ಸಿನಿಮಾರಂಗದಲ್ಲಿ ಎಲ್ಲ ನಟಿಯರು ಎದುರಿಸುವ ಸನ್ನಿವೇಶಗಳು, ಮಾತುಗಳಿವು

ಭಾರತೀಯ ಸಿನಿಮಾ ರಂಗ ಪುರುಷ ಪ್ರಧಾನವಾದುದು ಎಂಬುದರಲ್ಲಿ ಅನುಮಾನವೇ ಇಲ್ಲ. ಸಿನಿಮಾ ರಂಗದಲ್ಲಿ ಪುರುಷರದ್ದೇ ಪ್ರಾಬಲ್ಯ. ನಟಿಯರಿಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯ ಅವರಿಗೆ ಸಿಗುತ್ತಿಲ್ಲ.

ಸಿನಿಮಾರಂಗದಲ್ಲಿ ನಟಿಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ, ಈಗಲೂ ಎದುರಿಸುತ್ತಿದ್ದಾರೆ. ಮೀ ಟೂ ಅಭಿಯಾನ ನಟಿಯರ ಸಂಕಷ್ಟವನ್ನು ಪರಿಹರಿಸಲು ಹೆಚ್ಚಿಗೆ ಸಫಲವಾಗಲಿಲ್ಲ.

ನಟಿಯರು ಸಿನಿಮಾರಂಗದಲ್ಲಿ ಸಾಮಾನ್ಯವಾಗಿ ಎದುರಿಸುವ ಪ್ರಶ್ನೆಗಳು, ಮಾತುಗಳ ಬಗ್ಗೆ ನಟಿ ತಾಪ್ಸಿ ಪನ್ನು ಮಾತನಾಡಿದ್ದಾರೆ. ಬಹುತೇಕ ಅವರ ಸ್ವ-ಅನುಭವವನ್ನೇ ತಾಪ್ಸಿ ಹಂಚಿಕೊಂಡಿದ್ದಾರೆ. ತಾಪ್ಸಿ ಮಾತುಗಳು ಕೇಳಿದರೆ ಗೊತ್ತಾಗುತ್ತದೆ, ನಟಿಯರಿಗೆ ಸಿನಿಮಾ ರಂಗದಲ್ಲಿ ಎಷ್ಟು ಕಡಿಮೆ ಪ್ರಾಶಸ್ತ್ಯ ನೀಡಲಾಗುತ್ತದೆ ಎಂದು.

'ನಟಿ ತಾನೆ ಯಾರನ್ನು ಬೇಕಾದರೂ ಹಾಕಿಕೊಳ್ಳೋಣ ಬಿಡಿ'

'ನಟಿ ತಾನೆ ಯಾರನ್ನು ಬೇಕಾದರೂ ಹಾಕಿಕೊಳ್ಳೋಣ ಬಿಡಿ'

ನಟಿ ತಾಪ್ಸಿ ಪನ್ನು ಹೇಳಿರುವಂತೆ, ಸಿನಿಮಾ ನಟಿಯರು ಸಾಮಾನ್ಯವಾಗಿ ಕೇಳುವ ಮಾತುಗಳು, ಪ್ರಶ್ನೆಗಳು ಇಂತಿವೆ: 'ಓಹ್ ಆಕೆ ನಟಿಯಲ್ಲವೆ, ಯಾರನ್ನಾದರೂ ಹಾಕಿಕೊಳ್ಳೋಣ ಬಿಡಿ, ಯಾರ ಡೇಟ್ಸ್ ಇವೆಯೋ ಅವರನ್ನು ಹಾಕಿಕೊಳ್ಳಿ ಅಷ್ಟೆ'. ನಟಿಯಾಗಲು ಹೆಚ್ಚಿಗೇನು ಬೇಕಿಲ್ಲ, ನೋಡಲು ಅಂದವಾಗಿದ್ದರೆ ಸಾಕು. ಸ್ವಲ್ಪ ಡಾನ್ಸ್ ಬಂದುಬಿಟ್ಟರೆ ಮುಗಿಯಿತು'.

