ಬೇಕಿದ್ರೆ ಬಡವಳಾಗಿ ಸಾಯ್ತಿನಿ.. ಆದ್ರೆ ಬಡವಳಾಗಿ ಬದುಕಲ್ಲ, ತನ್ನ ಕುಟುಂಬದ ಬಗ್ಗೆ ತಾಪ್ಸಿ ಪನ್ನು ಜೋಕ್
"ಬಡವನಾಗಿ ಹುಟ್ಟಿದ್ರೆ ಅದು ನಿನ್ನ ತಪ್ಪಲ್ಲ, ಆದ್ರೆ ಬಡವನಾಗಿ ಸತ್ತರೆ ಅದು ಖಂಡಿತ ನಿನ್ನ ತಪ್ಪು" ಎನ್ನುವ ಸ್ಫೂರ್ತಿದಾಯಕ ಮಾತಿದೆ. ಅದೇ ರೀತಿ ಬಡವನಾಗಿ ಸಾಯಬಾರದು, ಇದ್ದಾಗ ಏನಾದರೂ ಸಾಧಿಸಬೇಕು ಎನ್ನುವವರು ಇದ್ದಾರೆ. ಆದರೆ ತಾಪ್ಸಿ ಪನ್ನು ಕೊಂಚ ಭಿನ್ನವಾಗಿ ಆಲೋಚಿಸುತ್ತಾರೆ. ನಾನು ಬಡವಳಾಗಿ ಸತ್ತರೂ ಪರವಾಗಿಲ್ಲ, ಆದ್ರೆ ಬಡವಳಾಗಿ ಬದುಕಲ್ಲ ಎಂದಿದ್ದಾರೆ.
ಇದ್ದಾಗಲೇ ಎಂಜಾಯ್ ಮಾಡಬೇಕು. ಹಣ ಕೂಡಿಟ್ಟು ಏನು ಮಾಡುವುದು, ಹೋಗುವಾಗ ಹೊತ್ತುಕೊಂಡು ಹೋಗ್ತೀವಾ? ಎನ್ನುವ ಅರ್ಥದಲ್ಲಿ ನಟಿ ತಾಪ್ಸಿ ಪನ್ನು ಮಾತನಾಡಿದ್ದಾರೆ. ತನಗೆ ಹೆಚ್ಚು ಹಣ ಖರ್ಚು ಮಾಡುವ ಅಭ್ಯಾಸ ಇದೆ, ದೈನಂದಿನ ಬಯಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಆಕೆ ಹೇಳಿದ್ದಾರೆ. ತಮ್ಮ ಕುಟುಂಬ ಸದಸ್ಯರು ಬಹಳ ಜಿಪುಣರಂತೆ ಬದುಕುತ್ತಾರೆ. ಹಣ ಉಳಿಸಲು ಹೆಚ್ಚು ಪರದಾಡುತ್ತಾರೆ ಎಂದು ನಟಿ ತಾಪ್ಸಿ ಇತ್ತೀಚೆಗೆ Shubhankar Mishra ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ತಮಾಷೆ ಮಾಡಿದ್ದಾರೆ.

ತಾಪ್ಸಿ ಮಾತನಾಡಿ "ನನ್ನ ಕುಟುಂಬದವೆಲ್ಲಾ ಹಣ ಉಳಿಸುವುದರಲ್ಲಿ ರಾಜ ಮತ್ತು ರಾಣಿ ತರ ಇರ್ತಾರೆ. ಹೇಗೆಲ್ಲಾ ಸಾಧ್ಯವಾಗುತ್ತೋ ಆ ರೀತಿಯೆಲ್ಲಾ ಹಣ ಉಳಿಸುತ್ತಾರೆ. ತರಕಾರಿ ವಿಚಾರಕ್ಕೆ ಬಂದರೆ ದೆಹಲಿಯಿಂದ ಮುಂಬೈಗೆ ಹೊರಟರೆ, ಅಲ್ಲೇ ತರಕಾರಿ ಖರೀದಿಸಿ ತರ್ತಾರೆ. ಕಾರಣ ಮುಂಬೈನಲ್ಲಿ ತರಕಾರಿ ಬೆಲೆ ಜಾಸ್ತಿ ಅಲ್ವಾ ಅದಕ್ಕೆ. ತರಕಾರಿಗಳನ್ನು ಚೆಕ್ಡ್ ಲಗೇಜ್‌ನಲ್ಲಿ ಸಾಗಿಸಲಾಗುತ್ತಿದೆ, ಅವು ವಿಮಾನಗಳಲ್ಲಿ ಬರುತ್ತಿವೆ" ಎಂದು ನೆನಪಿಸಿಕೊಂಡಿದ್ದಾರೆ. ಅಪಾರ್ಟ್‌ಮೆಂಟ್‌ನಿಂದ ದೂರದಲ್ಲಿರುವ ಮಾರ್ಕೆಟ್‌ನಲ್ಲಿ ದಿನಸಿ ಖರೀದಿಸಿದರೆ ಉಳಿತಾಯ ಆಗುತ್ತದೆ ಎಂದು ಭಾವಿಸುವುದಾಗಿ ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಸಿನಿಮಾ ಮೇಕಿಂಗ್ ಬಗ್ಗೆ ತಾಪ್ಸಿ ಪನ್ನು ಇತ್ತೀಚೆಗೆ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅದೇನೋ ಗೊತ್ತಿಲ್ಲ ದಕ್ಷಿಣದ ಸಿನಿಮಾಗಳಲ್ಲಿ ನಟಿಯರ ಹೊಕ್ಕುಳ ಮೇಲೆ ಹೆಚ್ಚು ಫೋಕಸ್ ಮಾಡ್ತಾರೆ. ಪ್ಯಾಡೆಡ್ ಬ್ರಾ* ಧರಿಸೋಕೆ ಹೇಳ್ತಾರೆ. ಚಿತ್ರೀಕರಣದ ವೇಳೆ ಇದು ಇರಿಸುಮುರಿಸು ತರಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಪರ, ವಿರೋಧ ಚರ್ಚೆ ನಡೆದಿತ್ತು. ನಟಿ ಜ್ಯೋತಿ ಪೂರ್ವಜ್ ಮಾತನಾಡಿ ಇಷ್ಟವಿಲ್ಲದಿದ್ದರೆ ಸಿನಿಮಾದಲ್ಲಿ ನಟಿಸುವುದು ಬಿಟ್ಟು ಬೇರೆ ಕೆಲಸ ಮಾಡಿಕೊಂಡು ಇರಬಹುದಲ್ಲ ಎಂದು ತಾಪ್ಸಿಗೆ ತಿರುಗೇಟು ನೀಡಿದ್ದರು.
ತೆರೆಮೇಲೆ ಈಗ ತಾಪ್ಸಿ ಮ್ಯಾಜಿಕ್ ನಡೀತಿಲ್ಲ. ಇತ್ತೀಚೆಗೆ ಆಕೆ ನಟಿಸಿದ್ದ 'ಅಸ್ಸಿ' ಎಂಬ ಸಿನಿಮಾ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅಂದಾಜು 40 ಕೋಟಿ ರೂ. ಬಜೆಟ್ ಸಿನಿಮಾ 10 ಕೋಟಿ ಗಳಿಸಲು ತಿಣುಕಾಡುವಂತಾಗಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತಾಪ್ಸಿ ಪನ್ನು ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ತಮಗೆ ಮೋದಿ ಅಚ್ಚುಮೆಚ್ಚು ಎಂದು ಬಹಳ ವಿಡಂಬನಾತ್ಮಕವಾಗಿ ಆಕೆ ಹೇಳಿದ್ದು ವೈರಲ್ ಆಗಿತ್ತು. ಈ ಬಗ್ಗೆ ಪರ ವಿರೋಧ ಚರ್ಚೆ ನಡೆಯಿತು. 'ಟಿವಿ9 ಭಾರತ್‌ವರ್ಷ' ದ ಚರ್ಚಾ ಕಾರ್ಯಕ್ರಮದಲ್ಲಿ ತಾಪ್ಸಿ ಭಾಗವಹಿಸಿದ್ದರು. ರ್ಯಾಪಿಡ್ ಫೈರ್ ರೌಂಡ್‌ನಲ್ಲಿ ನಿಮ್ಮ ನೆಚ್ಚಿನ ರಾಜಕಾರಣಿ ಯಾರು..? ಪ್ರಧಾನಿ ನರೇಂದ್ರ ಮೋದಿ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಫೋಟೊವನ್ನು ತೋರಿಸಲಾಗಿತ್ತು.
ನಿರೂಪಕನ ಪ್ರಶ್ನೆಗೆ ಕೈ ಮುಗಿದು ನರೇಂದ್ರ ಮೋದಿ ಎಂದು ತಾಪ್ಸಿ ಪನ್ನು ಪ್ರತಿಕ್ರಿಯಿಸಿದ್ದರು. ಬಳಿಕ 'ನನಗೆ ಈ ದೇಶದಲ್ಲಿ ಇನ್ನೂ ಬದುಕುವ ಆಸೆಯಿದೆ' ಎಂದು ಮಾರ್ಮಿಕವಾಗಿ ಹೇಳಿದ್ದರು. ಪ್ರಧಾನಿ ಮೋದಿ ಅವರನ್ನು ಎದುರು ಹಾಕಿಕೊಂಡು ದೇಶದಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವ ಅರ್ಥದಲ್ಲಿ ತಾಪ್ಸಿ ಮಾತನಾಡಿದ್ರಾ? ಅಥವಾ ಅಭಿಮಾನದಿಂದ ಹೀಗೆ ಹೇಳಿದ್ರಾ? ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯಿತು.


Click it and Unblock the Notifications











