ಅವಕಾಶ ಬೇಕಂದ್ರೆ ರಾತ್ರಿ 10ರ ಬಳಿಕ 'ಅಲ್ಲಿಗೆ' ಹೋಗಬೇಕು ; ಬಾಲಿವುಡ್ ಮೇಲೆ 'ತ್ಯಾಪ್ಸಿ' ಬಾಂಬ್..!
ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು.ಅಂಥಹದ್ದರಲ್ಲಿ ತನಗೆ ಅನಿಸಿದ್ದನ್ನ ನೇರಾ ನೇರವಾಗಿಯೇ ಹೇಳುವ ಛಾತಿ ಹೊಂದಿರುವವರು ತ್ಯಾಪ್ಸಿ ಪನ್ನು. ಬಾಲಿವುಡ್ ಎಂಬ ಭದ್ರ ಕೋಟೆಯನ್ನ ತನ್ನ ಸ್ವ ಸಾಮರ್ಥ್ಯ ದಿಂದ ಭೇದಿಸಿ ಇವತ್ತು ಹಿಂದಿ ಚಿತ್ರರಂಗದಲ್ಲಿ ನೆಲೆಯೂರಿರುವ ತ್ಯಾಪ್ಸಿ ಬಿಟೌನ್ ನ ಇನ್ನೊಂದು ಮುಖವನ್ನ ಅನಾವರಣ ಮಾಡಿದ್ದಾರೆ. ದೊಡ್ಡ ದೊಡ್ಡವರ ಜೊತೆ ತೆರೆ ಹಂಚಿಕೊಳ್ಳಬೇಕು ಅಂದರೆ ರಾತ್ರಿ ಹತ್ತರ ನಂತರ ಅಲ್ಲಿ ಹೋಗಬೇಕು ಅಂದಿದ್ದಾರೆ.
ಹೌದು. ಇದು ಬಣ್ಣದ ಲೋಕ. ಇಲ್ಲಿ ಎಲ್ಲವೂ ಕಲರ್ ಫುಲ್. ಒಳಗೊಂದು..ಹೊರಗೊಂದು ನುಡಿಯುವ ಜಗತ್ತು ಇದು. ಇಲ್ಲಿ ನಶೆಯಲ್ಲಿ ತೇಲಾಡುವುದು ಮಾಮೂಲು.ತೂರಾಡುವುದು ಕಾಮನ್ನು. ಈ ಸಂಪ್ರದಾಯಕ್ಕೆ ಅಂಟಿಕೊಂಡರೆ ಅವಕಾಶ ಅಂಗೈಯಲ್ಲಿ ಇಲ್ಲವಾದಲ್ಲಿ ಭವಿಷ್ಯ ಪ್ರಭಾವಿಗಳ ಪಾದದಡಿಯಲ್ಲಿ. ತ್ಯಾಪ್ಸಿ ಪನ್ನು ಪರೋಕ್ಷವಾಗಿ ಹೇಳಿರುವುದು ಇದನ್ನೇ.

ಸಂದರ್ಶನವೊಂದರಲ್ಲಿ ಮಾತನಾಡಿರುವ ತ್ಯಾಪ್ಸಿ, ಬಾಲಿವುಡ್ ನ ನೈಟ್ ಔಟ್ ಕಥೆ ಹೇಳಿದ್ದಾರೆ. ಚಿತ್ರರಂಗಕ್ಕೆ ನಾನು ಬಂದಾಗ ಅನೇಕರು, ರಾತ್ರಿ ಹೊತ್ತಲ್ಲಿ ನಡೆಯುವ ಪಾರ್ಟಿಗಳಲ್ಲಿ ಭಾಗಿಯಾಗುವಂತೆ ಸಲಹೆ ತನಗೆ ನೀಡಿದ್ದರು ಅಂದಿದ್ದಾರೆ. ಯಾಕೆಂದರೆ ಈ ಥರ ಮಾಡಿದರೆ ಕಾಂಟ್ಯಾಕ್ಟ್ ಬೆಳೆಯುತ್ತೆ. ಮುಖದ ಪರಿಚಯವೂ ಆಗುತ್ತೆ. ಇನ್ನೂ ಅತಿಯಾದ ಸಲುಗೆಗೆ ಎಂಥಹ ಪವಾಡ ಮಾಡುವ ಶಕ್ತಿಯೂ ಇದೆ. ಹೀಗಾಗಿ ಅನೇಕರು ಬಿಟ್ಟಿ ಉಪದೇಶ ಮಾಡಿದ್ದರು ಎಂದು ತ್ಯಾಪ್ಸಿ ಹೇಳಿದ್ದಾರೆ. There is no alternative to hard work. No short cuts to success ಎಂಬ ದೊಡ್ಡವರ ಮಾತನ್ನೂ ರೀಕಾಲ್ ಮಾಡಿಕೊಂಡಿದ್ದಾರೆ ತ್ಯಾಪ್ಸಿ ಪನ್ನು.
