ಆಸೆ ಕಂಗಳಿಂದ ಬಂದ ಅಭಿಮಾನಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡದ ತ್ಯಾಪ್ಸಿ ಪನ್ನು...!

ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು.. ಮಾತನಾಡಲು ಹವಣಿಸೋದು ಕಾಮನ್ನು. ಯಾಕೆಂದರೆ ಅವರೆಲ್ಲ ಈ ಪ್ರಪಂಚದವರಲ್ಲ ಬದಲಿಗೆ ದೇವ ಮಾನವರೆನ್ನುವ ಕಲ್ಪನೆ ಅನೇಕರಲ್ಲಿದೆ. ಆದರೆ ಸೆಲೆಬ್ರೆಟಿಗಳು ಇವರನ್ನ ನೋಡುವ ದೃಷ್ಟಿಯೇ ಬೇರೆ. ಬಹುತೇಕರು ಹೀಗೆ ಸೆಲ್ಫಿ ಕೇಳುವರಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಡಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ತ್ಯಾಪ್ಸಿ ಪನ್ನು, ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಸೈಡ್ ಸರಿಯುವಂತೆ ಹೇಳಿದ್ದಾರೆ.

ಹೌದು, ತ್ಯಾಪ್ಸಿ ಪನ್ನು ಗೊತ್ತಲ್ಲವಾ..? ಮೊನ್ನೆಯಷ್ಟೇ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿರುವ ನಾಯಕಿ. ಒಂದ್ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಹೆಚ್ಚೆಚ್ಚು ಓಡಾಡುತ್ತಿದ್ದ ತ್ಯಾಪ್ಸಿ ಸದ್ಯಕ್ಕೆ ಬಾಲಿವುಡ್‌ನಲ್ಲಿ ಬಿಡಾರ ಹೂಡಿದ್ದಾರೆ. ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಇನ್ನೂ.. ಮಾಯಾನಗರಿ ಮುಂಬೈನಲ್ಲಿ ಇವರಿಗೆ ಇವರದ್ದೇ ಆದ ಅಭಿಮಾನಿ ಬಳಗ ಇದೆ. ಇವರ ಅಭಿನಯವನ್ನ ಮೆಚ್ಚಿಕೊಳ್ಳುವ ಒಂದು ವರ್ಗ ಇದೆ.

taapsee-pannu-loses-her-cool-shouts-at-a-fan-chasing-her-for-a-selfie

ಇಂಥ ತ್ಯಾಪ್ಸಿ ಪನ್ನು ಇತ್ತೀಚೆಗೆ ಪಬ್ಲಿಕ್‌ ಪ್ಲೇಸ್‌ ನಲ್ಲಿ ಕಾಣಿಸಿಕೊಂಡಿದ್ದರು. ಸಹಜವಾಗಿ ಅಲ್ಲಿ ಕ್ಯಾಮರಾ ಸಮೇತ ಅನೇಕರು ಹಾಜರಿ ಹಾಕಿದ್ದರು. ತ್ಯಾಪ್ಸಿ ಬರುವುದನ್ನೇ ಕಾಯುತ್ತಾ ಕುಳಿತಿದ್ದರು. ಇದೇ ಸಮಯದಲ್ಲಿ ಪ್ರಿಂಟೆಡ್‌ ಲೈಟ್ ಗ್ರೀನ್ ಶರ್ಟ್ ಮತ್ತು ವೈಟ್ ಸ್ಕರ್ಟ್ ಧರಿಸಿ, ಆತುರಾತುರವಾಗಿ ತ್ಯಾಪ್ಸಿ ಬಂದಾಗ ಕ್ಯಾಮರಾಗೋಸ್ಕರ ನಗೆ ಬೀರಿ, ಫೋಸ್ ಕೊಡಿ ಎಂಬ ಮನವಿಯನ್ನ ಅಲ್ಲಿದ್ದವರೆಲ್ಲ ಮಾಡಿದರು.

