twitter
    For Quick Alerts
    ALLOW NOTIFICATIONS  
    For Daily Alerts

    ತಾಪ್ಸಿ ಪನ್ನು, ಅನುರಾಗ್ ಕಶ್ಯಪ್ ಸಿನಿಮಾ 'ದೋಬಾರಾ'ಗೆ ಶಾಕ್: ಸಿನಿಮಾ ಚೆನ್ನಾಗಿದ್ರೂ ನೋಡುತ್ತಿಲ್ಲ!

    |

    ಬಾಲಿವುಡ್ ಬಾಯ್‌ಕಾಟ್ ಕಲ್ಚರ್‌ ಸುಳಿಗೆ ಸಿಕ್ಕ ಸಿನಿಮಾಗಳು ಸೋಲುತ್ತಿವೆ. ಇದು ಬಾಲಿವುಡ್ ಮಂದಿಯ ನಿದ್ದೆ ಕೆಡಿಸಿದ್ದು ಸುಳಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸುತ್ತಿರುವ ಈ ಟ್ರೆಂಡ್‌ಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಟಕ್ಕರ್ ಕೊಟ್ಟಿದ್ದರು.

    ಅನುರಾಗ್ ಕಶ್ಯಪ್ ನಿರ್ದೇಶಿಸಿರೋ 'ದೋಬಾರಾ' ಸಿನಿಮಾದ ಪ್ರಚಾರದ ವೇಳೆ ಇದೇ ಬಾಯ್‌ಕಾಟ್ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಇಬ್ಬರೂ ತಮ್ಮ ಸಿನಿಮಾವನ್ನು ಬಾಯ್‌ಕಾಟ್ ಮಾಡಿ ಅಂತ ವ್ಯಂಗ್ಯವಾಡಿದ್ದರು. ಈ ಮೂಲಕ ಬಾಯ್‌ಕಾಟ್ ಅಭಿಯಾನವನ್ನು ವಿರೋಧಿಸಿದ್ದರು. ಹೀಗಾಗಿ 'ದೋಬಾರಾ' ಸಿನಿಮಾಗೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ನಿರೀಕ್ಷೆಯಿತ್ತು.

    Dobara Movie Review: ಅನುರಾಗ್-ತಾಪ್ಸಿ ಮಿಂಚಿನ ಹೊಡೆತDobara Movie Review: ಅನುರಾಗ್-ತಾಪ್ಸಿ ಮಿಂಚಿನ ಹೊಡೆತ

    'ದೋಬಾರಾ' ಸಿನಿಮಾಗೆ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿವೆ. ಅನುರಾಗ್ ಕಶ್ಯಪ್ ಹಾಗೂ ತಾಪ್ಸಿ ಪನ್ನು ಸಿನಿಮಾ ಬಗ್ಗೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಾಪ್ಸಿ ಪನ್ನು ಅಭಿನಯ ಹಾಗೂ ಅನುರಾಗ್ ಕಶ್ಯಪ್ ನಿರ್ದೇಶನವನ್ನು ಹಾಡಿ ಹೊಗಳಿದ್ದರು. ಸಿನಿಮಾ ಚೆನ್ನಾಗಿ ಇದ್ದರೂ, ಮೊದಲ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

    'ದೋಬಾರಾ' ಪ್ರತಿಕ್ರಿಯೆ ಹೇಗಿದೆ?

    'ದೋಬಾರಾ' ಪ್ರತಿಕ್ರಿಯೆ ಹೇಗಿದೆ?

    ತಾಪ್ಸಿ ಪನ್ನು ಅಭಿನಯದ 'ದೋಬಾರಾ' 2018ರಲ್ಲಿ ತೆರೆಕಂಡಿದ್ದ 'ಮಿರಾಜ್' ಅನ್ನೋ ಸ್ಪಾನಿಷ್ ಸಿನಿಮಾದ ರಿಮೇಕ್. ಅನುರಾಗ್‌ ಕಶ್ಯಪ್ ಈ ಸಿನಿಮಾವನ್ನು ನಿರ್ದೇಶಿಸಿದರೆ, ತಾಪ್ಸಿ ಪನ್ನು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಫಸ್ಟ್ ಡೇ ಫಸ್ಟ್ ಶೋನೇ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾಗೆ ಪಾಸಿಟಿವ್ ರಿವ್ಯೂ ಸಿಕ್ಕಿದರೂ, ಸಿನಿಮಾ ನೋಡುವುದಕ್ಕೆ ಜನರು ಬರುತ್ತಿಲ್ಲ. ನಿರಂತರ ಪ್ರಚಾರ ಮಾಡಿದ್ದರೂ 'ದೋಬಾರಾ'ಗೆ ಬಾಕ್ಸಾಫೀಸ್‌ನಲ್ಲಿ ಪ್ರತಿಕ್ರಿಯೆ ಸಿಕ್ಕಿಲ್ಲ.

