ತೆರೆಮೇಲೆ ಬರುತ್ತಿದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯ ಬಯೋಪಿಕ್
ಬಾಲಿವುಡ್ ನಲ್ಲಿ ಈಗಾಗಲೆ ಸಾಲು ಸಾಲು ಬಯೋಪಿಕ್ ಗಳು ತೆರೆಗೆ ಬರುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಸಿನಿಮಾ ಮಾಡುವುದು ಒಂದು ಟ್ರೆಂಡ್ ಆಗಿದೆ. ಈಗ ಅದೆ ಸಾಲಿಗೆ ಮತ್ತೊಂದು ಬಯೋಪಿಕ್ ಸೇರ್ಪಡೆಯಾಗುತ್ತಿದೆ. ಹೌದು, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಕಥೆಯನ್ನು ತೆರೆಮೇಲೆ ತರುವ ಪ್ಲಾನ್ ಮಾಡಲಾಗುತ್ತಿದೆ.
ಈಗಾಗಲೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತಯಾರಿಗಳು ನಡೆಯುತ್ತಿದೆಯಂತೆ. ಅಂದ್ಹಾಗೆ ಮಿಥಾಲಿ ರಾಜ್ ಪಾತ್ರದಲ್ಲಿ ಬಾಲಿವುಡ್ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚಿಗೆ ನಡೆದ ಸಂದರ್ಶನ ಒಂದರಲ್ಲಿ ಮಾತನಾಡಿದ ತಾಪ್ಸಿ ಈ ಬಗ್ಗೆ ಸುಳಿವು ನೀಡಿದ್ದಾರೆ.
ಮಿಥಾಲಿ ಅವರ ಬಯೋಪಿಕ್ ಗೆ ಕಥೆ ಇನ್ನು ಸಿದ್ಧವಾಗುತ್ತಿದೆ. ಒಂದು ವೇಳೆ ಚಿತ್ರತಂಡ ಆಫರ್ ಮಾಡಿದ್ರೆ ಕಂಡಿತವಾಗಿ ಗ್ರೀನ್ ಸಿಗ್ನಲ್ ನೀಡುವುದಾಗಿ ಹೇಳಿದ್ದಾರೆ. ಅಂದ್ಮೇಲೆ ಮಿಥಾಲಿ ರಾಜ್ ಆಗಿ ಬಣ್ಣ ಹಚ್ಚುವುದು ತಾಪ್ಸಿ ಪಕ್ಕಾ ಎನ್ನು ಮಾತುಗಳು ಹರಿದಾಡುತ್ತಿವೆ.

ಸದ್ಯ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ತಯಾರಾಗುತ್ತಿದೆ. ಅಲ್ಲದೆ ಭಾರತ ಮೊದಲಬಾರಿಗೆ ಕಿಕ್ರೆಟ್ ವಿಶ್ವಕಪ್ ಗೆದ್ದ ಕ್ಷಣ ಕೂಡ ಸಿನಿಮಾವಾಗಿ ತೆರೆ ಮೇಲೆ ಬರುತ್ತಿದೆ. ಇದರ ಜೊತೆಗೀಗ ಮಿಥಾಲಿ ರಾಜ್ ಸಿನಿಮಾ ತಯಾರಾಗುತ್ತಿರುವುದು ಚಿತ್ರಾಭಿಮಾನಿಗಳಿಗೆ ಮತ್ತು ಕ್ರಿಡಾಭಿಮಾನಿಗಳಿಗೆ ಸಂತಸದ ವಿಚಾರ.
ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿ ಮಿಥಾಲಿ ರಾಜ್ ಅವರದ್ದು. ಅಲ್ಲದೆ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಶುರುಮಾಡಿ ಮಿಥಾಲಿ ಸುಮಾರು 20 ವರ್ಷಗಳಾಗಿದೆ. ಸದ್ಯ ಅವರ ಬಯೋಪಿಕ್ ಗೆ ಎಲ್ಲಾ ತಯಾರಿಗಳು ನಡೆಯುತ್ತಿದೆ. ಎಲ್ಲವು ಅಂದುಕೊಂಡಂತೆ ಆದ್ರೆ ಮುಂದಿನ ವರ್ಷ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.


Click it and Unblock the Notifications











