For Quick Alerts
  ALLOW NOTIFICATIONS  
  For Daily Alerts

  ಹಿಂದಿ ಮಾತಾಡಿ ಎಂದ ಪತ್ರಕರ್ತನ ಬಾಯಿ ಮುಚ್ಚಿಸಿದ ನಟಿ ತಾಪ್ಸಿ ಪನ್ನು

  |
  ಡ್ರೆಸ್ ಜಾರಿದ್ದಕ್ಕೆ ನೆಟ್ಟಿಗರಿಂದ ಟ್ರೋಲ್ ಗೆ ಒಳಗಾದ ನಟಿ ಮಲೈಕಾ ಅರೋರಾ | FILMIBEAT KANNADA

  ಹಿಂದಿ ಹೇರಿಕೆ ಮಾಡಬೇಡಿ, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎನ್ನುವ ಕೂಗು ಆಗಾಗ ಕೇಳಿ ಬರುತ್ತದೆ. ಆದರೂ ಹಿಂದಿ ಮಾತನಾಡಿ ಎನ್ನುವ ಒತ್ತಡ ಕೆಲವು ಬಾರಿ ಬರುತ್ತದೆ. ಇದೀಗ ನಟಿ ತಾಪ್ಸಿ ಪನ್ನುಗೆ ಹಿಂದಿ ಮಾತನಾಡಬೇಕು ಎನ್ನುವ ಒತ್ತಡವನ್ನು ಪತ್ರಕರ್ತರೊಬ್ಬರು ಹೇರಿದ್ದಾರೆ.

  ನಟಿ ತಾಪ್ಸಿ ಪನ್ನು ಇತ್ತೀಚಿಗಷ್ಟೆ 50ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದರು. ಆಗ ಪತ್ರಕರ್ತರೊಬ್ಬರು ನೀವು ಹಿಂದಿಯಲ್ಲಿ ಮಾತನಾಡಬೇಕು ಎಂದು ಬೇಡಿಕೆ ಇಟ್ಟರು.

  ಸ್ವಿಮ್‌ ಡ್ರೆಸ್‌ನಲ್ಲಿ ಮಿರಮಿರ ಮಿಂಚಿದ ತಾಪ್ಸಿ ಪನ್ನು!ಸ್ವಿಮ್‌ ಡ್ರೆಸ್‌ನಲ್ಲಿ ಮಿರಮಿರ ಮಿಂಚಿದ ತಾಪ್ಸಿ ಪನ್ನು!

  ತಾಪ್ಸಿ ಪನ್ನು ಸೌತ್ ಚಿತ್ರರಂಗದಿಂದ ಬಾಲಿವುಡ್ ಚಿತ್ರರಂಗಕ್ಕೆ ಹೋಗಿದ್ದಾರೆ. ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ. ಗೋವಾದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ಅವರು ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದರು. ಆಗ ಹಿಂದಿ ಮಾತನಾಡಿ ಎಂದ ಪತ್ರಕರ್ತರಿಗೆ ಸರಿಯಾದ ಉತ್ತರ ನೀಡಿ, ಬಾಯಿ ಮುಚ್ಚಿಸಿದ್ದಾರೆ.

  ನೀವು ಹಿಂದಿಯಲ್ಲಿಯೇ ಮಾತನಾಡಬೇಕು

  ನೀವು ಹಿಂದಿಯಲ್ಲಿಯೇ ಮಾತನಾಡಬೇಕು

  ಗೋವಾದಲ್ಲಿ ನಡೆಯುತ್ತಿರುವ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಇಂಗ್ಲಿಷ್ ನಲ್ಲಿ ತಾಪ್ಸಿ ಪನ್ನು ತಮ್ಮ ಮಾತು ಶುರು ಮಾಡಿದರು. ಆಗ ಪತ್ರಕರ್ತರೊಬ್ಬರು ನೀವು ಹಿಂದಿಯಲ್ಲಿ ಮಾತನಾಡಬೇಕು. ನೀವು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತೀರಿ, ಬಾಲಿವುಡ್ ನಾಯಕಿ ಆಗಿದ್ದೀರಿ ಹಾಗಾಗಿ ಹಿಂದಿಯಲ್ಲಿಯೇ ಮಾತನಾಡಬೇಕು ಎಂದು ಒತ್ತಡ ಹೇರಿದರು.

  ಯಾರಿಗೆ ಹಿಂದಿ ಅರ್ಥ ಆಗುವುದಿಲ್ಲ?

  ಯಾರಿಗೆ ಹಿಂದಿ ಅರ್ಥ ಆಗುವುದಿಲ್ಲ?

