ದೀಪಿಕಾ ಅಲ್ಲ, ಅನುಷ್ಕಾ ಅಲ್ಲ, ಪ್ರಸ್ತುತ ಇವರೇ ಬಾಲಿವುಡ್‌ನ ನಂ 1 ನಟಿ

ಬಾಲಿವುಡ್‌ನ ನಂಬರ್ 1 ನಟಿ ಯಾರು? ಎಂಬ ಪ್ರಶ್ನೆಗೆ ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮಾ, ಕರೀನಾ ಕಪೂರ್ ಹೀಗೆ ಕೆಲವು ಹೆಸರುಗಳು ಬರಬಹುದು ಆದರೆ ಇದಾವುದೂ ನಿಜವಲ್ಲ.

Recommended Video

ಮಗು ವಿಚಾರದಲ್ಲಿ ಚಿರು ಕಟ್ಟಿಕೊಂಡಿದ್ದ ಕನಸು ಎಂಥದ್ದು | Chiranjeevi Sarja | Meghana Raj

ಹೌದು, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಕರೀನಾ, ಕತ್ರಿನಾ, ಅನುಷ್ಕಾ ಇವರೆಲ್ಲಾ ಸ್ಟಾರ್ ನಟಿಯರಿರಬಹುದು ಆದರೆ ನಂಬರ್ 1 ನಟಿಯರಲ್ಲ ಎಂದು ಹೊಸ ವರದಿಯೊಂದು ಬಹಿರಂಗಪಡಿಸಿದೆ.

ಯಾರ ಸಿನಿಮಾ ಹೆಚ್ಚು ಜನಕ್ಕೆ ತಲುಪುತ್ತದೆ, ಯಾರ ಸಿನಿಮಾವನ್ನು ಹೆಚ್ಚು ಮಂದಿ ನೋಡುತ್ತಾರೆ, ಯಾರ ಸಿನಿಮಾ ನಿರ್ಮಾಪಕರಿಗೆ ಹೆಚ್ಚು ಹಣ ಮಾಡಿಕೊಡುತ್ತದೆ ಅವರನ್ನು ನಂಬರ್ 1 ನಟ-ನಟಿ ಎನ್ನುವುದು ವಾಡಿಕೆ ಅದೇ ಮಾನದಂಡದಲ್ಲಿ ನೋಡಿದಾಗ ಮೇಲೆ ಹೆಸರಿಸಿದ ಯಾವ ನಟಿಯರೂ ಸಹ ಬಾಲಿವುಡ್‌ನ ನಂಬರ್ 1 ನಟಿಯರಲ್ಲ.

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ

ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ

ಹೌದು, ಬದಲಿಗೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ತಾಪ್ಸಿ ಪನ್ನು ಪ್ರಸ್ತುತ ಬಾಲಿವುಡ್‌ನ ನಂಬರ್ 1 ನಟಿ ಏಕೆಂದರೆ ಅವರ ಸಿನಿಮಾಗಳು ಗಳಿಸಿದಷ್ಟು ಹಣ ಬೇರೆ ಸ್ಟಾರ್ ನಟಿಯರ ಸಿನಿಮಾಗಳು ಗಳಿಸಿಲ್ಲ.

ಅತಿ ಹೆಚ್ಚು ಹಣ ಮಾಡಿರುವ ಸಿನಿಮಾಗಳು

ಅತಿ ಹೆಚ್ಚು ಹಣ ಮಾಡಿರುವ ಸಿನಿಮಾಗಳು

ಕಳೆದ ಒಂದು ವರ್ಷದ ಸಿನಿಮಾಗಳ ಗಳಿಕೆಯ ಲೆಕ್ಕ ಹಿಡಿದರೆ ತಾಪ್ಸಿ ಪನ್ನು ನಟಿಸಿರುವ ಸಿನಿಮಾಗಳು ಅತಿ ಹೆಚ್ಚು ಹಣ ಮಾಡಿವೆ ಮತ್ತು ಹಿಟ್ ಎನಿಸಿಕೊಂಡಿವೆ. ಕಳೆದ ಒಂದು ವರ್ಷದಲ್ಲಿ ತಾಪ್ಸಿ ಪನ್ನು ನಟಿಸಿರುವ ಹಿಂದಿ ಸಿನಿಮಾಗಳ ಒಟ್ಟು ಗಳಿಕೆ 312.13 ಕೋಟಿ. ಇಷ್ಟು ಮೊತ್ತವನ್ನು ಕಳೆದ ವರ್ಷದಲ್ಲಿ ಇನ್ನಾವ ನಟಿಯ ಸಿನಿಮಾಗಳೂ ಗಳಿಸಿಲ್ಲ.

ಹಿಂದಿ ಸಿನಿಮಾಗಳ ಗಳಿಕೆ ಮಾತ್ರವೇ ಲೆಕ್ಕ

ಹಿಂದಿ ಸಿನಿಮಾಗಳ ಗಳಿಕೆ ಮಾತ್ರವೇ ಲೆಕ್ಕ

2019 ರ ಫೆಬ್ರವರಿಯಿಂದ ಈ ವರ್ಷದ ಮಾರ್ಚ್‌ವರೆಗೆ ಬಿಡುಗಡೆಯಾದ ತಾಪ್ಸಿ ಅವರ ಹಿಂದಿ ಸಿನಿಮಾಗಳನ್ನು ಮಾತ್ರವೇ ಇಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ತಾಪ್ಸಿ ಅವರ 'ಮಿಷನ್ ಮಂಗಲ್', 'ಬದ್ಲಾ', 'ಗೇಮ್ ಓವರ್' (ಹಿಂದಿ ಮಾತ್ರ), ಸಾಂಡ್ ಕಿ ಆಕ್, ತಪ್ಪಡ್ ಸಿನಿಮಾಗಳಲ್ಲಿ ನಟಿಸಿದ್ದರು.

ಯಾವ ಸಿನಿಮಾ ಎಷ್ಟು ಗಳಿಸಿದೆ?

ಯಾವ ಸಿನಿಮಾ ಎಷ್ಟು ಗಳಿಸಿದೆ?

ಮಿಷನ್ ಮಂಗಲ್ ಒಂದೇ 202 ಕೋಟಿ ಗಳಿಸಿದೆ. ಗೇಮ್ ಓವರ್ ಹಿಂದಿ ಸಿನಿಮಾ 4.69 ಕೋಟಿ ಗಳಿಸಿದೆ. ಸಾಂಡ್ ಕಿ ಆಂಕ್ ಸಿನಿಮಾ 23.40 ಕೋಟಿ ಗಳಿಸಿದೆ. ತಪ್ಪಡ್ 33 ಕೋಟಿ ಗಳಿಸಿದೆ, ಈ ಸಿನಿಮಾ ಬಿಡುಗಡೆ ಆದಾಗ ಲಾಕ್‌ಡೌನ್ ಆಯಿತು. ಗಮನಿಸಬೇಕಾದ ಅಂಶವೆಂದರೆ ಮಿಷನ್ ಮಂಗಲ್ ಬಿಟ್ಟು ಇನ್ನು ಬಹುತೇಕ ಸಿನಿಮಾಗಳು ತಾಪ್ಸಿ ಕೇಂದ್ರಿತ ಕತೆಯುಳ್ಳ ಸಿನಿಮಾಗಳೇ ಆಗಿವೆ.

More from Filmibeat

English summary
Taapsee Pannu's movies earn more money than any other heroines of Bollywood in last one year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X