    ಶೇ.2-3ರಷ್ಟು ಭರ್ತಿ

    ಶೇ.2-3ರಷ್ಟು ಭರ್ತಿ

    ತಾಪ್ಸಿ ಪನ್ನು ಹಾಗೂ ಪವೈಲ್ ಗುಲಾಟಿ ಇಬ್ಬರ 'ದೋಬಾರಾ' ಸಿನಿಮಾ ಒಳ್ಳೆ ರಿವ್ಯೂ ಸಿಕ್ಕಿದ್ದರೂ, ಪ್ರೇಕ್ಷಕರು ಬರುತ್ತಿಲ್ಲ. ತಾಪ್ಸಿ ಪನ್ನು ಪರ್ಫಾಮೆನ್ಸ್‌ಗೆ ಮೆಚ್ಚುಗೆ ಗಳಿಸಿದ್ದರೂ, ನೋಡುಗರಲ್ಲಿ ಕುತೂಹಲ ಕೆರಳಿಸಲು ಸೋತಿದೆ. ಮೂಲಗಳ ಪ್ರಕಾರ, ಮೊದಲ ದಿನವೇ 'ದೋಬಾರಾ' ಶೇ.2 ರಿಂದ 3 ರಷ್ಟು ಮಾತ್ರ ಥಿಯೇಟರ್ ತುಂಬಿದೆ. ಅಲ್ಲದೆ ಫಸ್ಟ್ ಡೇ ನೇ ಈ ಸಿನಿಮಾದ ಕೆಲವು ಶೋಗಳನ್ನು ಕ್ಯಾನ್ಸಲ್ ಮಾಡಿರುವ ಬಗ್ಗೆನೂ ವರದಿಯಾಗಿದೆ.

    ಫಸ್ಟ್ ಡೇ ಅಂದಾಜು ಕಲೆಕ್ಷನ್

    ಫಸ್ಟ್ ಡೇ ಅಂದಾಜು ಕಲೆಕ್ಷನ್

    'ದೋಬಾರಾ' ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆನೂ ಟ್ರೇಡ್ ಅನಲಿಸ್ಟ್‌ಗಳಲ್ಲಿ ಒಳ್ಳೆಯ ಅಭಿಪ್ರಾಯವಿಲ್ಲ. ಅವರ ಪ್ರಕಾರ ಬಾಕ್ಸಾಫೀಸ್‌ನಲ್ಲಿ ಮೊದಲ ದಿನ ಕೇವಲ 20 ರಿಂದ 35 ಲಕ್ಷ ಹಣ ಕಲೆಹಾಕಿರಬಹುದು ಎಂದು ಅಂದಾಜಿಸಲಾಗಿದ. ಅಲ್ಲದೆ ಲೈಫ್ ಟೈಮ್ ಕಲೆಕ್ಷನ್ ಸುಮಾರು 1.25 ಕೋಟಿ ರೂ. ಇಂದ 1.50 ಕೋಟಿ ರೂ ಗಳಿಸಿದರೆ ಹೆಚ್ಚು ಎಂದು ಹೇಳುತ್ತಿದ್ದಾರೆ. ಹೀಗಾಗಿ ಅನುರಾಗ್ ಕಶ್ಯಪ್ ಸಿನಿಮಾಗೆ ಅದ್ಭುತ ರೆಸ್ಪಾನ್ ಸಿಕ್ಕಿದರೂ ಸೋಲಿನ ರುಚಿ ನೋಡಬೇಕಿದೆ. ಇದಕ್ಕೆಲ್ಲಾ ಬಾಲಿವುಡ್‌ ಅನ್ನು ಸಮರ್ಥಿಸಿಕೊಂಡಿದ್ದೇ ಕಾರಣನಾ ಅನ್ನೋ ಚರ್ಚೆಯಾಗಿದೆ.

    'ದೋಬಾರಾ' ಸೋಲಿಗೆ ಏನು ಕಾರಣ?

    'ದೋಬಾರಾ' ಸೋಲಿಗೆ ಏನು ಕಾರಣ?

    ಕೆಲವು ದಿನಗಳಿಂದ ತಾಪ್ಸಿ ಪನ್ನು ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ ಬಾಲಿವುಡ್ ಸಿನಿಮಾದ ಬಾಯ್‌ಕಾಟ್‌ ಅಭಿಯಾನದ ಬಗ್ಗೆ ಕಿಡಿಕಾರಿದ್ದರು. ಮಾಧ್ಯಮಗಳೊಂದಿಗೆ ಮಾತಾಡುವಾಗ " ದಯವಿಟ್ಟು ನಮ್ಮ ಸಿನಿಮಾವನ್ನೂ ಬಾಯ್‌ಕಾಟ್ ಮಾಡಿ. ಆಮಿರ್ ಖಾನ್ ಸಿನಿಮಾ ಲಾಲ್ ಸಿಂಗ್ ಚಡ್ಡ ಹಾಗೂ ಅಕ್ಷಯ್ ಕುಮಾರ್ ರಕ್ಷಾ ಬಂಧನ್ ಜೊತೆ ನಾವೂ ಸೇರಿಕೊಳ್ಳಬೇಕಿದೆ." ಎಂದು ಇಬ್ಬರೂ ಹೇಳಿಕೆ ನೀಡಿದ್ದರು. ಇದು ನೀರಸ ಪ್ರತಿಕ್ರಿಯೆಗೆ ಕಾರಣನಾ? ಅನ್ನೋ ಅನುಮಾನವಿದೆ. ಆದರೂ, ಮೌತ್ ಟಾಕ್ ಮೂಲಕ ವೀಕೆಂಡ್‌ನಲ್ಲಿ ಜನ ಬಂದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲೋದು ಗ್ಯಾರಂಟಿ.

    English summary
    Taapsee Pannu Starrer Dobaaraa Has Reportedly Registered 2-3 per cent Occupancy On Day 1, Know More.
    Saturday, August 20, 2022, 9:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X