ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಹೊಕ್ಕುಳ ಮೇಲೆ ಫೋಕಸ್ ಜಾಸ್ತಿ, ಪ್ಯಾಡೆಡ್ ಬ್ರಾ* ಧರಿಸೋಕೆ ಹೇಳ್ತಾರೆ- ತಾಪ್ಸಿ
ನಟಿ ತಾಪ್ಸಿ ಪನ್ನು ಮತ್ತೊಮ್ಮೆ ಬಾಲಿವುಡ್ ಹಾಗೂ ಸೌತ್ ಸಿನಿಮಾಗಳ ಬಗ್ಗೆ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಆಕೆ ನಟಿಸಿರುವ 'ಅಸ್ಸಿ' ಎಂಬ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ. ಇದರ ಬೆನ್ನಲ್ಲೇ ಶುಭಂಕರ್ ಮಿಶ್ರಾ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಾಪ್ಸಿ ಪನ್ನು ಮಾತನಾಡಿದ್ದಾರೆ. ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಹಿಂದಿ ಸಿನಿಮಾಗಳಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ತಾಪ್ಸಿ ನಟಿಸಿದ್ದಾರೆ. ಭೋಜ್‌ಪುರಿ ಹಾಗೂ ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಹೊಕ್ಕುಳ ಮೇಲೆ ಏಕೆ ಹೆಚ್ ಫೋಕಸ್ ಮಾಡುತ್ತಾರೆ ಎನ್ನುವ ಪ್ರಶ್ನೆಗೆ ಆಕೆ ಉತ್ತರಿಸಿದ್ದಾರೆ. "ನಾನು ಸಹ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಹಿಂದಿ ಸಿನಿಮಾ ಐಟಂ ಸಾಂಗ್ಸ್‌ನಲ್ಲಿ ಹೊಕ್ಕುಳ ಮೇಲೆ ಹೆಚ್ಚು ಫೋಕಸ್ ಮಾಡಲ್ಲ, ದಕ್ಷಿಣ ಸಿನಿಮಾದಲ್ಲಿರುವಷ್ಟು ಇಲ್ಲ. ಆದರೆ ಹಿಂದಿ ಸಿನಿಮಾಗಳಲ್ಲಿ ನಟಿಯರು ಎದೆಸೀಳು ಹೆಚ್ಚು ತೋರಿಸಲು ಪತ್ನಿಸುತ್ತಾರೆ" ಎಂದು ತಾಪ್ಸಿ ಹೇಳಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ನಟಿ ತಾಪ್ಸಿ ಪನ್ನು ದಕ್ಷಿಣದ ಸಿನಿಮಾಗಳಲ್ಲಿ ನಟಿಸುವಾಗ ಪ್ಯಾಡೆಡ್ ಬ್ರಾ* ಧರಿಸಲು ಹೇಳುತ್ತಾರೆ. ಅದನ್ನು ಹೇಳುವ ರೀತಿ ಹೇಗಿರುತ್ತದೆ ಎನ್ನುವುದನ್ನು ತಮ್ಮ ಅನುಭವದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಸಿನಿಮಾ ಸೆಟ್‌ಗಳಲ್ಲಿ ಕೆಲಸ ಮಾಡುವ ಮಹಿಳೆಯರ ಸಂಖ್ಯೆ ಕಮ್ಮಿ ಇರುತ್ತದೆ. ನಿರ್ದೇಶಕರು ಸೆಟ್‌ನಲ್ಲಿ ಯಾರಿಗೋ ಹೇಳ್ತಾರೆ, ಅವರು ಮತ್ತೊಬ್ಬರಿಗೆ ಕೊನೆಗೆ ಅಸಿಸ್ಟೆಂಟ್‌ಗೆ ಹೇಳಿ, ಅವರು ಬಂದು ಬಳಿ ಹೇಳುವುದು ಬಹಳ ಕಸಿವಿಸಿ ಎನಿಸುತ್ತದೆ ಎಂದು ದೆಹಲಿ ಬೆಡಗಿ ಬೇಸರ ವ್ಯಕ್ತಪಡಿಸಿದ್ದಾರೆ.
