For Quick Alerts
  ALLOW NOTIFICATIONS  
  For Daily Alerts

  ''ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲ ಅದಕ್ಕೆ ಕರಣ್ ನನ್ನನ್ನು ಆಹ್ವಾನಿಸಿಲ್ಲ''

  |

  ಕರಣ್ ಜೋಹರ್ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮಾತ್ರವಲ್ಲ ಅಷ್ಟೇ ವಿವಾದಾತ್ಮಕ ವ್ಯಕ್ತಿ ಸಹ ಹೌದು. ನೆಪೊಟಿಸಂ (ಸ್ವಜನ ಪಕ್ಷಪಾತ)ದ ಗುರುವೆಂದೇ ಕರಣ್ ಜೋಹರ್ ಅನ್ನು ಕರೆಯಲಾಗುತ್ತದೆ.

  ನೆಪೊಟಿಸಂ ಅನ್ನು ಕರಣ್ ಜೋಹರ್ ಅಷ್ಟು ಇನ್ಯಾರೂ ಪ್ರೊಮೋಟ್ ಮಾಡಿಲ್ಲ. ಈಗಿರುವ ಬಹುತೇಕ ಸ್ಟಾರ್ ನಟರ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕರಣ್ ಜೋಹರ್. ಅಷ್ಟೇ ಅಲ್ಲ ಅವರ ಬೆಳವಣಿಗಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ ಸಹ.

  ಸ್ಟಾರ್ ನಟರ ಮಕ್ಕಳ ಬಗ್ಗೆ ಅತೀವ ಆಸಕ್ತಿ ಹೊಂದಿರುವ ಕರಣ್, ಯಾವುದೇ ಹಿನ್ನೆಲೆ ಇಲ್ಲದೆ ಸಾಮಾನ್ಯ ಕುಟುಂಬದಿಂದ ಬಾಲಿವುಡ್‌ಗೆ ಬಂದವರ ಬಗ್ಗೆ ತೀವ್ರ ಅಸಡ್ಡೆ ಹೊಂದಿದ್ದಾರೆ. ಅಂಥಹವರಿಗೆ ಸಿನಿಮಾ ನೀಡುವುದಿರಲಿ ಅವರೇ ಹೋಸ್ಟ್ ಮಾಡುವ ಕಾಫಿ ವಿತ್ ಕರಣ್‌ಗೆ ಸಹ ಕರೆಯುವುದಿಲ್ಲ. ನಟಿ ತಾಪ್ಸಿ ಪನ್ನು ಬಾಲಿವುಡ್‌ನ ಜನಪ್ರಿಯ ನಟಿಯಾಗಿದ್ದರೂ ಸಹ ಈ ವರೆಗೆ ಅವರನ್ನು ಕಾಫಿ ವಿತ್‌ಗೆ ಕರಣ್ ಶೋಗೆ ಆಹ್ವಾನಿಸಿಲ್ಲ. ಆ ಬಗ್ಗೆ ತಾಪ್ಸಿ ಇದೀಗ ಖಡಕ್ ಆದ ಉತ್ತರವನ್ನೇ ನೀಡಿದ್ದಾರೆ.

  ತೆಲುಗು ಸಿನಿಮಾದಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ!ತೆಲುಗು ಸಿನಿಮಾದಲ್ಲಿ ಕನ್ನಡದ ನಟ ರಿಷಬ್ ಶೆಟ್ಟಿ!

  ತಾಪ್ಸಿ ಪನ್ನು ತಾವು ನಟಿಸಿರುವ 'ದೊಬಾರಾ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ಕಾಫಿ ವಿತ್ ಕರಣ್‌ಗೆ ಯಾವಾಗ ಹೋಗುತ್ತೀರ ಎಂಬ ಪ್ರಶ್ನೆಯನ್ನು ಪತ್ರಕರ್ತರು ಕೇಳಿದ್ದಾರೆ, ಇದಕ್ಕೆ ಉತ್ತರಿಸಿರುವ ತಾಪ್ಸಿ ಪನ್ನು, ''ನನ್ನ ಸೆಕ್ಸ್ ಲೈಫ್ ಹೆಚ್ಚು ಆಸಕ್ತಿಕರವಾಗಿಲ್ಲ ಹಾಗಾಗಿ ನನ್ನನ್ನು ಕಾಫಿ ವಿತ್ ಕರಣ್ ಶೋಗೆ ಕರೆದಿಲ್ಲ'' ಎಂದಿದ್ದಾರೆ ತಾಪ್ಸಿ ಪನ್ನು.