'ನಾಯಕನಿಗೆ 50 ಆಗಿದ್ದರೇನಾಯಿತು, ನಾಯಕಿಗೆ ವಯಸ್ಸಾಗಿರಬಾರದಷ್ಟೆ'

'ನಾಯಕನಿಗೆ 50 ಆಗಿದ್ದರೇನಾಯಿತು, ನಾಯಕಿಗೆ ವಯಸ್ಸಾಗಿರಬಾರದಷ್ಟೆ'

'ಆಕೆ ನಾಯಕಿ ಅಷ್ಟೆ. ಸಿನಿಮಾ ನಡೆಯುವುದು ನಾಯಕನಿಂದ. ಜನ ಬರುವುದು ನಾಯಕನನ್ನು ನೋಡಲು. ನಾಯಕನಿಂದಾಗಿಯೇ ಸಿನಿಮಾ ಬಜೆಟ್ ನಿರ್ಧಾರವಾಗುತ್ತದೆ. ಗೆಲುವು-ಸೋಲು ನಿರ್ಧಾರವಾಗುತ್ತದೆ. ನಾಯಕಿ ಮುಖ್ಯವೇ ಅಲ್ಲ'. 'ನಾಯಕಿ 25 ವರ್ಷದವಳು, ನಾಯಕ 45 ವರ್ಷದವನಾಗಿದ್ದರೆ ಏನು? ಸ್ವಲ್ಪ ಮೇಕಪ್ ಮಾಡಿದರೆ ಎಲ್ಲ ಸರಿ ಹೋಗುತ್ತದೆ. ಆದರೆ ನಾಯಕಿಗೆ ಹೆಚ್ಚು ವಯಸ್ಸಾಗಿರಬಾರದು ಅಷ್ಟೆ'. 'ಸಾರಿ, ನಾಯಕನಿಗೆ ಹೆಚ್ಚು ಬಜೆಟ್ ಮೀಸಲಿಟ್ಟಿದ್ದೇವೆ. ನಿಮಗೆ ಹೆಚ್ಚು ಸಂಭಾವನೆ ನೀಡಲಾಗುವುದಿಲ್ಲ'.

'ಬದಲಾವಣೆ ಮಾಡುವ ಮುನ್ನ ನಿನಗೆ ತಿಳಿಸಬೇಕಿತ್ತೆ?'

'ಬದಲಾವಣೆ ಮಾಡುವ ಮುನ್ನ ನಿನಗೆ ತಿಳಿಸಬೇಕಿತ್ತೆ?'

'ಅಯ್ಯೋ ಆಕೆ ಐಟಂ ಸಾಂಗ್ಸ್ ಮಾಡಿದ್ದಾಳೆ, ಆಕೆಯನ್ನು ನಾಯಕಿಯನ್ನಾಗಿ ಹೇಗೆ ಹಾಕಿಕೊಳ್ಳಲು ಸಾಧ್ಯ?'. 'ಏನು ನಿನ್ನನ್ನು ಕೇಳಿ ಚಿತ್ರಕತೆ ಬದಲಾವಣೆ ಮಾಡಬೇಕಿತ್ತೆ. ನಾವು ನಾಯಕ ನಟನೊಂದಿಗೆ ಮಾತನಾಡಿ ಬದಲಾವಣೆ ಮಾಡಿದ್ದೇವೆ. ನಿನ್ನೊಂದಿಗೆ ಮಾತನಾಡುವುದು ಮುಖ್ಯ ಎನಿಸಲಿಲ್ಲ'.