ತಾಪ್ಸಿ ಮಾತನಾಡಿ "ಮೊದಲು ನಿರ್ದೇಶಕ ಸಹ ನಿರ್ದೇಶಕನಿಗೆ ಹೇಳುತ್ತಾರೆ. ಆತ ಸ್ಟೈಲಿಂಗ್ ತಂಡಕ್ಕೆ, ಅವರು ಮೇಕಪ್ ಮಾಡುವ ಮಹಿಳೆಯರಿಗೆ ತಿಳಿಸುತ್ತಾರೆ, ಅವ್ರು ಬಂದು ಕೊನೆಗೆ ಈ ನಟಿಗೆ ಹೇಳ್ತಾರೆ. ಸಾಂಗ್ ಶೂಟಿಂಗ್ ವೇಳೆ ಎದ್ದು ಹೋಗಿ ಪ್ಯಾಡೆಡ್ ಬ್ರಾ* ಧರಿಸಿ ಬಂದರೆ ಗೊತ್ತಾಗುತ್ತದೆ. ಅಲ್ಲಿ ಸುತ್ತಾ ಪುರುಷರೇ ಇರ್ತಾರೆ. ವಾಪಸ್ ಬಂದಾಗ ಎಲ್ಲರೂ ನೋಡುವ ರೀತಿ ಹೇಗಿರುತ್ತದೆ ಗೊತ್ತಾ, ಇದು ಎಷ್ಟು ಮುಜುಗರ ಉಂಟುಮಾಡುತ್ತದೆ ಎನ್ನುವುದನ್ನು ಊಹಿಸಿಕೊಳ್ಳಿ" ಎಂದು ನಟಿಯರ ಅಸಹಾಯಕತೆ ಬಗ್ಗೆ ತಿಳಿಸಿದ್ದಾರೆ.
ಸಿನಿಮಾ ಮೇಕಿಂಗ್ ಬಗ್ಗೆ ತಾಪ್ಸಿ ಪನ್ನು ಈ ಹಿಂದೆ ಕೂಡ ಸಾಕಷ್ಟು ಬಾರಿ ಮಾತನಾಡಿದ್ದರು. ತೆಲುಗಿನ ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಬಗ್ಗೆ ಆಕೆಯ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು. ನೆಟ್ಟಿಗರು ಆಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೆ ಅದಕ್ಕೆ ಕ್ಷಮೆ ಕೇಳಿ ತಾಪ್ಸಿ ಪನ್ನು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಅದೇ ಕಾರಣಕ್ಕೆ ಈ ಬಾರಿ ಯಾರ ಹೆಸರು ತೆಗೆದುಕೊಳ್ಳದೇ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಹಾಡಿನ ಚಿತ್ರೀಕರಣದ ವೇಳೆ ಹೊಕ್ಕುಳ ಮೇಲೆ ಹೂವು, ಹಣ್ಣಿನಿಂದ ಹೊಡೆದಿದ್ದರು. ಅದರಿಂದ ನೋವಾಗುತ್ತಿತ್ತು. ನಟಿಯರ ಹೊಕ್ಕುಳ ಮೇಲೆ ಹಣ್ಣಿನಿಂದ ಹೊಡೆದರೆ ಅವರಿಗೆ ಅದೇನು ಸಂತೋಷ ಸಿಗುತ್ತೋ ಗೊತ್ತಿಲ್ಲ. ನನಗಂತೂ ನಗು ಬರ್ತಿತ್ತು. ಮತ್ತೊಂದು ಕಡೆ ನೋವಾಗುತ್ತಿತ್ತು ಎಂದು ತಾಪ್ಸಿ ಹೇಳಿದ್ದರು. ತೆಲುಗಿನ 'ಜುಮ್ಮಂದಿ ನಾದಂ' ಚಿತ್ರದ ಮೂಲಕ ಆಕೆ ಚಿತ್ರರಂಗ ಪ್ರವೇಶಿಸಿದ್ದರು. ಕೆ. ರಾಘವೇಂದ್ರ ರಾವ್ ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.
ರಾಘವೇಂದ್ರ ರಾವ್ ಸಿನಿಮಾ ಗೀತೆಗಳಲ್ಲಿ ರೊಮ್ಯಾಂಟಿಕ್ ಸಾಂಗ್ಸ್ ಇರುತ್ತವೆ. ನಟಿಯರ ಹೊಕ್ಕುಳು ತೋರಿಸುವುದು, ಹೂವು, ಹಣ್ಣುಗಳಿಂದ ಹೊಡೆದು ಹೀಗೆ ಬಹಳ ವಿಶೇಷವಾಗಿ ಹಾಡುಗಳನ್ನು ಅವರು ಸೆರೆಹಿಡಿಯುತ್ತಾರೆ. 'ಜುಮ್ಮಂದಿ ನಾದಂ' ಚಿತ್ರದ ಹಾಡುಗಳಲ್ಲಿ ತಾಪ್ಸಿ ಅವರನ್ನು ಅದೇ ರೀತಿ ತೋರಿಸಿದ್ದರು. ಹಾಗಾಗಿ ಹಿರಿಯ ನಿರ್ದೇಶಕನ ಬಗ್ಗೆಯೇ ತಾಪ್ಸಿ ಆರೋಪಿಸಿದ್ದಾರೆ ಎಂದು ಭಾರೀ ಚರ್ಚೆ ಆಗಿತ್ತು.


Click it and Unblock the Notifications