ಈ ಕಾರಣಕ್ಕೆ ತನಗೆ ಹಿನ್ನಡೆಯಾಗಿದೆ ಎಂದು ಇವತ್ತಿಗೂ ಭಾವಿಸುವ ತ್ಯಾಪ್ಸಿ, ಇದೇ ವೇಳೆ ನಾನು ಕುಡಿಯುವುದಿಲ್ಲ. ಸಿಗರೇಟ್ ಸೇದುವುದಿಲ್ಲ. ಅಲ್ಲಿ ಹೋಗಿ ಮಾಡುವುದಾದರೂ ಏನಿದೆ ಎಂಬ ಪ್ರಶ್ನೆ ಕೇಳಿದ್ದಾರೆ. ಅವಕಾಶಗಳಿಗಾಗಿ ಆತ್ಮಸಾಕ್ಷಿಯನ್ನ ನಾನು ಪಣಕ್ಕಿಡಲಾರೆ ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ತ್ಯಾಪ್ಸಿ, ಪಾರ್ಟಿಗಳಲ್ಲಿ ಭಾಗಿಯಾಗುವುದಲ್ಲದೇ, ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಚ್ಯಾಟ್ ಮಾಡುವಂತೆಯೂ ಕೂಡ ನನಗೆ ಅನೇಕರು ಹೇಳಿದ್ದರು, ಆದರೆ ಅದ್ಯಾವುದನ್ನೂ ನಾನು ಮಾಡಲಿಲ್ಲ, ಅದ್ಯಾವುದಕ್ಕೂ ನಾನು ತಲೆಯನ್ನೂ ಕೆಡಿಸಿಕೊಳ್ಳಲಿಲ್ಲ ಅಂದಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ಇಷ್ಟೊಂದು ಸುದೀರ್ಘವಾದ ಪ್ರಯಾಣದಲ್ಲಿ ನಾನು ಏನೆಂದು ಎಲ್ಲರಿಗೂ ಗೊತ್ತು. ಹೀಗಾಗಿಯೇ ಈಗ ನನ್ನ ಯಾರು ಯಾವ ಪಾರ್ಟಿಗೂ ಕರೆಯಲ್ಲ ಎಂದು ತ್ಯಾಪ್ಸಿ ಹೇಳಿದ್ದಾರೆ. ಭವಿಷ್ಯದಲ್ಲಿ ಯಾವತ್ತೂ ಹೋಗಲಾರೆ ಎಂಬ ಭರವಸೆಯನ್ನೂ ನೀಡಿದ್ದಾರೆ.
ತ್ಯಾಪ್ಸಿಯ ಈ ಮಾತುಗಳಿಂದ ಈಗ ಅನೇಕರು ಬಾಲಿವುಡ್ ನ ನಿಯತ್ತು ಹಾಗೂ ಬದ್ದತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಸಹಜವಾಗಿ ಸ್ವಜನಪಕ್ಷಪಾತದ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಕರಣ್ ಜೋಹರ್ ಅವರನ್ನ ಕಟಕಟೆಯಲ್ಲಿ ಮತ್ತೊಮ್ಮೆ ನಿಲ್ಲಿಸಲಾಗಿದೆ. ಪಾತ್ರಕ್ಕಾಗಿ ಇಲ್ಲಿ ಪಲ್ಲಂಗ ಏರಬೇಕು, ಅವಕಾಶಕ್ಕಾಗಿ ಹಾಸಿಗೆ ಹಂಚಿಕೊಳ್ಳಬೇಕು ಇಲ್ಲದೇ ಇದ್ದರೆ ಉಳಿಗಾಲವಿಲ್ಲ ಎಂಬ ಅಭಿಪ್ರಾಯ ಕೂಡ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗ್ತಿದೆ. ತ್ಯಾಪ್ಸಿಯ ಈ ನೇರ ನುಡಿಗಳಿಗೆ ಚಪ್ಪಾಳೆಯ ಸದ್ದು ಕೂಡ ಕೇಳಿ ಬರುತ್ತಿದೆ.


Click it and Unblock the Notifications











