾ ಕೂಡ ಅನೌನ್ಸ್ ಆಗಿದೆ.
ಅಂದ್ಹಾಗೆ ಮಿಥಾಲಿ ರಾಜ್ ಪಾತ್ರದಲ್ಲಿ ಟ್ಯಾಲೆಂಟೆಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ 'ಶಬಾಶ್ ಮಿಥು' ಟೈಟಲ್ ಇಡಲಾಗಿದೆ. ಚಿತ್ರಕ್ಕೆ ನಿರ್ದೇಶಕ ರಾಹುಲ್ ಧೋಲಾಕಿಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ತಾಪ್ಸಿ, ಮಿಥಾಲಿ ರಾಜ್ ಗೆ ಹಟ್ಟುಹಬ್ಬದ ಶುಭಾಶಯ ಕೋರಿ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ 20 ವರ್ಷ ಪೂರೈಸದ ಮೊದಲ ಕ್ರಿಕೆಟರ್ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಿಥಾಲಿ ರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಟಿ ತಾಪ್ಸಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ವರ್ಷ ಮಿಷನ್ ಮಂಗಲ್ ಮತ್ತು ಸಾಂದ್ ಕಿ ಆಂಖ್ ಎರಡು ಹಿಟ್ ಚಿತ್ರಗಳನ್ನು ನೀಡಿರುವ ತಾಪ್ಸಿ ಈಗ ಮಿಥಾಲಿ ಆಗಿ ಬಣ್ಣಹಚ್ಚಲು ಸಜ್ಜಾಗಿದ್ದಾರೆ.


Click it and Unblock the Notifications