  ಲೈಂಗಿಕತೆ ಬಗ್ಗೆ ಪ್ರಶ್ನೆ ಕೇಳುವ ಕರಣ್ ಜೋಹರ್

  ಲೈಂಗಿಕತೆ ಬಗ್ಗೆ ಪ್ರಶ್ನೆ ಕೇಳುವ ಕರಣ್ ಜೋಹರ್

  ತಾಪ್ಸಿ ಹೀಗೆ ಉತ್ತರಿಸಲು ಕಾರಣವೂ ಇದೆ. ಕರಣ್ ಜೋಹರ್ ತಮ್ಮ ಕಾಫಿ ವಿತ್ ಕರಣ್ ಶೋನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳುತ್ತಾರೆ. ಈ ಕಾರಣಕ್ಕೆ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದಾರೆ. ನಟ-ನಟಿಯರ ಲೈಂಗಿಕ ಜೀವನದ ಬಗ್ಗೆ ನಿಮಗೆ ಇಷ್ಟು ಆಸಕ್ತಿ ಏಕೆಂದು ಜನ ಹಲವು ಬಾರಿ ಪ್ರಶ್ನೆ ಮಾಡಿದ್ದಾರೆ. ಹಾಗಿದ್ದರೂ ಸಹ ಬಿಡದ ಕರಣ್ ಲೈಂಗಿಕತೆ ಬಗ್ಗೆ ಪ್ರಶ್ನೆಗಳನ್ನು ಮುಂದುವರೆಸಿದ್ದಾರೆ. ಈಗ ಇದೇ ಕಾರಣಕ್ಕೆ ಕರಣ್ ಗೆ ಟಾಂಗ್ ನೀಡಲೆಂದು ತಾಪ್ಸಿ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.

  ಕರೀನಾ ಸೆಕ್ಸ್‌ ಲೈಫ್ ಬಗ್ಗೆ ಕೇಳಿದ್ದ ಕರಣ್

  ಕರೀನಾ ಸೆಕ್ಸ್‌ ಲೈಫ್ ಬಗ್ಗೆ ಕೇಳಿದ್ದ ಕರಣ್

  ಇದೀಗ ಕಾಫಿ ವಿತ್ ಕರಣ್ ಸೀಸನ್ 7 ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದು, ಕಳೆದ ವಾರವಷ್ಟೆ ಕರೀನಾ ಕಪೂರ್ ಹಾಗೂ ಆಮಿರ್ ಖಾನ್‌ರ ಎಪಿಸೋಡ್ ಪ್ರಸಾರವಾಗಿದೆ. ಆ ಎಪಿಸೋಡ್‌ನಲ್ಲಿ ''ಮಕ್ಕಳು ಆದ ಬಳಿಕ ಗುಣಮಟ್ಟದ ಲೈಂಗಿಕತೆಯನ್ನು ಅನುಭವಿಸಲು ಸಾಧ್ಯವಾಗುತ್ತಿದೆಯೇ?'' ಎಂದು ಕರೀನಾ ಕಪೂರ್ ಅನ್ನು ಪ್ರಶ್ನೆ ಮಾಡಿದ್ದಾರೆ ಕರಣ್ ಜೋಹರ್. ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದ ಆಮಿರ್ ಖಾನ್, ''ನಿಮ್ಮ ಅಮ್ಮ ಶೋ ನೋಡುತ್ತಿರುತ್ತಾರೆ ಎನ್ನುತ್ತೀಯ ಹೀಗಿದ್ದಾಗ ಬೇರೆಯವರ ಲೈಂಗಿಕ ಜೀವನದ ಬಗ್ಗೆ ಪ್ರಶ್ನೆ ಕೇಳುವುದು ಸರಿಯೇ?'' ಎಂದಿದ್ದಾರೆ.

