For Quick Alerts
  ALLOW NOTIFICATIONS  
  For Daily Alerts

  ಬ್ಯಾಟಿಂಗ್‌ಗೆ ಇಳಿದ ತಾಪ್ಸಿ: 'ಶಭಾಷ್' ಎಂದ ನೆಟ್ಟಿಗರು

  |

  ನಟಿ ತಾಪ್ಸಿ ಪನ್ನು ತಮ್ಮನ್ನು ತಾವು ಭಿನ್ನ-ಭಿನ್ನ ಪಾತ್ರಗಳಿಗೆ ಒಡ್ಡಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲಿಯೂ ಮಹಿಳಾ ಪ್ರಧಾನ ಸಿನಿಮಾಗಳಿಗೆ ತಾಪ್ಸಿ ಪ್ರಾಶಸ್ತ್ಯ ನೀಡುವುದು ಹೆಚ್ಚು.

  ಇದೀಗ, ಕ್ರಿಕೆಟ್‌ ಕತೆಯನ್ನು ಹೊಂದಿರುವ ಸಿನಿಮಾ ಒಪ್ಪಿಕೊಂಡಿರುವ ತಾಪ್ಸಿ, ಮೊದಲ ದಿನದ ಶೂಟಿಂಗ್‌ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬ್ಯಾಟ್ ಹಿಡಿದು, ಹೆಲ್ಮೆಟ್ ಧರಿಸಿ ಪಿಚ್‌ಗೆ ತೆರಳುತ್ತಿರುವ ತಾಪ್ಸಿ ಅವರ ಚಿತ್ರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

  'ಶಭಾಷ್ ಮಿಥು' ಸಿನಿಮಾದಲ್ಲಿ ತಾಪ್ಸಿ ಪನ್ನು ನಟಿಸಲಿದ್ದಾರೆ. ಈ ಸಿನಿಮಾ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮಿಥಾಲಿ ರಾಜ್ ಜೀವನ ಕುರಿತಾದದ್ದಾಗಿದೆ.

  ಹೆಲ್ಮೆಟ್ ಧರಿಸಿ ಪಿಚ್‌ಗೆ ಹೋಗುತ್ತಿರುವ ತಮ್ಮದೇ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತಾಪ್ಸಿ ಪನ್ನು, 'ಮೊದಲ ದಿನದ ಶೂಟಿಂಗ್, ಶಾಭಾಷ್ ಮಿಥು' ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾವನ್ನು ರಾಹುಲ್ ಡೊಲಾಕಿಯಾ ನಿರ್ದೇಶನ ಮಾಡಲಿದ್ದಾರೆ.

  ಕ್ರೀಡಾ ಸಂಬಂಧಿ ಕತೆಯುಳ್ಳ ಎರಡು ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ಈಗಾಗಲೇ ನಟಿಸಿದ್ದಾರೆ. ಶೂಟಿಂಗ್ ಕತೆಯುಳ್ಳ 'ಸಾಂಡ್‌ ಕಿ ಆಂಖ್' ಹಾಗೂ ಅಥ್ಲೆಟಿಕ್ಸ್‌ ಬಗ್ಗೆ ಕತೆಯುಳ್ಳ 'ರಶ್ಮಿ ರಾಕೆಟ್' ಸಿನಿಮಾದಲ್ಲಿ ತಾಪ್ಸಿ ನಟಿಸಿದ್ದಾರೆ. 'ರಶ್ಮಿ ರಾಕೆಟ್' ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ.

  ಇನ್ನುಳಿದಂತೆ ನಟಿ ತಾಪ್ಸಿ ಪನ್ನುಗೆ ಇತ್ತೀಚೆಗಷ್ಟೆ ಅತ್ಯುತ್ತಮ ನಟಿ ಫಿಲಂಫೇರ್ ಪ್ರಶಸ್ತಿ ನೀಡಲಾಗಿದೆ. 'ತಪ್ಪಡ್' ಸಿನಿಮಾದಲ್ಲಿನ ಅವರ ಅತ್ಯುತ್ತಮ ನಟನೆ ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

  ತಾಪ್ಸಿ ಪನ್ನು ಕೈಲಿ ಹಲವಾರು ಸಿನಿಮಾಗಳಿವೆ. ರಶ್ಮಿ ರಾಕೆಟ್ ಚಿತ್ರೀಕರಣ ಮುಗಿಸಿರುವ ತಾಪ್ಸಿ ಇದೀಗ 'ಶಭಾಷ್ ಮಿಥು' ಸಿನಿಮಾದಲ್ಲಿ ತೊಡಗಿದ್ದಾರೆ, ಜೊತೆಗೆ ಅನುರಾಗ್ ಕಶ್ಯಪ್ ನಿರ್ದೇಶನದ 'ದೊ ಬಾರಾ' ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ನಂತರ 'ಹಸೀನ್ ದಿಲ್‌ರುಬಾ', 'ವೋ ಲಡ್ಕಿ ಹೇ ಕಹಾ', 'ಲೂಪ್ ಲುಪೇಟಾ', 'ತಡ್ಕಾ', ವಿಜಯ್ ಸೇತುಪತಿ ಜೊತೆಗೆ 'ಅನ್ನಾಬೆಲ್ಲಾ ಸುಬ್ರಹ್ಮಣಿಯನ್' ಸಿನಿಮಾಗಳಲ್ಲಿ ನಟಿಸಲಿದ್ದಾರೆ.

  ಸೈಕಲ್ ನಲ್ಲಿ ಬಂದು ವೋಟ್ ಹಾಕಿ ಮೋದಿಗೆ ಟಾಂಗ್ ಕೊಟ್ಟ ವಿಜಯ್ | Filmibeat Kannada
  English summary
  Taapsee Pannu started shooting for movie Shabaash Mithu. Movie is biopic of women cricketer Mithali Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X