  ಆ ವ್ಯಕ್ತಿಯ ಮಾತಿನ ನಂತರ, 'ಇಲ್ಲಿ ಯಾರು ಯಾರಿಗೆ ಹಿಂದಿ ಅರ್ಥ ಆಗುತ್ತದೆ?' ಎಂದು ತಾಪ್ಸಿ ಕೇಳಿದರು. ಅಧಿಕ ಸಂಖ್ಯೆಯ ಜನರು ನಮಗೆ ಹಿಂದಿ ಅರ್ಥ ಆಗುವುದಿಲ್ಲ ಎಂಬ ಪ್ರತಿಕ್ರಿಯೆ ನೀಡಿದರು. ಆದರೂ ಆ ಪತ್ರಕರ್ತ ನೀವು ಹಿಂದಿ ಸಿನಿಮಾಗಳಲ್ಲಿ ನಟನೆ ಮಾಡುತ್ತೀರಿ, ಬಾಲಿವುಡ್ ನಾಯಕಿ ಆಗಿದ್ದೀರಿ ಹೀಗಾಗಿ ಹಿಂದಿ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಹೇಳಿದ.

  'ಸೊಂಟದ ವಿಷ್ಯ ಬೇಡವೊ ಶಿಷ್ಯ' ಎಂದ ನಟಿ ತಾಪ್ಸಿ ಪನ್ನು!'ಸೊಂಟದ ವಿಷ್ಯ ಬೇಡವೊ ಶಿಷ್ಯ' ಎಂದ ನಟಿ ತಾಪ್ಸಿ ಪನ್ನು!

  ನಾನು ತಮಿಳು, ತೆಲುಗು ಚಿತ್ರಗಳನ್ನು ಮಾಡಿದ್ದೇನೆ

  ನಾನು ತಮಿಳು, ತೆಲುಗು ಚಿತ್ರಗಳನ್ನು ಮಾಡಿದ್ದೇನೆ

  ನಂತರ ಆ ಪತ್ರಕರ್ತರಿಗೆ ತಾಪ್ಸಿ ಪನ್ನು ತಮ್ಮ ಮಾತಿನ ಮೂಲಕ ಬಾಯಿ ಮುಚ್ಚಿಸಿದರು. ನಾನು ಹಿಂದಿ ಮಾತ್ರವಲ್ಲ, ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದೇನೆ. ಆಗಿದ್ದ ಮೇಲೆ ನಾನು ತಮಿಳು ಭಾಷೆಯಲ್ಲಿ ಮಾತನಾಡಲೇ ಎಂದು ಪ್ರಶ್ನೆ ಮಾಡಿದರು. ತಾಪ್ಸಿ ಮಾತು ಕೇಳಿ ಕಾರ್ಯಕ್ರಮ ಇದ್ದ ಉಳಿದ ಪ್ರೇಕ್ಷಕರೆಲ್ಲರೂ ಶ್ಲಾಘಿಸಿದರು. ಆಗ ಆ ವ್ಯಕ್ತಿ ಏನು ಮಾತನಾಡಲು ಆಗಲಿಲ್ಲ.

  ಸೌತ್ ಸಿನಿಮಾಗಳ ಬಗ್ಗೆ ತಾಪ್ಸಿ ಮಾತು

  ಸೌತ್ ಸಿನಿಮಾಗಳ ಬಗ್ಗೆ ತಾಪ್ಸಿ ಮಾತು

  ನಂತರ ಸೌತ್ ಚಿತ್ರರಂಗದ ಬಗ್ಗೆ ಮಾತನಾಡಿದ ತಾಪ್ಸಿ ಪನ್ನು, ತಾನು ಬಾಲಿವುಡ್ ಗೆ ಹೋಗಬೇಕು ಎನ್ನುವ ದೃಷ್ಟಿಯಿಂದ ಸೌತ್ ಚಿತ್ರರಂಗವನ್ನು ಬಳಸಿಕೊಂಡಿಲ್ಲ. ತಾನು ಈಗಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುತ್ತೇನೆ. ಸದ್ಯ ಜಯಂ ರವಿ ನಟನೆಯ ಸಿನಿಮಾದಲ್ಲಿ ತಾಪ್ಸಿ ನಾಯಕಿ ಆಗಿದ್ದಾರೆ. ಮುಂದೆಯೂ ಸೌತ್ ಸಿನಿಮಾಗಳನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

  Face App ಅಲ್ಲ ಸಿನಿಮಾದ ಪಾತ್ರಕ್ಕಾಗಿ ಬದಲಾಗಿದ್ದಾರೆ ತಾಪ್ಸಿFace App ಅಲ್ಲ ಸಿನಿಮಾದ ಪಾತ್ರಕ್ಕಾಗಿ ಬದಲಾಗಿದ್ದಾರೆ ತಾಪ್ಸಿ

  English summary
  Actress Taapsee Pannu shoots down a man who asks her to speak in Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X