'ಮದುವೆ ಆದರೆ ನಾಯಕಿ ಪಾತ್ರಗಳು ಸಿಗುವುದಿಲ್ಲ''ಆ ನಟಿ ಸ್ವಲ್ಪ ದಪ್ಪ ಆಗಿದ್ದಳು ಹಾಗಾಗಿ ಆಕೆಯನ್ನು ತೆಗೆದು ಹಾಕಿದೆವು. ನಟಿಯರು ದಪ್ಪ ಇದ್ದರೆ ಚೆನ್ನಾಗಿ ಕಾಣುವುದಿಲ್ಲ'. 'ಮದುವೆ ಆಗುತ್ತಿಲ್ಲ ತಾನೆ. ಮದುವೆ ಆದರೆ ಬೇರೆಯತರಹದ ಪಾತ್ರಗಳು, ಬೇರೆ ತರಹದ ಸಿನಿಮಾಗಳು ಸಿಗುತ್ತವೆ. ನಾಯಕಿ ಪಾತ್ರದಲ್ಲಿ ಇನ್ನುಮುಂದೆ ನಟಿಸುವಂತಿಲ್ಲ. ಇನ್ನುಮುಂದೆ ಅತ್ತಿಗೆ, ಅಕ್ಕನ ಪಾತ್ರಗಳನ್ನು ಮಾಡಬೇಕಾಗುತ್ತದೆ. ನಟರಿಗೆ ಇದು ಅನ್ವಯಿಸುವುದಿಲ್ಲ'.

'ಮದುವೆ ಆದರೆ ನಾಯಕಿ ಪಾತ್ರಗಳು ಸಿಗುವುದಿಲ್ಲ''ಆ ನಟಿ ಸ್ವಲ್ಪ ದಪ್ಪ ಆಗಿದ್ದಳು ಹಾಗಾಗಿ ಆಕೆಯನ್ನು ತೆಗೆದು ಹಾಕಿದೆವು. ನಟಿಯರು ದಪ್ಪ ಇದ್ದರೆ ಚೆನ್ನಾಗಿ ಕಾಣುವುದಿಲ್ಲ'. 'ಮದುವೆ ಆಗುತ್ತಿಲ್ಲ ತಾನೆ. ಮದುವೆ ಆದರೆ ಬೇರೆಯತರಹದ ಪಾತ್ರಗಳು, ಬೇರೆ ತರಹದ ಸಿನಿಮಾಗಳು ಸಿಗುತ್ತವೆ. ನಾಯಕಿ ಪಾತ್ರದಲ್ಲಿ ಇನ್ನುಮುಂದೆ ನಟಿಸುವಂತಿಲ್ಲ. ಇನ್ನುಮುಂದೆ ಅತ್ತಿಗೆ, ಅಕ್ಕನ ಪಾತ್ರಗಳನ್ನು ಮಾಡಬೇಕಾಗುತ್ತದೆ. ನಟರಿಗೆ ಇದು ಅನ್ವಯಿಸುವುದಿಲ್ಲ'.

'ಆ ನಟಿ ಸ್ವಲ್ಪ ದಪ್ಪ ಆಗಿದ್ದಳು ಹಾಗಾಗಿ ಆಕೆಯನ್ನು ತೆಗೆದು ಹಾಕಿದೆವು. ನಟಿಯರು ದಪ್ಪ ಇದ್ದರೆ ಚೆನ್ನಾಗಿ ಕಾಣುವುದಿಲ್ಲ'. 'ಮದುವೆ ಆಗುತ್ತಿಲ್ಲ ತಾನೆ. ಮದುವೆ ಆದರೆ ಬೇರೆಯತರಹದ ಪಾತ್ರಗಳು, ಬೇರೆ ತರಹದ ಸಿನಿಮಾಗಳು ಸಿಗುತ್ತವೆ. ನಾಯಕಿ ಪಾತ್ರದಲ್ಲಿ ಇನ್ನುಮುಂದೆ ನಟಿಸುವಂತಿಲ್ಲ. ಇನ್ನುಮುಂದೆ ಅತ್ತಿಗೆ, ಅಕ್ಕನ ಪಾತ್ರಗಳನ್ನು ಮಾಡಬೇಕಾಗುತ್ತದೆ. ನಟರಿಗೆ ಇದು ಅನ್ವಯಿಸುವುದಿಲ್ಲ'.

