'ತಾಪ್ಸಿ ಫೀಮೇಲ್ ಆಯುಷ್ಮಾನ್' ಎಂದ ನಿರ್ಮಾಪಕ: ಮುನಿಸಿಕೊಂಡು ಪ್ರತಿಕ್ರಿಯಿಸಿದ ನಟಿ
ನಟಿ ತಾಪ್ಸಿ ಪನ್ನು ಮತ್ತೊಂದು ಪ್ರಶಸ್ತಿ ಪಡೆದಿದ್ದಾರೆ. 2020 ಸಾಲಿನ ಫಿಲ್ಮ್ ಫೇರ್ ಅತ್ಯುತ್ತಮ ನಟಿ ಕ್ರಿಟಿಕ್ಸ್ ಅವಾರ್ಡ್ ತಾಪ್ಸಿ ಪನ್ನು ಪಡೆದಿದ್ದಾರೆ.
ತಾಪ್ಸಿಗೆ ಶುಭಾಶಯ ತಿಳಿಸಿರುವ ನಿರ್ಮಾಪಕ ತನುಜ್ ಗಾರ್ಗ್, ಅವರನ್ನು ನಟ ಆಯುಷ್ಮಾನ್ ಖುರಾನ್ ಗೆ ಹೋಲಿಕೆ ಮಾಡಿದ್ದಾರೆ. ''ಅಭಿನಂದನೆಗಳು ದಿ ಪವರ್ ಹೌಸ್ ತಾಪ್ಸಿ. ಬಾಲಿವುಡ್ ನ ಫೀಮೇಲ್ ಆಯುಷ್ಮಾನ್ ಖುರಾನ್'' ಎಂದು ಬರೆದು ಶುಭಾಶಯ ತಿಳಿಸಿದ್ದಾರೆ.
ಇದನ್ನು ಗಮನಿಸಿದ ತಾಪ್ಸಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ''ಬಾಲಿವುಡ್ ನ ಮೊದಲ ತಾಪ್ಸಿ ಪನ್ನು ಎಂದು ಕರೆದರೆ ಹೇಗೆ'' ಎಂದಿದ್ದಾರೆ. ಈ ಮೂಲಕ ಬೇರೊಬ್ಬ ನಟನ ಜೊತೆಗೆ ತಮ್ಮನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಈ ಹಿಂದೆಯೂ ಸ್ಟಾರ್ ನಟರ ಜೊತೆಗೆ ತಮ್ಮನ್ನು ಹೋಲಿಕೆ ಮಾಡಿದರೆ, ನಟರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿದರೆ, ತಾಪ್ಸಿ ಅದನ್ನು ವಿರೋಧಿಸಿದ್ದಾರೆ. ಈಗಲೂ ನಿರ್ಮಾಪಕರ ಟ್ವೀಟ್ ಗೆ ಕೊಂಚ ಮುನಿಸಿಕೊಂಡೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ 'ಬದ್ಲಾ' ಚಿತ್ರದ ಚರ್ಚೆಯ ವೇಳೆ ಅಮಿತಾಬ್ ಗಿಂತ ನಾನೇ ಹೆಚ್ಚು ಸಮಯ ಹಾಗೂ ಶ್ರಮವನ್ನು ಆ ಸಿನಿಮಾಗೆ ಹಾಕಿದ್ದೇನೆ ಎಂದು ಹೇಳಿ ವಿವಾದ ಮಾಡಿಕೊಂಡಿದ್ದರು.
ಅಂದಹಾಗೆ, ತಾಪ್ಸಿ ಪನ್ನು ಸದ್ಯ ಬಾಲಿವುಡ್ ನಲ್ಲಿ ತುಂಬ ಬ್ಯುಸಿ ಇರುವ ನಟಿ. ಈ ವರ್ಷ ಅವರು ಐದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications










