ನಿಮ್ಮ ದೇಹ ಪುರುಷರ ಹಾಗಿದೆ; ದೇಹದ ಬಗ್ಗೆ ಕಾಮೆಂಟ್ ಮಾಡಿದವರಿಗೆ ತಾಪ್ಸಿ ಹೇಳಿದ್ದೇನು?

ಬಹುತೇಕ ನಟಿಮಣಿಯರಿಗೆ ಬಾಡಿ ಶೇಮಿಂಗ್ ಅನುಭವ ಆಗಿರುತ್ತದೆ. ಸ್ವಲ್ಪ ದಪ್ಪ ಆದರೆ ತೆಳ್ಳಗೆ ಕಾಣಿಸಿದರೆ ಸಾಕು ನೆಟ್ಟಿಗರು ಹಿಗ್ಗಾಮುಗ್ಗ ಕಾಮೆಂಟ್ ಮಾಡುತ್ತಾರೆ. ಇದೀಗ ನಟಿ ತಾಪ್ಸಿ ಪನ್ನು ಕೂಡ ಇದೇ ರೀತಿಯ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ನೇರ ನುಡಿ ಮತ್ತು ಬೋಲ್ಡ್ ಹೇಳಿಕೆಗಳ ಮೂಲಕ ಎಲ್ಲರ ಮನಗೆದ್ದಿರುವ ನಟಿ ತಾಪ್ಸಿ. ಬಾಲಿವುಡ್‌ನ ಟಾಪ್ ನಟಿಯರ ಸಾಲಿನಲ್ಲಿ ನಿಂತಿರುವ ತಾಪ್ಸಿ ಅಭಿನಂದನೆಗಳನ್ನು ಹೇಗೆ ಸ್ವೀಕರಿಸುತ್ತಾರೋ ಹಾಗೆ ಅವಮಾನಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ.

ಇತ್ತೀಚಿಗಷ್ಟೆ ನಟಿ ತಾಪ್ಸಿ ಪನ್ನು ಫೋಟೋವೊಂದನ್ನು ಶೇರ್ ಮಾಡಿದ್ದರು. ತನ್ನ ಹೊಸ ಸಿನಿಮಾ ರಶ್ಮಿ ರಾಕೆಟ್ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೊದಲು ತಾಪ್ಸಿ ರೇಸಿಂಗ್ ಟ್ರ್ಯಾಕ್ ಧರಿಸಿ ಬೆನ್ನು ತೋರಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಓಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪ್ಸಿ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದಾರೆ. ಸಖತ್ ವರ್ಕೌಟ್ ಮಾಡಿರುವ ತಾಪ್ಸಿ ಕಟ್ಟುಮಸ್ತಾದ ದೇಹದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಫೋಟೋಗೆ ಕೆಲವರು ಕಾಮೆಂಟ್ ಮಾಡಿ ನಿಮ್ಮ ದೇಹ ಗಂಡಸಿನ ದೇಹದ ಹಾಗೆ ಇದೆ ಎಂದು ಹೇಳುತ್ತಿದ್ದಾರೆ. ಅದನ್ನು ತಾಪ್ಸಿ ತುಂಬ ಪಾಸಿಟಿವ್ ಆಗಿ ಸ್ವೀಕರಿಸಿರುವ ತಾಪ್ಸಿ. "ನೀವು ಕಾಮೆಂಟ್​ ಮಾಡಿದ ಈ ಸಾಲನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಮತ್ತು ಸೆಪ್ಟಂಬರ್ 23ರವರೆಗೂ ಕಾಯಿರಿ. ಮುಂಚಿತವಾಗಿ ನಿಮಗೆ ಧನ್ಯವಾದಗಳು. ಇಂಥ ಮಾತುಗಳನ್ನು ಕೇಳಲು ನಾನು ತುಂಬ ಶ್ರಮಪಟ್ಟಿದ್ದೇನೆ" ಎಂದು ತಾಪ್ಸಿ ಪ್ರತಿಕ್ರಿಯೆ ನೀಡಿದ್ದಾರೆ.

Taapsee Pannu reaction on Mard Ki Body comment

ಈ ತಾಪ್ಸಿ ತನ್ನ ಬಹುನಿರೀಕ್ಷೆಯ ಸಿನಿಮಾದ ಟ್ರೈಲರ್ ಸೆಪ್ಟಂಬರ್ 23ಕ್ಕೆ ಬರಲಿದೆ ಎಂಬುದರ ಸುಳಿವು ನೀಡಿದ್ದಾರೆ. ಅಂದಹಾಗೆ ರಶ್ಮಿ ರಾಕೆಟ್ ಚಿತ್ರಕ್ಕೆ ಆಕರ್ಷ್​ ಖುರಾನಾ ನಿರ್ದೇಶನ ಮಾಡಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿರುವ ತಾಪ್ಸಿ ಇದೀಗ ರಶ್ಮಿ ರಾಟೆಕ್ ಮೂಲಕ ಮತ್ತೊಂದು ಅದ್ಬುತ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಸಿನಿಮಾಗಾಗಿ ಸಾಕಷ್ಟು ತಯಾರಿ ನಡೆಸುವ ತಾಪ್ಸಿ ಇದೀಗ ಬಾಲಿವುಡ್‌ನ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಸಿಕ್ಕಾಪಟ್ಟೆ ಚೂಸಿ ಆಗಿರುವ ತಾಪ್ಸಿ ಯಾವ ರೀತಿಯ ಪಾತ್ರಗಳ ಮೂಲಕ ತೆರೆಮೇಲೆ ಬರಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

ಅಂದಹಾಗೆ ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ರಶ್ಮಿ ರಾಕೆಟ್ ಸಿನಿಮಾ ಮುಂದಿನ ತಿಂಗಳು ಅಂದರೆ ಅಕ್ಟೋಬರ್ 15ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಜೀ 5ನಲ್ಲಿ ಸಿನಿಮಾ ತಾಪ್ಸಿ ನಟನೆಯ ರಶ್ಮಿ ರಾಕೆಟ್ ಬಿಡುಗಡೆಯಾಗುತ್ತಿದೆ.

More from Filmibeat

English summary
Bollywood Actress Taapsee Pannu reaction on Mard Ki Body comment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X