'ನಾಯಕನಿಗೆ ನೀವು ಯಾಕೋ ಸರಿಬರಲಿಲ್ಲ, ಅದಕ್ಕೆ ತೆಗೆದೆವು'

'ನಾಯಕನಿಗೆ ನೀವು ಯಾಕೋ ಸರಿಬರಲಿಲ್ಲ, ಅದಕ್ಕೆ ತೆಗೆದೆವು'

'ಹೌದು, ನಾವು ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿದ್ದೆವು. ಆದರೆ ನಾಯಕ ನಟನೊಂದಿಗೆ ಚರ್ಚೆ ಮಾಡಿದೆವು, ಅವರಿಗೆ ನೀವು ಯಾಕೋ ಸರಿಬರಲಿಲ್ಲ. ಅದಕ್ಕೆ ನಿಮ್ಮನ್ನು ಬಿಟ್ಟು ಬೇರೆಯವರನ್ನು ತೆಗೆದುಕೊಳ್ಳುತ್ತಿದ್ದೇವೆ'. 'ನೀನು ಹೀಗೆ ಅನಿಸಿದ್ದನ್ನು ನೇರವಾಗಿ ಹೇಳಿದರೆ ಹಲವರು ಹರ್ಟ್ ಆಗುತ್ತಾರೆ. ಆ ಮೇಲೆ ಸಿನಿಮಾಗಳ ಅವಕಾಶ ಸಿಗುವುದಿಲ್ಲ. ಇನ್ನು ಮುಂದೆ ಹುಷಾರಾಗಿ ಮಾತನಾಡು'.

Recommended Video

ಕಬ್ಜ ಚಿತ್ರತಂಡ ಸೇರಿಕೊಂಡ ಕನ್ನಡದ ಯುವ ನಟ | Filmibeat Kannada
'ಅವಳಿಗೆ ಸತತವಾಗಿ ಸಿನಿಮಾ ಸಿಗುತ್ತವೆ, ಏನೋ ಕತಾಮತ್ತು ಮಾಡಿದ್ದಾಳೆ?'

'ಅವಳಿಗೆ ಸತತವಾಗಿ ಸಿನಿಮಾ ಸಿಗುತ್ತವೆ, ಏನೋ ಕತಾಮತ್ತು ಮಾಡಿದ್ದಾಳೆ?'

'ಏನು, ಸಿನಿಮಾದ ಪೋಸ್ಟರ್‌ನಲ್ಲಿ ನಿನ್ನ ಚಿತ್ರ ಇರಬೇಕೆ? ದೊಡ್ಡ ಹೀರೋ, ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾಗಾಗಿ ಆತನ ಚಿತ್ರವನ್ನಷ್ಟೆ ಪೋಸ್ಟರ್‌ನಲ್ಲಿ ಹಾಕಲಾಗಿದೆ'. 'ಅವಳಿಗೆ ಸತತವಾಗಿ ಸಿನಿಮಾಗಳು ಸಿಗುತ್ತಿವೆ. ಏನೋ ಕರಾಮತ್ತು ನಡೆಸಿದ್ದಾಳೆ'. 'ಅವಳು ಅದು ಹೇಗೆ ಈ ಸಿನಿಮಾ ಬೇಡ ಎಂದಳು. ಇಷ್ಟು ದೊಡ್ಡ ನಟ, ದೊಡ್ಡ ಸಂಸ್ಥೆ. ಇದಕ್ಕಿಂತಲೂ ಹೆಚ್ಚಾಗಿ ಅವಳಿಗೆ ಕತೆ ಬೇಕಾಗಿತ್ತಂತೆ'.

More from Filmibeat

English summary
Actress Taapsee Pannu talks about common statements which heroines hear in movie industry all the time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X