ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ಅರೆಬೆತ್ತಲೆ ಚಿತ್ರ: ತಪ್ಪೇನು ಎಂದ ತಾಪ್ಸಿ

ತನಗೆ ಅನ್ನಿಸಿದ್ದನ್ನು ಹೇಳಲು ಹಿಂದೆ ಸರಿಯುವುದಿಲ್ಲ ನಟಿ ತಾಪ್ಸಿ ಪನ್ನು. ರಾಜಕಾರಣವಾಗಲಿ, ಪ್ರಚಲಿತ ವಿದ್ಯಮಾನವಾಗಲಿ, ಮಹಿಳಾ ಸ್ವಾತಂತ್ರ್ಯ, ಟ್ರೋಲಿಂಗ್ ಯಾವುದರ ಬಗ್ಗೆಯೇ ಆಗಲಿ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯ ದಾಖಲಿಸುತ್ತಾರೆ ತಾಪ್ಸಿ ಪನ್ನು.

ಬಿಕಿನಿ ಅಥವಾ ಗಿಡ್ಡ ಉಡುಗೆಗಳನ್ನು ತೊಟ್ಟು ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಾಕಿದಾಗ ಅದಕ್ಕೆ ಎದುರಾಗುತ್ತಿರುವ ವಿರೋಧ, ಮೂದಲಿಕೆಗಳ ಬಗ್ಗೆ ನಟಿ ತಾಪ್ಸಿ ಪನ್ನು ಮಾತನಾಡಿದ್ದಾರೆ. ಉತ್ತರಾಖಂಡ್‌ನ ಬಿಜೆಪಿ ಸಿಎಂ ತೀರತ್ ಸಿಂಗ್ ರಾವತ್ ಅವರು 'ರಿಪ್ಡ್ ಜೀನ್ಸ್' ಬಗ್ಗೆ ಮಾತನಾಡಿದ ಬೆನ್ನಲ್ಲೇ ತಾಪ್ಸಿ ಮಹಿಳೆಯರ ಉಡುಪಿನ ಬಗ್ಗೆ ಮಾತನಾಡಿರುವುದು ತಾಪ್ಸಿ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ.

ಮಹಿಳೆಯರು, ಮುಖ್ಯವಾಗಿ ನಟಿಯರು ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ ಅವರಿಗೆ ಎದುರಾಗುವ ಟ್ರೋಲ್‌ಗಳ ಬಗ್ಗೆ ಮಾತನಾಡಿದ ತಾಪ್ಸಿ, 'ಅದೇ ಪುರುಷರು ತಮ್ಮ ಅರೆಬೆತ್ತಲೆ ಚಿತ್ರವನ್ನು ಪೋಸ್ಟ್ ಮಾಡಿದಾಗ ಅವರನ್ನೇಕೆ ಟ್ರೋಲ್ ಮಾಡಲಾಗುವುದಿಲ್ಲ' ಎಂದು ಪ್ರಶ್ನಿಸಿದ್ದಾರೆ.

Taapsee Pannu Talks About Bikini Pictures Of Women On Social Media

'ಪುರುಷರು ಸಹ ಜಿಮ್‌ಗಳಿಗೆ ಹೋದಾಗ, ಬೀಚ್‌ಗಳಿಗೆ ಹೋದಾಗ ಚಿಕ್ಕ ಚಡ್ಡಿಗಳನ್ನು ಹಾಕಿಕೊಂಡು ತೆಗೆಸಿಕೊಂಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಆದರೆ ಅವರನ್ನು ಯಾರೂ ಪ್ರಶ್ನೆ ಮಾಡುವುದಿಲ್ಲ. ಅದೇ ಮಹಿಳೆಯೊಬ್ಬರು ಬಿಕಿನಿ ಚಿತ್ರವನ್ನು ಹಾಕಿದ ಕೂಡಲೇ ಆಕೆಯ ಮೇಲೆ ಮುಗಿಬೀಳುತ್ತಾರೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ತಾಪ್ಸಿ.

'ಜುಡ್ವಾ2' ಸಿನಿಮಾದಲ್ಲಿ ನಟಿಸಿದ್ದ ತಾಪ್ಸಿ, ಆ ಸಿನಿಮಾದಲ್ಲಿ ಬಿಕಿನಿ ಧರಿಸಿದ್ದರು. ಅದರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಚಿತ್ರದ ಬಗ್ಗೆ ಹಲವರು ಟ್ರೋಲ್ ಮಾಡಿದ್ದರು. 'ನಮ್ಮ ದೇಶದಲ್ಲಿ ಎಲ್ಲದಕ್ಕೂ ಸ್ವಾತಂತ್ರ್ಯವಿದೆ, ತೊಟ್ಟಿರುವ ಆ ಎರಡು ತುಂಡು ಬಟ್ಟೆಯನ್ನೂ ತೆಗೆದುಬಿಡು. ನಿನ್ನ ಅಣ್ಣ ಈ ಚಿತ್ರವನ್ನು ನೋಡಿದ್ದರೆ ಬಹಳ ಹೆಮ್ಮೆ ಪಡುತ್ತಿದ್ದ' ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದರು.

Recommended Video

Kangana Ranaut ಗೂ ಮುಂಚೆ ಹೆಚ್ಚು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ನಟಿಯರು ಯಾರ್ಯಾರು? | Filmibeat Kannada

ಇದಕ್ಕೆ ಉತ್ತರಿಸಿದ್ದ ತಾಪ್ಸಿ, ' ನೀವು ಹೇಳಿದಂತೆ ಅಭಿಪ್ರಾಯ ಕೇಳಲು ನನಗೆ ಅಣ್ಣ ಇಲ್ಲ, ಸಹೋದರಿ ಇದ್ದಾಳೆ ಅವಳಿಗೆ ಈ ನನ್ನ ಬಿಕಿನಿ ಚಿತ್ರ ನೋಡಿ ಏನೆನ್ನಿಸಿತು ಎಂದು ತಿಳಿದುಕೊಂಡು ಹೇಳುತ್ತೇನೆ' ಎಂದು ಪ್ರತಿಕ್ರಿಯೆ ನೀಡಿದ್ದರು.

More from Filmibeat

English summary
Actress Taapsee Pannu talks about trolling on bikini pictures of women on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X