ಇದರಿಂದ ತ್ಯಾಪ್ಸಿಗೆ ಕಿರಿಕಿರಿ ಆಯಿತಾ ಗೊತ್ತಿಲ್ಲ. ಆದರೆ .. ಫೋಸ್ ಕೊಡುವುದು ಇರಲಿ, ಕ್ಯಾಮರಾ ಕಡೆ ಕಣ್ಣೆತ್ತಿ ಕೂಡ ನೋಡದ ತ್ಯಾಪ್ಸಿಯನ್ನ ಇದೇ ಸಮಯದಲ್ಲಿ ಅಭಿಮಾನಿಯೊರ್ವ ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾನೆ. ಸೆಲ್ಫಿ ಕೇಳಿದ್ದಾನೆ. ಇಷ್ಟಕ್ಕೇ ಕೋಪ ಮಾಡಿಕೊಂಡ ತ್ಯಾಪ್ಸಿ, ದಯಮಾಡಿ ದಾರಿ ಬಿಡಿ ಎಂದು ಹೇಳಿ ಸೀದಾ ತಮ್ಮ ಕಾರನ್ನೇರಿದ್ದಾರೆ. ಆಸೆ ಕಂಗಳಿಂದ ತನ್ನ ನೆಚ್ಚಿನ ನಾಯಕಿಯನ್ನ ನೋಡಲು ಬಂದಿದ್ದ ಅಭಿಮಾನಿಯ ಮುಖವನ್ನೂ ನೋಡದೇ ಕಾರಿನ ಬಾಗಿಲು ಹಾಕಿಕೊಂಡಿದ್ದಾರೆ.

taapsee-pannu-loses-her-cool-shouts-at-a-fan-chasing-her-for-a-selfie

ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ತ್ಯಾಪ್ಸಿ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ. ಕೆಲವರು ತ್ಯಾಪ್ಸಿಯ ಈ ವರ್ತನೆಯನ್ನ ಕಂಡು ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯ್ತು ಎಂದರೆ, ಇನ್ನೂ ಕೆಲವರು ಜಯಾ ಬಚ್ಚನ್ ಜೊತೆ ತ್ಯಾಪ್ಸಿ ಪನ್ನುನ ಹೋಲಿಸುತ್ತಿದ್ದಾರೆ. ಒಂದೆರಡು ಸೆಕೆಂಡ್ ನಿಂತು, ಆ ಅಭಿಮಾನಿಯ ಆಸೆ ಈಡೇರಿಸಿದ್ದರೆ ಭೂಕಂಪವಾಗ್ತಿತ್ತಾ ಎಂದು ಕಿಡಿ ಕಾರುತ್ತಿದ್ದಾರೆ. ವೆರೈಟಿ ವೆರೈಟಿಯಾಗಿ ತ್ಯಾಪ್ಸಿ ಪನ್ನುನ ಟ್ರೋಲ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಚಿತ್ರದ ಬಿಡುಗಡೆ ಸಮಯದಲ್ಲಿ ಮಾತ್ರ ಇವರಿಗೆ ಅಭಿಮಾನಿಗಳು ಬೇಕು, ಉಳಿದ ದಿನ ಕವಡೆ ಕಾಸಿನ ಕಿಮ್ಮತ್ತನ್ನೂ ಇವರೆಲ್ಲ ಕೊಡಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಉಳಿದಂತೆ ತ್ಯಾಪ್ಸಿ ಪನ್ನು ಸದ್ಯಕ್ಕೆ ಇನ್ನೂ ಮದುವೆಯ ಗುಂಗಿನಲ್ಲಿದ್ದಾರೆ. ಸಾಂಸಾರಿಕ ಜೀವನವನ್ನ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಗಳಿಗಿಂತ ವೆಬ್ ಸರಣಿಗಳ ಕಡೆಗೆ ಹೆಚ್ಚೆಚ್ಚು ಗಮನ ಕೊಡುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆ ಅಭಿನಯಿಸಿರುವ ಖೇಲ್ ಖೇಲ್ ಮೇ ಚಿತ್ರದ ಬಿಡುಗಡೆಯನ್ನು ಕೂಡ ಎದುರು ನೋಡುತ್ತಿದ್ದಾರೆ ತ್ಯಾಪ್ಸಿ ಪನ್ನು

More from Filmibeat

English summary
A viral video shows Taapsee Pannu exiting a venue, only to be surrounded by fans clamoring for photos. Visibly annoyed, she shouts "hatt jaiye (please move)." The internet has also responded to the incident.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X