  ಹಲವರಿಗೆ ಪ್ರಶ್ನೆ ಮಾಡಿರುವ ಕರಣ್

  ಹಲವರಿಗೆ ಪ್ರಶ್ನೆ ಮಾಡಿರುವ ಕರಣ್

  ಕರೀನಾ ಕಪೂರ್‌ಗೆ ಮಾತ್ರವಲ್ಲ ಈ ಸೀಸನ್‌ನಲ್ಲಿ ಈವರೆಗೆ ಬಂದ ಬಹುತೇಕ ಅತಿಥಿಗಳಿಗೂ ಈ ರೀತಿಯ ಪ್ರಶ್ನೆಗಳನ್ನು ಕರಣ್ ಜೋಹರ್ ಕೇಳಿದ್ದಾರೆ. ವಿಜಯ್ ದೇವರಕೊಂಡ ಅತಿಥಿಯಾಗಿ ಬಂದಾಗಲಂತೂ ಈ ಕುರಿತು ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರು. ನೀವು ಕೊನೆಯದಾಗಿ ಸೆಕ್ಸ್ ನಲ್ಲಿ ತೊಡಗಿಕೊಂಡಿದ್ದು ಯಾವಾಗ? ನೀವು ಮೂವರೊಟ್ಟಿಗೆ ಒಂದೇ ಸಮಯದಲ್ಲಿ ಸೆಕ್ಸ್ ಮಾಡಲು ಇಷ್ಟಪಡುವಿರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಮಾಡಿದ್ದರು. ನಟಿಯರಿಗೂ ಈ ರೀತಿಯ ಪ್ರಶ್ನೆಗಳನ್ನು ಕರಣ್ ಜೋಹರ್ ಮಾಡುತ್ತಾರೆ.

  ಹಲವು ಸಿನಿಮಾಗಳಲ್ಲಿ ತಾಪ್ಸಿ ಪನ್ನು ಬ್ಯುಸಿ

  ಹಲವು ಸಿನಿಮಾಗಳಲ್ಲಿ ತಾಪ್ಸಿ ಪನ್ನು ಬ್ಯುಸಿ

  ಇನ್ನು ನಟಿ ತಾಪ್ಸಿ ಪನ್ನು ಬಾಲಿವುಡ್‌ನ ಫಿಯರ್‌ಲೆಸ್ ನಟಿಯರಲ್ಲಿ ಒಬ್ಬರು. ತಮ್ಮ ಧೈರ್ಯಶಾಲಿ ಹೇಳಿಕೆಗಳಿಂದ ಅವರು ಜನಪ್ರಿಯರು. ಇದೇ ಕಾರಣಕ್ಕೆ ಸಮಸ್ಯೆಯನ್ನೂ ಅವರು ಅನುಭವಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಟೀಕಿಸಿದ್ದು ತಾಪ್ಸಿ ಪನ್ನು ವಿರುದ್ಧ ಐಟಿ ರೇಡ್ ಸಹ ಆಗಿತ್ತು. ಹಾಗಿದ್ದರೂ ಸಹ ಕೇಂದ್ರವನ್ನು ಕ್ರಿಯಾಶೀಲ ಮಾದರಿಯಲ್ಲಿ ಕುಟುಕುತ್ತಲೇ ಇರುತ್ತಾರೆ. ಬಾಲಿವುಡ್‌ನಲ್ಲಿ ತಮ್ಮದೇ ಆದ ಭದ್ರ ಸ್ಥಾನ ಗಿಟ್ಟಿಸಿಕೊಂಡಿರುವ ತಾಪ್ಸಿ ಪನ್ನು, ಇದೀಗ ಶಾರುಖ್ ಖಾನ್ ಜೊತೆಗೆ 'ಡಂಕಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ದೊಬಾರಾ' ಸಿನಿಮಾ ಬಿಡುಗಡೆ ಆಗಲಿಕ್ಕಿದೆ. 'ಬ್ಲರ್', 'ಹಸೀನ್ ದಿಲ್‌ರುಬಾ 2', 'ತಡ್ಕಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Taapsee Pannu replies on not getting inviting her on Koffee with Karan show. She said may be my s*x life is not intrested.
  Monday, August 8, 2022, 10:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X